ETV Bharat / state

ಕಲಿಕೆಯ ಗುಣಮಟ್ಟ ಹೆಚ್ಚಿದರೆ ಉತ್ತಮ ಫಲಿತಾಂಶ; ಸಿಇಒ ನಂದಿನಿ - teachers day

ಬಳ್ಳಾರಿ ನಗರದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಡಿಸಿ ಎಸ್​.ಎಸ್​​. ನಕುಲ್​ ಹಾಗೂ ಜಿ.ಪಂ. ನೂತನ ಸಿಇಒ ನಂದಿನಿ ಮಾತನಾಡಿದರು. ಕಲಿಕೆಯ ಗುಣಮಟ್ಟ ಹೆಚ್ಚಾದಾಗ ಉತ್ತಮ ಫಲಿತಾಂಶ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

teachers day celebration in bellary
ಒಬ್ಬೊಬ್ಬ ಸಾಧಕರ ಪರಿಚಯ ಮಾಡಿ
author img

By

Published : Sep 5, 2020, 11:29 PM IST

ಬಳ್ಳಾರಿ: ಕಲಿಕೆಯ ಗುಣಮಟ್ಟ ಹೆಚ್ಚಿದರೆ ಉತ್ತಮ ಫಲಿತಾಂಶ ಪಡೆಯಬಹುದು. ಹಾಗೆಯೇ ವಾರದ ಪ್ರತಿ ದಿನ ಒಬ್ಬೊಬ್ಬ ಸಾಧಕರ ಪರಿಚಯ ಮಾಡಿ ಬೋಧನೆ ಮಾಡಿದರೆ ಉತ್ತಮ ರೀತಿಯ ಕಲಿಕೆ ಆಗುತ್ತದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಂದಿನಿ ತಿಳಿಸಿದರು.

ಒಬ್ಬೊಬ್ಬ ಸಾಧಕರ ಪರಿಚಯ ಮಾಡಿ
ನಗರದ ಬಿಡಿಎಎ ಪುಟ್​ಬಾಲ್ ಮೈದಾನದ ಸಭಾಂಗಣದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ 132ನೇ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಈ ವೇಳೆ ಜಿಲ್ಲಾಧಿಕಾರಿ ಎಸ್.ಎಸ್.​ ನಕುಲ್ ಅವರು ಮಾತನಾಡಿ, ರಾಧಾಕೃಷ್ಣನ್ ಅವರ ದೇಹ ನಮ್ಮನ್ನು ಬಿಟ್ಟು ಹೋಗಿದೆ, ಆದರೆ ಅವರ ಆಲೋಚನೆ, ಆದರ್ಶಗಳು ನಮ್ಮನ್ನು ಬಿಟ್ಟಿಲ್ಲ ಎಂದು ಹೇಳಿದರು.
ಜಿ.ಪಂ. ಸಿಇಒ ನಂದಿನಿ ಮಾತನಾಡಿ, ನಾನು ಬಳ್ಳಾರಿಗೆ ಬಂದು ಒಂದು ವಾರದಲ್ಲಿ 8 ತಾಲೂಕುಗಳ ಪ್ರವಾಸ ಮುಗಿಸಿದ್ದೇನೆ. ಆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳು ಹಾಗೂ ಅಲ್ಲಿಯ ಶಿಕ್ಷಕರು ತುಂಬ ಕ್ರಿಯಾಶೀಲರಾಗಿದ್ದಾರೆ. ಶೈಕ್ಷಣಿಕವಾಗಿ 23ನೇ ಸ್ಥಾನ ಪಡೆದಿದ್ದ ಬಳ್ಳಾರಿ ಜಿಲ್ಲೆ ಈಗ 13ನೇ ಸ್ಥಾನಕ್ಕೆ ಬಂದಿದೆ.‌ ಮುಂದಿನ ದಿನಗಳಲ್ಲಿ ಪ್ರಥಮ ಸ್ಥಾನಕ್ಕೆ ಬರಲು ನಾವು ಶ್ರಮಿಸಬೇಕು ಎಂದರು.
ನಗರ ಶಾಸಕ ಜಿ. ಸೋಮಶೇಖರ್ ರೆಡ್ಡಿ, ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ಬುಡಾ ಅಧ್ಯಕ್ಷ ದಮ್ಮೂರ್ ಶೇಖರ್, ಉಪ ನಿರ್ದೇಶಕ ಪಿ. ರಾಮಪ್ಪ ಹಾಗೂ ಬಿಇಓ, ಸಿಆರ್​ಸಿ ಹಾಗೂ ಜಿಲ್ಲಾಮಟ್ಟದ ಶಿಕ್ಷಕರು ಇದ್ದರು. ಇದೇ ವೇಳೆ ಜಿಲ್ಲಾ ಮಟ್ಟದಲ್ಲಿ ಉತ್ತಮ ಶಿಕ್ಷಕರಾಗಿ ಆಯ್ಕೆಯಾದ 27 ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.