ಬಳ್ಳಾರಿ: ತಾಲೂಕಿನ ಮಸೂದಿಪುರ ಗ್ರಾಮದ ಆರಾಧ್ಯದೈವ ಸಿದ್ಧರಾಮೇಶ್ವರ ಜಾತ್ರೆಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ರಥದ ಮೇಲ್ಭಾಗದಲ್ಲಿ ಬೆಂಕಿ ಬಿದ್ದು ಕೆಲಕಾಲ ಗೊಂದಲ ಸೃಷ್ಟಿಯಾಯಿತು.
ಸಿದ್ಧರಾಮೇಶ್ವರ ರಥದ ಮೇಲ್ಭಾಗದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ, ಭಕ್ತರಲ್ಲಿ ಆತಂಕ ಉಂಟಾಯಿತು. ಶನಿವಾರ ಸಂಜೆ ವೇಳೆ ಮಹಾ ರಥೋತ್ಸವ ಎಳೆಯುವ ಮುನ್ನ ಪಟಾಕಿ ಹಚ್ಚುವ ಸಂದರ್ಭದಲ್ಲಿ ಪಟಾಕಿಯ ಬೆಂಕಿಯ ಕಿಡಿ ರಥದ ಮೇಲ್ಭಾಗ ದಲ್ಲಿರುವ ಪರದೆಗೆ ತಗುಲಿದ್ದು, ಅರ್ಧದಷ್ಟು ಪರದೆ ಸುಟ್ಟಿದೆ.
ಈ ಘಟನೆಯಿಂದ ಕೆಲಕಾಲ ಮಹಾರಥೋತ್ಸವ ಸ್ಥಗಿತಗೊಂಡಿತ್ತು. ಆ ಬಳಿಕ, ಮೇಲ್ಭಾಗದ ಕಳಸಕ್ಕೆ ಹಾಕಲಾಗಿದ್ದ ಬಟ್ಟೆ ಸುಟ್ಟು ಕರಕಲಾಗಿದ್ದರಿಂದ, ಆ ಜಾಗದಲ್ಲಿ ಬಿಳಿ ಬಟ್ಟೆ ಸುತ್ತಿ ರಥೋತ್ಸವವನ್ನ ಎಳೆಯಲಾಯಿತು.
ಇದನ್ನು ಓದಿ :ಕುಕ್ಕೆಯಲ್ಲಿ ಜರುಗಿದ ಪಂಚಮಿ ತೇರು ಉತ್ಸವ, ಆಕರ್ಷಕ ಬೆಡಿ ಉತ್ಸವ