ETV Bharat / state

’ರಾಮ ಎಲ್ಲಾದ್ರೂ ಹೋಗಬಹುದು, ಲಕ್ಷ್ಮಣ ನಮ್ಮ ಜಿಲ್ಲೆಗೆ ಬರ್ತಿದ್ದಾರೆ ಅಷ್ಟೇ’

ಪಕ್ಷದ ಮತ್ತು ನಾಯಕರ ತೀರ್ಮಾನಕ್ಕೆ ನಾನು ಬದ್ಧನಾಗಿರುವೆ. ಕಲ್ಯಾಣ ಕರ್ನಾಟಕ ಘೋಷಣೆ ಹಿನ್ನೆಲೆ ಯಾದಗಿರಿಯಲ್ಲಿ ಧ್ವಜಾರೋಹಣ ಮಾಡುವಂತೆ ಸಿಎಂ ಯಡಿಯೂರಪ್ಪ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.

ಶ್ರೀರಾಮುಲು
author img

By

Published : Sep 16, 2019, 2:26 PM IST

ಬಳ್ಳಾರಿ: ಡಿಸಿಎಂ ಲಕ್ಷ್ಮಣ ಸವದಿ ಬಳ್ಳಾರಿಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ. ಬಳ್ಳಾರಿ ಮೇಲೆ ನನಗೆ ಪ್ರೀತಿಯಿದೆ. ರಾಮ ಎಲ್ಲಾದ್ರೂ ಹೋಗಬಹುದು, ಲಕ್ಷ್ಮಣ ನಮ್ಮ ಜಿಲ್ಲೆಗೆ ಬರ್ತಿದ್ದಾರೆ ಅಷ್ಟೇ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.

ಕಲ್ಯಾಣ ಕರ್ನಾಟಕ ಧ್ವಜಾರೋಹಣ ನೆರವೇರಿಸುವುದರ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು, ಪಕ್ಷದ ಮತ್ತು ನಾಯಕರ ತೀರ್ಮಾನಕ್ಕೆ ನಾನು ಬದ್ಧನಾಗಿರುವೆ. ನಾನು ಯಾದಗಿರಿಯಲ್ಲಿ ಧ್ವಜಾರೋಹಣ ಮಾಡುವಂತೆ ಸಿಎಂ ಯಡಿಯೂರಪ್ಪ ನಿರ್ಧಾರ ತೆಗೆದುಕೊಂಡಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ ಬಳ್ಳಾರಿಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ. ಬಳ್ಳಾರಿ ಮೇಲೆ ನನಗೆ ಪ್ರೀತಿಯಿದೆ. ರಾಮ ಎಲ್ಲಾದ್ರೂ ಹೋಗಬಹುದು, ಲಕ್ಷ್ಮಣ ನಮ್ಮ ಜಿಲ್ಲೆಗೆ ಬರ್ತಿದ್ದಾರೆ ಅಷ್ಟೇ ಎಂದರು.

ಪ್ರಧಾನಿ ಮೋದಿಯವರ ಜನ್ಮ ದಿನದ ನಿಮಿತ್ತ ಆಯೋಜಿಸಿದ್ದ ಸ್ವಚ್ಛ ಸೇವಾ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗಿ

ಪ್ರಧಾನಿ ಮೋದಿಯವರ ಜನ್ಮ ದಿನದ ನಿಮಿತ್ತ ಆಯೋಜಿಸಿದ್ದ ಸ್ವಚ್ಛ ಸೇವಾ ಸಪ್ತಾಹ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಕೇವಲ ಫೋಟೋಗಾಗಿ ಕಸ ಗುಡಿಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದರು.

ತಮ್ಮ ನಿವಾಸದಿಂದ ಆಗಮಿಸಿದ ಸಚಿವ ಶ್ರೀರಾಮುಲು, ವಿಮ್ಸ್​ನ ಹಳೇ ನಿರ್ದೇಶಕರ ಕಚೇರಿಯ ಆವರಣದಲ್ಲಿನ ಕುರಚಲು ಹುಲ್ಲಿನ ಪ್ರದೇಶದಲ್ಲಿ ಹ್ಯಾಂಡ್ ಗ್ಲೌಸ್ ತೊಟ್ಟುಕೊಂಡು ಪೊರಕೆ ಹಿಡಿದು ಕಸಗೂಡಿಸಲು ಮುಂದಾದರು. ಅಚ್ಚರಿ ಎಂದರೆ ಅಲ್ಲಿ ಕಸವೇ ಇರಲಿಲ್ಲ. ಸ್ವಚ್ಛ ಸೇವಾ ಸಪ್ತಾಹದ ಉದ್ದೇಶವೇ ಕಸಗುಡಿಸುವ ಕೆಲಸವಾದರೂ ಸಚಿವರು ಈ ರೀತಿ ಮಾಡಿದ್ದಕ್ಕೆ ಸಾರ್ವಜನಿಕರು ಕೋಪಗೊಂಡರು.

Intro:ಫೋಜುಗಾಗಿ ಕಸಗೂಡಿಸಿದ ಸಚಿವ ಶ್ರೀರಾಮುಲು
ವಿಮ್ಸ್ ಆವರಣದಲ್ಲಿ ನಡೆದ ನಾಟಕೀಯ ಬೆಳವಣಿಗೆ ಇದು..
ಬಳ್ಳಾರಿ: ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿಂದು ಪ್ರಧಾನಿ ಮೋದಿಯವ್ರ ಜನ್ಮದಿನದ ನಿಮಿತ್ತ ಆಯೋಜಿಸಿದ್ದ ಸ್ವಚ್ಛ ಸೇವಾ ಸಪ್ತಾಹ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಫೋಜುಗಾಗಿ ಕಸಗೂಡಿಸಿದ ಪ್ರಸಂಗ ನಡೆಯಿತು.
ಬೆಳಿಗ್ಗೆ 10 ಗಂಟೆಗೆ ನಿಗದಿಯಾಗಿದ್ದ ಈ ಕಾರ್ಯಕ್ರಮವು ಸರಿಸುಮಾರು ಎರಡು ಗಂಟೆ ತಡವಾಗಿ ನಡೆಯಿತು. ಬೆಳಿಗ್ಗೆ
11.40 ಗಂಟೆಗೆ ತಮ್ಮ ನಿವಾಸದಿಂದ ಆಗಮಿಸಿದ ಸಚಿವ ಶ್ರೀರಾಮುಲು, ವಿಮ್ಸ್ ನ ಹಳೆ ನಿರ್ದೇಶಕರ ಕಚೇರಿಯ ಆವರಣದಲ್ಲಿನ ಕುರಚಲು ಹುಲ್ಲಿನ ಪ್ರದೇಶದಲ್ಲಿ ಹ್ಯಾಂಡ್
ಗ್ಲೌಸ್ ತೊಟ್ಟುಕೊಂಡು ಪೊರಕೆ ಹಿಡಿದುಕೊಂಡು ಕಸಗೂಡಿಸಲು ಮುಂದಾದರು. ಅಚ್ಚರಿ ಎಂದರೆ ಅಲ್ಲಿ ಕಸವೇ ಇರಲಿಲ್ಲ. ಸ್ವಚ್ಚ ಸೇವಾ ಸಪ್ತಾಹದ ಉದ್ದೇಶವೇ ಕಸಗೂಡಿಸುವ ಕೆಲಸ ಆಗಿದ್ದರೆ ಸಚಿವ ಶ್ರೀರಾಮುಲು ಈ ರೀತಿಯ ಫೋಜು ನೀಡುತ್ತಿರಲಿಲ್ಲ. ಅಲ್ಲದೇ, ಅವರೊಂದಿಗೆ ಸಂಸದ ವೈ.ದೇವೇಂದ್ರಪ್ಪ, ಮಾಜಿ ಸಂಸದ ಸಣ್ಣ ಫಕ್ಕೀರಪ್ಪ, ಮಾಜಿ ಶಾಸಕ ಟಿ.ಹೆಚ್.ಸುರೇಶ
ಬಾಬು ಸೇರಿದಂತೆ ಮತ್ತಿತರರು ಸಾಥ್ ನೀಡಿದರು.
ಎರಡೇ ನಿಮಿಷಕ್ಕೆ ಸ್ವಚ್ಚತಾ ಕಾರ್ಯಕ್ರಮ ಫಿನಿಷ್: ಆರೋಗ್ಯ ಸಚಿವ ಶ್ರೀರಾಮುಲು ಸ್ವಚ್ಚತಾ ಕಾರ್ಯಕ್ರಮ ಎರಡು ನಿಮಿಷಕ್ಕೆ‌ ಮಾತ್ರ ಸೀಮಿತವಾಗಿತ್ತು. ತಮ್ಮ ಮುಂದಿರುವ ಕ್ಯಾಮರಾಗಳಿಗೆ ಫೋಜು ಕೊಡುತ್ತಾ ಕಸಗೂಡಿಸತ್ತಲೇ 'ಆಯಿತಾ ಆಯಿತಾ' ಎಂದು ಸಚಿವ ಶ್ರೀರಾಮುಲು ಕೇಳುತ್ತಿರೋದು ನೋಡುಗರಿಗೆ ನಾಟಕೀಯ ಬೆಳವಣಿಗೆ ಅಂತಲೂ ಭಾಸವಾಗಿತ್ತು.
Body:ರಾಮ ಎಲ್ಲಾದ್ರೂ ಹೋಗ್ಬಹುದು ಈಗ ಈ ಜಿಲ್ಲೆಗೆ ಲಕ್ಷ್ಮಣ ಬರ್ತಾರೆ: ಕಲ್ಯಾಣ ಕರ್ನಾಟಕ ಧ್ವಜಾರೋಹಣ ನೆರವೇರಿಸುವುದರ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು, ಪಕ್ಷದ ಮತ್ತು ನಾಯಕರ ತೀರ್ಮಾನಕ್ಕೆ ನಾನು ಬದ್ದನಾಗಿರುವೆ. ನಾನು ಯಾದಗಿರಿಯಲ್ಲಿ ಧ್ವಜಾರೋಹಣ ಮಾಡುವಂತೆ ಸಿಎಂ ಯಡಿಯೂರಪ್ಪ ನಿರ್ಧಾರ ತೆಗೆದುಕೊಂಡಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ ಬಳ್ಳಾರಿಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ.ನಾನು ನನ್ನ ಜೀವನ ಇರೋ ವರೆಗೂ ಬಳ್ಳಾರಿಯಿಂದ ದೂರ ಆಗೋಲ್ಲ. ನನಗೆ ಯಾದಗಿರಿ ಕೊಟ್ಟಿದ್ದಾರೆ. ನಾನು ಅಲ್ಲಿ ಧ್ವಜಾರೋಹಣ ಮಾಡುತ್ತೇನೆ. ಪಕ್ಷ ನಿರ್ಧಾರಕ್ಕೆ ನಾವು ಬದ್ಧರಾಗಲೇಬೇಕು. ಬಳ್ಳಾರಿ ಮೇಲೆ ನನಗೆ ಪ್ರೀತಿಯಿದೆ. ರಾಮ ಎಲ್ಲಾದ್ರೂ ಹೋಗಬಹುದು, ಲಕ್ಷ್ಮಣ ನಮ್ಮ ಜಿಲ್ಲೆಗೆ ಬರ್ತಿದ್ದಾರೆ.
ರಾಮ ಎಲ್ಲ ಕಡೆ ಹೋಗಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸ್ಥಾನಗಳ ಹಂಚಿಕೆ ಈಗಾಗಲೇ ತಯಾರಾಗಿದೆ
ರಾಜ್ಯಪಾಲರಿಗೂ ಹೋಗಿರಬಹುದು. ಆದ್ರೆ ರಾಜ್ಯಪಾಲರ ಅವಧಿ ಮುಗಿದ ಕಾರಣ ಅವರ ಅಂಕಿತ ಸಿಕ್ಕಿಲ್ಲವೆನ್ನಿಸುತ್ತದೆ. ಹೀಗಾಗಿ ಉಸ್ತುವಾರಿ ಹಂಚಿಕೆ ವಿಳಂಬ ಆಗಿರಬಹುದು. ಇದು ನನ್ನ ಅಭಿ ಪ್ರಾಯ ಎಂದರು.
ಅನರ್ಹ ಶಾಸಕ ಆನಂದಸಿಂಗ್ ಹೊಸಪೇಟೆ ಜಿಲ್ಲೆಯನ್ನಾಗಿಸುವ ಹೋರಾಟದ ವಿಚಾರ ಗಮನಕ್ಕೆ ಇದೆ. ಆದರೆ, ಯಾವ ಹಂತದಲ್ಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ನಾಯಕರ ಜೊತೆ ಚರ್ಚೆ ಮಾಡುವೆ. ಇದು ವೈಯಕ್ತಿಕವಾಗಿ ತೆಗೆದುಕೊಳ್ಳುವ ನಿರ್ಧಾರವಲ್ಲ ಎಂದರು.
ವಿಮ್ಸ್ ನಿರ್ದೇಶಕರಿಗೆ ಅನಾರೋಗ್ಯ:
ಅನಾರೋಗ್ಯದಲ್ಲಿಯೂ ಸಚಿವರೊಂದಿಗೆ ವಿಮ್ಸ್ ನಿರ್ದೇಶಕ ಲಕ್ಷ್ಮಿನಾರಾಯಣರೆಡ್ಡಿಯವ್ರು ಕಸಗೂಡಿಸಿದ್ದಾರೆ. ಕಳೆದ ಹದಿನೈದು ದಿನಗಳಿಂದ ಡೆಂಗೆ ಜ್ವರದಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ.
ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ನಿರ್ದೇಶಕರು ಸಚಿವರ ಆಗಮನದ ಹಿನ್ನಲೆಯಲ್ಲಿ ಎದ್ನೋ-ಬಿದ್ನೋ ಎಂಬಂತೆ ಬಳ್ಳಾರಿಗೆ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:ಪವರ್ ಡೈರೆಕ್ಟರ್ ನಲ್ಲಿ ವಿಡಿಯೊ ಕಳಿಸಿರುವೆ ಗಮನಿಸಿರಿ.
KN_BLY_2_MINISTER_SREERAMULU_VIMS_VISIT_VISUALS_7203310

ETV Bharat Logo

Copyright © 2024 Ushodaya Enterprises Pvt. Ltd., All Rights Reserved.