ಬಳ್ಳಾರಿ: ಜಿಲ್ಲೆಯ ಹೊಸಪೇಟೆಯ ಎಂ.ಪಿ. ಪ್ರಕಾಶ ನಗರದಲ್ಲಿ ಕಳೆದ ಮೂರು ದಿನಗಳ ಹಿಂದಷ್ಟೇ ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದ, ವಿದ್ಯಾರ್ಥಿ ಶವವಾಗಿ ಪತ್ತೆ ಯಾಗಿದ್ದಾನೆ.
ಹೊಸಪೇಟೆ ನಗರದ ಚೈತನ್ಯ ಟೆಕ್ನೋ ಶಾಲೆಯ ಎಸ್ಎಸ್ಎಸ್ಸಿ ವಿದ್ಯಾರ್ಥಿ ಸುನೀಲ್ ನಾಯ್ಕ (16) ಎಂದು ಗುರುತಿಸಲಾಗಿದೆ. ಹೊಸಪೇಟೆ ಎಂ.ಜಿ.ನಗರದ ನಿವಾಸಿ ಸುನೀಲ್ಟ್ಯೂಷನ್ನಿಂದ ಮನೆಗೆ ವಾಪಾಸ್ ಮರುಳುವಾಗ ಈ ಘಟನೆ ನಡೆದಿದೆ ಎನ್ನಲಾಗ್ತಿದೆ.
![student found as dead](https://etvbharatimages.akamaized.net/etvbharat/prod-images/5177497_bly.jpg)
ನಿನ್ನೆ ವಿದ್ಯಾರ್ಥಿ ಮೃತದೇಹವು ಬಳ್ಳಾರಿ ನಗರ ಹೊರವಲಯದ ಅಲ್ಲೀಪುರ ಉಪಕಾಲುವೆಯಲ್ಲಿ ದೊರೆತಿದೆ. ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಿದ್ದು, ಮೃತದೇಹದ ವೈದ್ಯಕೀಯ ತಪಾಸಣೆ ನಡೆಸಿ ವಿದ್ಯಾರ್ಥಿಯ ಪೋಷಕರಿಗೆ ಮೃತದೇಹವನ್ನು ಪೊಲೀಸರು ಹಸ್ತಾಂತರಿಸಿದ್ದಾರೆ. ಈ ಕುರಿತು ಹೊಸಪೇಟೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.