ETV Bharat / state

ಅಬಕಾರಿ ಇಲಾಖೆಗೆ ಕನ್ನ ಹಾಕಿದ ಖದೀಮರು: ಮದ್ಯದ ಬಾಟಲ್​ ಕದ್ದು ಪರಾರಿ - ಬಳ್ಳಾರಿಯಲ್ಲಿ ಅಬಕಾರಿ ಕಚೇರಿಗೆ ಕನ್ನ

ಅಬಕಾರಿ ಕಚೇರಿಗೆ ಕನ್ನ ಹಾಕಿದ ಕಳ್ಳರು ಸಾವಿರಾರು ರೂ. ಮೌಲ್ಯದ ಮದ್ಯದ ಬಾಟಲ್​ಗಳನ್ನು ಕದ್ದು ಪರಾರಿಯಾಗಿದ್ದಾರೆ.

SIRUGUPPA ABAKARI OFFICE THEFT NEWS
ಅಬಕಾರಿ ಕಚೇರಿ
author img

By

Published : Mar 31, 2020, 5:48 PM IST

ಬಳ್ಳಾರಿ: ಜಿಲ್ಲೆಯ ಸಿರಗುಪ್ಪ ಪಟ್ಟಣದ ಅಬಕಾರಿ ಕಚೇರಿಗೆ ಕನ್ನ ಹಾಕಿದ ಕಳ್ಳರು ಸಾವಿರಾರು ರೂ. ಮೌಲ್ಯದ ಮದ್ಯದ ಬಾಟಲ್​ಗಳಿದ್ದ ಬಾಕ್ಸ್​ಗಳನ್ನ ದೋಚಿ ಪರಾರಿಯಾಗಿದ್ದಾರೆ.

ಅಬಕಾರಿ ಇಲಾಖೆಗೆ ಕನ್ನ ಹಾಕಿದ ಖದೀಮರು

ಲಾಕ್​ಡೌನ್​ ಹಿನ್ನೆಲೆ ಜಿಲ್ಲಾದ್ಯಂತ ಸಂಪೂರ್ಣ ಮದ್ಯ ಮಾರಾಟ ಬಂದ್ ಆಗಿದೆ. ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿ ದಾಳಿ ನಡೆಸಿದ್ದ ಅಬಕಾರಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದ ಮದ್ಯದ ಬಾಟಲ್​ನ್ನು ಕಚೇರಿಯಲ್ಲಿ ಸಂಗ್ರಹಿಸಿಡಲಾಗಿತ್ತು.

ನಿನ್ನೆ ಕಚೇರಿಯ ಮೇಲ್ಛಾವಣಿಗೆ ಹಾಕಿದ್ದ ಸಿಮೆಂಟಿನ ಹೆಂಚು ಒಡೆದು ಕಳ್ಳರು ಅಬಕಾರಿ ಕಚೇರಿಯ ಒಳ ಹೊಕ್ಕಿದ್ದಾರೆ. ಸಾವಿರಾರು ರೂ. ಮೌಲ್ಯದ ಮದ್ಯದ ಬಾಟಲ್​ಗಳನ್ನ ಕದ್ದು ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕಾಗಮಿಸಿದ ಅಬಕಾರಿ ಇಲಾಖೆ ಮೇಲಾಧಿಕಾರಿಗಳು ಪರಿಶೀಲನೆ ನಡೆಸಿದರು. ಈ ಕುರಿತು ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.