ಬಳ್ಳಾರಿ: ಕ್ರೇಜಿಸ್ಟಾರ್ ರವಿಚಂದ್ರನ್ ದ್ವಿತೀಯ ಪುತ್ರ ವಿಕ್ರಮ್ ಅಭಿನಯದ ಚೊಚ್ಚಲ ಸಿನಿಮಾ ತ್ರಿವಿಕ್ರಮ ಇದೇ ಜೂನ್ 24 ರಂದು ಬಿಡುಗಡೆಯಾಗಲಿದೆ. ಸದ್ಯ ಚಿತ್ರದ ಪ್ರಚಾರದಲ್ಲಿ ತೊಡಗಿರುವ ಚಿತ್ರತಂಡ, ಇಂದು ಗಣಿ ನಾಡು ಬಳ್ಳಾರಿಯಲ್ಲಿ ಚಿತ್ರದ ಪ್ರಚಾರ ನಡೆಸಿದೆ. ಬಳ್ಳಾರಿಯ ಪ್ರತಿಷ್ಠಿತ ವಶಿಷ್ಠ ಪಿಯು ಕಾಲೇಜ್‌ನಲ್ಲಿ ಪ್ರಚಾರ ನಡೆಸಿದ್ದು, ಚಿತ್ರದ ನಾಯಕ ವಿಕ್ರಮ ವಿದ್ಯಾರ್ಥಿಗಳೊಂದಿಗೆ ಕುಣಿದು ಕುಪ್ಪಳಿಸಿದರು.
ನಂತರ ಮಾಧ್ಯಮದವರೊಂದಿಗೆ ನಟ ವಿಕ್ರಮ್ ಮಾತನಾಡಿ, ಚಿತ್ರದಲ್ಲಿ ಆರು ಹಾಡುಗಳು ಇವೆ. ಸ್ಥಳೀಯ ಹುಡುಗನೊಬ್ಬ ಜೈನ ಸಮುದಾಯಕ್ಕೆ ಸೇರಿದ ಶ್ರೀಮಂತರ ಹುಡುಗಿಯನ್ನು ಪ್ರೀತಿಸುವ ಕಥೆ. ಯುವಜನ ಹಾಗೂ ಕುಟುಂಬ ವರ್ಗದ ಪ್ರೇಕ್ಷಕರನ್ನು ಸೆಳೆಯುವಂತೆ ನಿರ್ದೇಶಕರು ಕಥೆ ಕಟ್ಟಿದ್ದಾರೆ. ನನ್ನ ತಂದೆ ರವಿಚಂದ್ರನ್ ಅವರಿಗೆ ಕೊಟ್ಟಿರುವ ಅಗಾಧ ಪ್ರೀತಿಯನ್ನು ಜನ ನನಗೂ ನೀಡುತ್ತಾರೆ ಎಂಬ ಭರವಸೆ ಇದೆ. ಮೊದಲ ಚಿತ್ರದಲ್ಲಿ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡು ಶಕ್ತಿ ಮೀರಿ ತೊಡಗಿಸಿಕೊಂಡಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ :ಮಾಸ್, ಕ್ಲಾಸ್, ಕಾಮಿಡಿ & ಫ್ಯಾಮಿಲಿಸಮೇತ ಸಾಲು ಸಾಲು ಸಿನಿಮಾಗಳು: ಹಬ್ಬ ಮಾಡಿ!