ಬಳ್ಳಾರಿ: ಭಾರತದ ಸಾಂಸ್ಕೃತಿಕ ವೈಭವವನ್ನು ಮರಳಿ ಸ್ಥಾಪಿಸಲು ನಾವೆಲ್ಲ ಶ್ರಮಿಸಬೇಕು. ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮವನ್ನು ಮುಂದಿನ ದಿನಗಳವರೆಗೆ ಕೊಂಡೊಯ್ಯುವ ಕರ್ತವ್ಯ ಕಾಲವಿದು. ಇಂಥ ಅಮೃತ ಕಾಲದಲ್ಲಿ ಈ ವರ್ಷ ಭಾರತ ಜಿ20 ಅಧ್ಯಕ್ಷತೆ ಹೊಂದಿದೆ. ಈ ಮೂಲಕ ಜಗತ್ತಿನ ಎಲ್ಲ ದೇಶಗಳೆದುರು ದೇಶದ ಮಹತ್ವ ತೋರಿಸುವ ಕಾಲ ಬಂದಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಹೇಳಿದರು.
ವಿಜಯನಗರ ಶ್ರೀಕೃಷ್ಣದೇವರಾಯರ ಹೆಸರಿನಲ್ಲಿ ವಿದ್ಯಾರ್ಜನೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ವಿವಿಯ ಸ್ಥಾಪನೆ ಆಗಿದೆ. ಸ್ಥಾಪನೆಯ ಆಶಯಕ್ಕೆ ತಕ್ಕಂತೆ ಶೈಕ್ಷಣಿಕ ಅನುಸಂಧಾನ, ಸಮರ್ಪಕ ಶಿಕ್ಷಣ ನೀಡಿಕೆ, ಸಮಾಜದ ವಿಕಾಸ, ಜ್ಞಾನಾರ್ಜನೆಗೆ ಪೂರಕವಾಗಿ ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ, ಮರಣೋತ್ತರವಾಗಿ ಬಹದ್ದೂರ್ ಶೇಷಗಿರಿರಾವ್, ವೀರಭದ್ರಪ್ಪ ಹಾಗೂ ಡಾ.ಜಾಳಿಯವರಿಗೆ ಗೌರವ ಡಾಕ್ಟರೇಟ್ ಮತ್ತು ವಿವಿಧ ವಿಭಾಗಗಳ ಪದವಿ, ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳನ್ನು ರಾಜ್ಯಪಾಲರು ಅಭಿನಂದಿಸಿದರು.
ದೇಶದ ಅಭಿವೃದ್ಧಿಯಲ್ಲಿ ನಿಮ್ಮ ಪಾಲಿರಲಿ ಎಂದು ಹಾರೈಸುವೆ. ವಿದ್ಯಾರ್ಥಿಗಳ ಇಂದಿನ ಸಾಧನೆಯಲ್ಲಿ ಶಿಕ್ಷಕ, ಉಪನ್ಯಾಸಕರು ಹಾಗು ಕುಟುಂಬದ ಪಾತ್ರವಿದೆ. ಇದಕ್ಕೆ ಪ್ರತಿಯಾಗಿ ವಿದ್ಯಾರ್ಥಿಗಳು ಕೃತಜ್ಞರಾಗಿರಬೇಕು ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ: ಭಾರತವನ್ನು ವಿಶ್ವ ಗುರುವನ್ನಾಗಿ ಮಾಡಬೇಕು: ರಾಜ್ಯಪಾಲ ಗೆಹ್ಲೋಟ್