ETV Bharat / state

ಬಹುನಿರೀಕ್ಷಿತ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಚಾಲನೆ : ಮುಂದಿನ ವಿಧಾನಸಭಾ ಚುನಾವಣೆಗೆ ನೀಲನಕ್ಷೆ!?

author img

By

Published : Apr 16, 2022, 4:30 PM IST

Updated : Apr 16, 2022, 7:31 PM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ದೆಹಲಿ ಪ್ರವಾಸದ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದಾಗ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕಾರ್ಯಕಾರಿಣಿ ಸಭೆ ನಂತರ ನಿರ್ಧಾರ ಮಾಡೋಣ ಎಂದಿದ್ದಾರೆ ಎಂಬುದಾಗಿ ಸಿಎಂ ಹೇಳಿದ್ದರು. ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಹಲವು ವಿಚಾರಗಳ ಚರ್ಚೆಯ ಬಗ್ಗೆ ಆಗಿದೆಯಾ ನಿರ್ಧಾರ....?

BJP core committeee meeting
ಬಿಜೆಪಿ ಕಾರ್ಯಕಾರಿಣಿ ಸಭೆ ಹಿನ್ನೆಲೆ ಧ್ವಜಾರೋಹಣ ನೆರವೇರಿಸಲಾಯಿತು.

ವಿಜಯನಗರ: ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಎರಡು ದಿನಗಳ ಕಾಲ ನಡೆಯುವ ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಅಧಿಕೃತ ಚಾಲನೆ ಇಂದು ದೊರೆತಿದೆ. ಸಿಎಂ ಬಸವರಾಜ ಬೊಮ್ಮಾಯಿ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ರಾಜ್ಯದ ಬಿಜೆಪಿ ಶಾಸಕರು, ಸಚಿವರು ಸೇರಿದಂತೆ ಸುಮಾರು 650 ಜನರು ಪಾಲ್ಗೊಂಡಿದ್ದಾರೆ. ಇದರ ನಡುವೆ ಬಿಜೆಪಿಯ ಒಳ ನಿರ್ಧಾರಗಳು ಏನು ಎನ್ನೋ ಕುತೂಹಲವೂ ಹೆಚ್ಚಾಗಿದೆ.

ಬಹುನಿರೀಕ್ಷಿತ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಚಾಲನೆ

ಇಂದು ಮತ್ತು ನಾಳೆ ಕಾರ್ಯಕಾರಿಣಿ ನಡೆಯಲಿದ್ದು, ಬಿಜೆಪಿಯ ಶಾಸಕರು ಸಂಸದರು ಮಂತ್ರಿಗಳೂ ಸೇರಿದಂತೆ ಹಲವರು ಭಾಗವಹಿಸಿದ್ದಾರೆ‌. ಮಧ್ಯಾಹ್ನ 2.40ರ ವೇಳೆಗೆ ಧ್ವಜಾರೋಹಣ ಮಾಡುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾರ್ಯಕಾರಿಣಿಗೆ ಅಧಿಕೃತವಾಗಿ ಚಾಲನೆ ನೀಡಿದರು.

ಹೊಸಪೇಟೆಯ ಭಟ್ರಹಳ್ಳಿ ಆಂಜನೇಯ ದೇವಾಲಯದ ಬಯಲು ಪ್ರದೇಶದಲ್ಲಿ ಕಾರ್ಯಕಾರಿಣಿ ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿ.ಎಲ್. ಸಂತೋಷ, ಸಿ.ಟಿ. ರವಿ, ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಜಗದೀಶ ಶೆಟ್ಟರ್, ಸಚಿವರಾದ ಗೋವಿಂದ ಕಾರಜೋಳ, ಶ್ರೀರಾಮುಲು, ಬಿ.ಸಿ. ನಾಗೇಶ್, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ , ಬಿ.ವೈ. ರಾಘವೇಂದ್ರ ಸೇರಿದಂತೆ ಹಲವು ನಾಯಕರು ಧ್ವಜಾರೋಹಣ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಕಾರ್ಯಕಾರಿಣಿಗೆ ಭಾಗವಹಿಸುವ ಮುನ್ನ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈಶ್ವರಪ್ಪ ಅವರ ಪರವಹಿಸಿ ಮಾತನಾಡಿದರು. ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಅವರ ತಪ್ಪಿಲ್ಲ, ಯಾರನ್ನು ಕೇಳಿ ನಾಲ್ಕು ಕೋಟಿ ರೂಪಾಯಿಗಳ ಕಾಮಗಾರಿ ನಡೆಸಿದರು. ಇದನ್ನೆಲ್ಲಾ ನೋಡ್ತಿದ್ರೆ ಇದರ ಹಿಂದೆ ಕಾಂಗ್ರೆಸ್​ನವರ ಕೈವಾಡ ಇದೆ ಎಂದು ಅನಿಸುತ್ತಿದೆ ಎಂದು ಆರೋಪ ಮಾಡಿದರು.

ಇದಕ್ಕೂ ಮೊದಲು ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆಗೆ ಸಿಎಂ‌ ಆಗಮಿಸುವ ವೇಳೆ ವೇದಿಕೆಯ ಮುಂಭಾಗದಲ್ಲಿ ಡೊಳ್ಳು ಕುಣಿತ, ವಿವಿಧ ಕಲಾ ತಂಡಗಳು ಜಾನಪದ ವಾದ್ಯಗಳನ್ನು ಬಾರಿಸುವ ಮೂಲಕ ಸ್ವಾಗತ ಕೋರಲಾಯಿತು. ಕಾರ್ಯಕಾರಿಣಿಗೂ ಮೊದಲು ಸಿಎಂ ಬಸವರಾಜ ಬೊಮ್ಮಾಯಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಕೆ.ಎಸ್. ಈಶ್ವರಪ್ಪ ಅವರ ಬಗ್ಗೆ ಮಾತನಾಡಿದ ಸಿಎಂ, ಈಶ್ವರಪ್ಪ ಅವರನ್ನು ಅರೆಸ್ಟ್ ಮಾಡೋದು ತನಿಖಾಧಿಕಾರಿಗಳಿಗೆ ಬಿಟ್ಟಿದ್ದು. ನಾವು ಪೊಲೀಸರು ಆಗೋಕೆ ಆಗಲ್ಲ. ಜಾರ್ಜ್ ಅವರದ್ದು ಒಪನ್ ಆಗಿ ವಿಡಿಯೋದಲ್ಲಿ ಹೆಸರಿತ್ತು. ಆದರೂ ಅವರ ಹೆಸರನ್ನು FIR ನಲ್ಲಿ ಹಾಕಲಿಲ್ಲ. ಆದರೆ ನಾವು ಅತ್ಯಂತ ಪ್ರಮಾಣಿಕ ಪಾರದರ್ಶಕ FIR ಹಾಕಿದ್ದೇವೆ. ಅವರು ಕೋರ್ಟ್ ಆದೇಶ ಬಂದ ಮೇಲೆ FIR ಹಾಕಿದ್ರು. ಮುಚ್ಚಿಡೋ ಪ್ರಯತ್ನ ಮಾಡಿದ್ರು, ಆದ್ರೆ ನಾವು ಹಾಗೆ ಮಾಡಿಲ್ಲ. ತನಿಖಾಧಾರಿಗಳು ತೀರ್ಮಾನ ಮಾಡುತ್ತಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳು ಈಶ್ವರಪ್ಪ ಅವರನ್ನು ರಕ್ಷಣೆ ಮಾಡುತ್ತಾರೆ ಎಂದು ಹೇಳಿಕೆ ನೀಡುತ್ತಾರೆ. ಸಿದ್ದರಾಮಯ್ಯ ವಕೀಲರಿದ್ದಾರೆ ಅವರು ಯೋಚನೆ ಮಾಡಬೇಕು ಎಂದರು.

ಇನ್ನು ನಾಳೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪಾಲ್ಗೊಳ್ಳಲಿದ್ದಾರೆ. ಸಚಿವ ಸಂಪುಟ ವಿಸ್ತರಣೆ, ಕೆಲವು ಮಂತ್ರಿಗಳ ರಾಜೀನಾಮೆ ಪಡೆದು ಹೊಸಮುಖಗಳಿಗೆ ಅವಕಾಶ ಸೇರಿದಂತೆ ಹಲವು ಪ್ರಮುಖ ವಿಚಾರಗಳು ನಾಳೆ ಚರ್ಚೆಯಾಗುವ ಸಾಧ್ಯತೆಗಳಿವೆ. ಇಂದಂತೂ ಕಾರ್ಯಕಾರಿಣಿ ಆರಂಭವಾಗಿದ್ದು, ನಾಳೆ ಇನ್ನೂ ಏನೇನು ವಿಚಾರಗಳು ಹೊರಬರುತ್ತವೆಯೋ ಕಾದು ನೋಡಬೇಕಾಗಿದೆ.

ಇದನ್ನೂ ಓದಿ: ಇಂದಿನಿಂದ ಎರಡು ದಿನ ಬಿಜೆಪಿ ಕಾರ್ಯಕಾರಿಣಿ ಸಭೆ.. ಚುನಾವಣೆಗೆ ತಂತ್ರ ರೂಪಿಸಲು ಅಡಿಪಾಯ?

Last Updated : Apr 16, 2022, 7:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.