ETV Bharat / state

ವಿಜಯನಗರ ಜಿಲ್ಲೆ ಘೋಷಣೆಯಲ್ಲಿ ಜನಪ್ರತಿನಿಧಿಗಳ ಮಾತಿಗೆ ಕಿಮ್ಮತ್ತೇ ಇಲ್ಲ: ಶಾಸಕ ಸೋಮಶೇಖರ ರೆಡ್ಡಿ

author img

By

Published : Feb 9, 2021, 3:13 PM IST

ಅಖಂಡ ಬಳ್ಳಾರಿ ಜಿಲ್ಲೆಯ ವಿಭಜನೆ ಮಾಡೋ ಮುಖೇನ ಸ್ಥಳೀಯ ಜನಪ್ರತಿನಿಧಿಗಳ ಹಾಗೂ ಜಿಲ್ಲೆಯ ಮತದಾರರ ಕೆಂಗಣ್ಣಿಗೆ ರಾಜ್ಯದ ಮುಖ್ಯಮಂತ್ರಿ ಬಿಎಸ್​ವೈ ಅವರು ಗುರಿಯಾಗಿದ್ದಾರೆ. ಕೇವಲ ಒಬ್ಬ ಸಚಿವರ ಮಾತಿಗೆ ಮಣೆ ಹಾಕಿ ಬಳ್ಳಾರಿ ಜಿಲ್ಲೆಯ ವಿಭಜನೆಗೆ ಕೈಹಾಕಿರೋದು ತರವಲ್ಲ ಎಂದು ಶಾಸಕ ಗಾಲಿ ಸೋಮಶೇಖರ ರೆಡ್ಡಿ ಕಿಡಿಕಾರಿದರು.

their-is-no-importance-of-mlas-words-in-vijayanagar-district-declaration-mla-reddy
ಶಾಸಕ ರೆಡ್ಡಿ

ಬಳ್ಳಾರಿ: ವಿಜಯನಗರ ಜಿಲ್ಲೆ ಅಧಿಕೃತ ಘೋಷಣೆಗೂ ಮುನ್ನ ಸ್ಥಳೀಯ ಜನಪ್ರತಿನಿಧಿಗಳಿಂದ ವ್ಯಕ್ತವಾಗಿರುವ ಅಭಿಪ್ರಾಯಗಳಿಗೆ ರಾಜ್ಯ ಸರ್ಕಾರವಾಗಲಿ ಅಥವಾ ಸಿಎಂ ಬಿಎಸ್​ವೈ ಅವರಾಗಲಿ ಕಿಮ್ಮತ್ತೇ ನೀಡಿಲ್ಲವೆಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಖಂಡ ಬಳ್ಳಾರಿ ಜಿಲ್ಲೆಯ ವಿಭಜನೆ ಮಾಡೋ ಮುಖೇನ ಸ್ಥಳೀಯ ಜನಪ್ರತಿನಿಧಿಗಳ ಹಾಗೂ ಜಿಲ್ಲೆಯ ಮತದಾರರ ಕೆಂಗಣ್ಣಿಗೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ವೈ ಅವರು ಗುರಿಯಾಗಿದ್ದಾರೆ. ಕೇವಲ ಒಬ್ಬ ಸಚಿವರ ಮಾತಿಗೆ ಮಣೆ ಹಾಕಿ ಅಖಂಡ ಬಳ್ಳಾರಿ ಜಿಲ್ಲೆಯ ವಿಭಜನೆಗೆ ಕೈಹಾಕಿರೋದು ತರವಲ್ಲ ಎಂದು ಕಿಡಿಕಾರಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಗಾಲಿ ಸೋಮಶೇಖರ ರೆಡ್ಡಿ

ರಾಜ್ಯ ಸರ್ಕಾರದ ಆತುರದ ನಿರ್ಧಾರದಿಂದ ನಮ್ಮೆಲ್ಲರಿಗೆ ಬಹಳ ನೋವಾಗಿದೆ. ಪಾರ್ಟಿ ಚೇಂಜ್ ಮಾಡೋರ ಮಾತು ಕೇಳಿ ಸಿಎಂ ಬಿಎಸ್​ವೈ ಅವರು ಈ ರೀತಿ ವರ್ತಿಸಿದ್ದಾರೆ. ಸಚಿವ ಆನಂದ್​ ಸಿಂಗ್ ಅವರನ್ನು ಕೈಬಿಟ್ಟು ಕೂಡಲೇ ಹೊಸ ಉಸ್ತುವಾರಿಯನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.