ETV Bharat / state

ಗಣಿನಾಡಿನ ದೇಗುಲಗಳಲ್ಲಿ ಭಕ್ತರ ಕೊರತೆ... ಸಾಮಾಜಿಕ ಅಂತರದ ಮಾರ್ಕ್​ಗಳು ಖಾಲಿ ಖಾಲಿ !!

ಬಳ್ಳಾರಿ ನಗರದ ಕೋಟೆ ಮಲ್ಲೇಶ್ವರ ಸ್ವಾಮಿಯ ದರ್ಶನಕ್ಕೆ ಕೇವಲ ಬೆರಳೆಣಿಕೆಯಷ್ಟು ಭಕ್ತರು ಮಾತ್ರ ಆಗಮಿಸಿದ್ದರು. ಬೆಳಗಿನ ಜಾವ ಪೂಜಾರ್ಚನೆ ಮಾಡಿದ ಅರ್ಚಕರು ಈ ದಿನ ದೇಗುಲಗಳು‌ ಶುರುವಾದ ಸಂತಸದಲ್ಲಿದ್ದರು. ಆದರೆ ಭಕ್ತರಿಲ್ಲದೇ ದೇಗುಲಗಳು ಮೌನವಾಗಿರುವುದು ಕಂಡು ಬಂದಿತು.

bellary temple
ಗಣಿನಾಡಿನ ದೇಗುಲಗಳಲ್ಲಿ ಕಾಡುತ್ತಿದೆ ಭಕ್ತರ ಕೊರತೆ
author img

By

Published : Jun 8, 2020, 2:01 PM IST

ಬಳ್ಳಾರಿ : ಲಾಕ್​ಡೌನ್​ ಸಡಿಲಿಕೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ದೇಗುಲಗಳು ಓಪನ್​ ಆಗಿವೆ. ಆದರೆ ಬಹುತೇಕ ದೇವಸ್ಥಾನಗಳಲ್ಲಿ ಭಕ್ತರ ಕೊರತೆ ಎದ್ದು ಕಾಣುತ್ತಿದೆ.

ದೇಗುಲಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮಾರ್ಕ್​ಗಳನ್ನ ಹಾಕಿದ್ರೂ ಭಕ್ತರು ಮಾತ್ರ ದೇಗುಲಗಳತ್ತ ಸುಳಿಯಲಿಲ್ಲ. ದೇಗುಲಗಳಿಗೆ ಬರುವ ಭಕ್ತರಿಗಾಗಿ ಬೆಳ್ಳಂಬೆಳಗ್ಗೆ ಪೂಜಾ ವಿಧಿ ವಿಧಾನಗಳನ್ನು ಕೈಗೊಂಡು ಆಯಾ ದೇಗುಲಗಳ ಅರ್ಚಕರು ಕಾದು‌ ಕುಳಿತಿದ್ದರು. ಸೋಮವಾರ ದಿನವಾದ ಇಂದು ನಿರೀಕ್ಷಿತ ಪ್ರಮಾಣದಲ್ಲಿ ಭಕ್ತರು ದೇಗುಲಗಳಿಗೆ ಬಾರದ ಹಿನ್ನೆಲೆ ದೇಗುಲಗಳು ಬಿಕೋ ಎನ್ನುತ್ತಿವೆ.

ಗಣಿನಾಡಿನ ದೇಗುಲಗಳಲ್ಲಿ ಕಾಡುತ್ತಿದೆ ಭಕ್ತರ ಕೊರತೆ

ನಗರದ ಕೋಟೆ ಮಲ್ಲೇಶ್ವರ ಸ್ವಾಮಿಯ ದರ್ಶನಕ್ಕೆ ಕೇವಲ ಬೆರಳೆಣಿಕೆಯಷ್ಟು ಭಕ್ತರು ಮಾತ್ರ ಆಗಮಿಸಿದ್ದರು. ಬೆಳಗಿನ ಜಾವ ಪೂಜಾರ್ಚನೆ ಮಾಡಿ ಭಕ್ತರ ಬರುವಿಕೆಯ ನಿರೀಕ್ಷೆಯಲ್ಲಿದ್ದ ಅರ್ಚಕರಿಗೆ ನಿರಾಸೆ ಮೂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.