ಬಳ್ಳಾರಿ : ಕಳೆದ 40 ದಿನಗಳಿಂದ ಬಡಕಾರ್ಮಿಕರಿಗೆ ಉಚಿತವಾಗಿ ಆಹಾರ ವಿತರಿಸುತ್ತಿದ್ದ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರಿಗೆ ಸಾರ್ವಜನಿಕರು ಸನ್ಮಾನ ಮಾಡಿದ್ದಾರೆ.
ನಗರದ ವಿವಿಧ ಸಂಘಸಂಸ್ಥೆಗಳು ಹಾಗೂ ದಾನಿಗಳಿಂದ ಪ್ರತಿನಿತ್ಯ 1,200 ಆಹಾರದ ಪ್ಯಾಕೆಟ್ ಸಂಗ್ರಹಿಸಿ, ಅವುಗಳನ್ನು ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರು ಬಡವರಿಗೆ ವಿತರಣೆ ಮಾಡುತ್ತಿದ್ದಾರೆ. ಇದರ ಜೊತಗೆ 300 ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿ ಕಿಟ್ ವಿತರಣೆ ಮಾಡುತ್ತಿದ್ದಾರೆ.