ಬಳ್ಳಾರಿ: ಅಯೋಧ್ಯೆಯಲ್ಲಿ ರಾಮ ಮಂದಿರ ಕುರಿತು ಸುಪ್ರೀಂಕೋರ್ಟಿನ ಪಂಚ ಸದಸ್ಯ ಪೀಠದಲ್ಲಿ ವಿಚಾರಣೆ ನಡೆಯುತ್ತಿದ್ದು, ನಮ್ಮ ಈ ಜೈ ಶ್ರೀರಾಮ ಎಂಬ ಜೈಕಾರದ ಕೂಗು ಆ 5 ಮಂದಿ ನ್ಯಾಯಾಧೀಶರ ಹೃದಯಕ್ಕ ತಟ್ಟುವಂತೆ ಕೇಳ್ಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್ ಹೇಳಿದ್ದಾರೆ.
ಬಳ್ಳಾರಿ ತಾಲೂಕಿನ ಮೋಕಾ ಹೋಬಳಿಯಲ್ಲಿಂದು ಹನುಮ ಮಾಲಾಧಾರಿಗಳನ್ನುದ್ದೇಶಿಸಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಜೈ ಶ್ರೀರಾಮ ಎಂಬ ಘೋಷಣೆ ಕೂಗು ಘನ ನ್ಯಾಯಾಧೀಶರ ಹೃದಯಕ್ಕೆ ತಟ್ಟುವಂತೆ ಆಗಬೇಕು. ತೀರ್ಪು ನಮ್ಮ ಪರ ಬರುತ್ತೆ ಅಂತ ನಂಬಿಕೆ ಇದೆ. ಇನ್ನು 25 ದಿನ ತಾಳ್ಮೆಯಿಂದ ನಾವೆಲ್ಲರೂ ಕಾಯೋಣ ಎಂದ್ರು.
ಹನುಮ ಮಾಲಾ ಧರಿಸೋದು ಶ್ರದ್ಧೆಯ ಸಂಕೇತ. ಆಂಜನೇಯ, ಭಕ್ತಿಯ ಸಂಕೇತ. ರಾಮಾಯಣದಲ್ಲಿ ಸಾಕಷ್ಟು ಪರೀಕ್ಷೆ ಮಾಡಲಾಗಿದೆ. ಆಂಜನೇಯ ಗೆದ್ದಿದ್ದಾನೆ. ಈ ಬಾರಿ ನಮ್ಮ ರಾಮ ಮಂದಿರ ನಿರ್ಮಾಣ ಸಂಕಲ್ಪ ಪೂರ್ಣವಾಗುತ್ತದೆ. ಸರ್ಕಾರಗಳು ನಮ್ಮ ಜೊತೆಗೆ ಇವೆ ಅಂತಲ್ಲ. ಸತ್ಯ ನಮ್ಮ ಜೊತೆಗಿದೆ ಎಂದರು.