ಹೊಸಪೇಟೆ: ಕೊರೊನಾದಿಂದ ಬೇಸತ್ತ ಜನ ಸೋಂಕನ್ನು ಊರಿನಿಂದ ಹೊರಗೆ ಓಡಿಸಲು ಇದೀಗ ಪೂಜೆ ಪುನಸ್ಕಾರದ ಮೊರೆ ಹೋಗಿದ್ದಾರೆ.
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಗಂಗಮ್ಮನಹಳ್ಳಿಯ ಜನರು ಕೊರೊನಾವನ್ನು ಊರಿಂದಾಚೆ ಕಳುಹಿಸುತ್ತಿದ್ದಾರೆ. ಗ್ರಾಮಸ್ಥರು ಸಾಮೂಹಿಕವಾಗಿ ಸಂಕಲ್ಪ ಮಾಡಿಕೊಂಡು, ಬಳಿಕ ಪೂಜೆ, ಪುನಸ್ಕಾರ ಮಾಡಿ ಸಿಹಿ ಖಾದ್ಯಗಳನ್ನು ನೈವೇದ್ಯ ಮಾಡಿದ್ದಾರೆ. ಈ ಪೂಜಾ ಕಾರ್ಯಗಳನ್ನು ಮೌನ ವ್ರತದೊಂದಿಗೆ ಮಾಡಲಾಗುತ್ತಿದೆ. ಗ್ರಾಮದ ಗಡಿರೇಖೆಯಲ್ಲಿ ಗುರುತಿಸಲಾದ ಬೇವಿನ ಮರದಡಿ ಉಡಿ ಪದಾರ್ಥ ಇಟ್ಟು, ಕೊರೊನಾ ಮಹಾಮಾರಿ ಊರಿನೊಳಗೆ ಬರದಂತೆ ಪ್ರಾರ್ಥಿಸಿಕೊಂಡಿದ್ದಾರೆ.
ಈ ಹಿಂದೆ ಪ್ಲೇಗ್, ಮಲೇರಿಯಾ, ಚಿಕನ್ ಗುನ್ಯಾ ಬಂದಾಗಲೂ ಈ ರೀತಿಯ ಆಚರಣೆ ಮಾಡಿದ್ರಂತೆ. ಪೂಜೆಯಿಂದ ಆ ಎಲ್ಲಾ ರೋಗ ಕಡಿಮೆಯಾಗಿದೆ. ಹೀಗಾಗಿ ಇದೀಗ ಮತ್ತೊಮ್ಮೆ ಈ ರೀತಿಯ ಆಚರಣೆ ಮಾಡಲಾಗುತ್ತಿದೆ. ಇದು ಹಿಂದಿನಿಂದಲೂ ನಡೆದುಕೊಂಡು ಪದ್ಧತಿ ಎಂದು ಊರಿನ ಗ್ರಾಮಸ್ಥರು ಹೇಳುತ್ತಾರೆ.