ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯ ಕುರುಗೋಡಿನ ರಾಘವಾಂಕ ಮಠಕ್ಕೆ ರಾತ್ರೋರಾತ್ರಿ ಉತ್ತರಾಧಿಕಾರಿ ನೇಮಕ ಮಾಡಿರೋದೆಲ್ಲಾ ಶುದ್ಧ ಸುಳ್ಳು ಎಂದು ರಾಘವಾಂಕ ಮಠದ ಹಾಲಿ ಸ್ವಾಮೀಜಿ ಸೂಗೂರೇಶ್ವರ ರಾಘವಾಂಕ ಶಿವಾಚಾರ್ಯ ಸ್ವಾಮೀಜಿಯವರು ಸ್ಪಷ್ಟಪಡಿಸಿದ್ದಾರೆ.
ಬಳ್ಳಾರಿಯಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಹಾಲಿ ಸೂಗೂರೇಶ್ವರ ರಾಘವಾಂಕ ಶಿವಾಚಾರ್ಯ ಸ್ವಾಮೀಜಿ ಅವರು, ನಿರ್ಗಮಿತ ರಾಘವಾಂಕ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ (ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ) ಅವರು ರಾತ್ರೋರಾತ್ರಿ ಹಾಲಿ ಪಟ್ಟಾಧಿಕಾರಿ ಇದ್ದಾಗಲೇ ಮತ್ತೋರ್ವ ಪಟ್ಟಾಧಿಕಾರಿ ನೇಮಕ ಮಾಡಿದ್ದಾರೆ ಎಂಬ ಆರೋಪ ಮಾಡಿರೋದೆಲ್ಲಾ ಸುಳ್ಳು. ಬ್ರಾಹ್ಮಿ ಮೂಹೂರ್ತದಲ್ಲಿ ಪಟ್ಟಾಧಿಕಾರಿ ನೇಮಕ ನಡೆದಿದೆ. ಅದು ಕೂಡ ಶ್ರೀಶೈಲ ಹಾಗೂ ಉಜ್ಜಯಿನಿ ಪೀಠದ ಜಗದ್ಗುರುಗಳ ಮಹಾಸನ್ನಿಧಿಯಲ್ಲೇ ನಡೆದಿದೆ ಎಂದು ಹಾಲಿ ಸೂಗೂರೇಶ್ವರ ರಾಘವಾಂಕ ಶಿವಾಚಾರ್ಯ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ರಾಘವಾಂಕ ಮಠದಿಂದ ಅನೂರ್ಜಿತಗೊಂಡ ಮಲ್ಲಿಕಾರ್ಜುನ ರಾಘವಾಂಕ ಶಿವಾಚಾರ್ಯ (ಶಂಭುಲಿಂಗ ರಾಘವಾಂಕ ಶಿವಾಚಾರ್ಯ) ಅವರು ವೃಥಾ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಪಟ್ಟಾಧಿಕಾರಿ ನೇಮಕ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲೇರಿರುವುದು ನಿಜ ಎಂಬುದನ್ನು ಒಪ್ಪಿಕೊಂಡರು.
![successor appointed to raghavendra mutt is a fake news](https://etvbharatimages.akamaized.net/etvbharat/prod-images/kn-bly-1-kurugodu-mathada-swamiji-bite-vsl-ka10056_20072021130633_2007f_1626766593_981.jpg)
ರಾತ್ರೋರಾತ್ರಿ ಮತ್ತೋರ್ವರಿಗೆ ಪಟ್ಟಾಧಿಕಾರಿ ಮಾಡಿದ್ದಾರೆಂಬುದು ವದಂತಿ ಅಷ್ಟೇ. ಅವರ ನಡವಳಿಕೆ ಸರಿಯಾಗಿಲ್ಲ ಎಂದು ದೂರಿ ಲಿಂಗೈಕ್ಯರಾದ ರಾಘವಾಂಕ ಸ್ವಾಮೀಜಿಯವರು ಕೋರ್ಟಿಗೆ ಹೋಗಿದ್ದಾರೆ. ಇದೊಂದೇ ಪ್ರಕರಣವಲ್ಲ, ಇಂಥ ಪ್ರಕರಣಗಳು ಸಾಕಷ್ಟಿವೆ. ಮಠದ ಭಕ್ತರ ಅಪೇಕ್ಷೆ ಮೇರೆಗೆ ಪಂಚಪೀಠದ ಜಗದ್ಗುರುಗಳು ನೂತನ ಪಟ್ಟಾಧಿಕಾರಿಯನ್ನ ನೇಮಕ ಮಾಡೋದು ಮೊದಲಿಂದಲೂ ನಡೆದುಕೊಂಡ ಬಂದಂತಹ ಸಂಸ್ಕೃತಿ, ಅದು ಇಲ್ಲಿ ನಡೆದಿದೆ. ಕಾನೂನಾತ್ಮಕ ವಿಚಾರವೇ ಬೇರೆ, ಇದು ಬೇರೆ ಎಂದರು.