ಬಳ್ಳಾರಿ: ಲೈಂಗಿಕ ಕಿರುಕುಳದ ಆರೋಪದ ಮೇಲೆ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪಿಜಿ ಸೆಂಟರ್‌ನ ಇಂಗ್ಲೀಷ್ ಪ್ರೊಫೆಸರ್ ಡಾ. ಚಾಂದ್‌ಭಾಷಾ ಎಂ. ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಜಾರಿ ಮಾಡಲಾಗಿದೆ.
ವಿಶ್ವವಿದ್ಯಾಲದಯ ರಿಜಿಸ್ಟ್ರಾರ್ ಅವರು ಈ ಆದೇಶವನ್ನು ಜಾರಿ ಮಾಡಿದ್ದು, ಕರ್ನಾಟಕ ಸಿವಿಲ್ ಸರ್ವಿಸ್ ಸೇವೆಗಳ ಕಾಯ್ದೆ ಮತ್ತು ಕಾನೂನಾತ್ಮಕವಾಗಿ ಪಿಎಚ್‌ಡಿ ವಿದ್ಯಾರ್ಥಿನಿ ಸಲ್ಲಿಸಿದ್ದ ಲೈಂಗಿಕ ಕಿರುಕುಳದ ಲಿಖಿತ ಆರೋಪದ ಹಿನ್ನೆಲೆಯಲ್ಲಿ ಸುದೀರ್ಘ ವಿಚಾರಣೆಯನ್ನು ನಡೆಸಿ, ಸಮಿತಿ ಸಲ್ಲಿಸಿದ ವರದಿಯನ್ನು ಸಿಂಡಿಕೇಟ್ ಸಭೆಯ ನಿರ್ಣಯದ ಪ್ರಕಾರ ಡಾ. ಚಾಂದ್‌ಭಾಷಾ ಎಂ. ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಇಂಗ್ಲೀಷ್ ವಿಭಾಗದ ಪ್ರೊಫೆಸರ್ ಡಾ. ಚಾಂದ್‌ಭಾಷಾ ಎಂ. ಅವರ ಮೇಲೆ ಸಂಶೋಧನಾ ವಿದ್ಯಾರ್ಥಿನಿ ನವೆಂಬರ್ 7, 2022ರಂದು ಲೈಂಗಿಕ ಕಿರುಕುಳದ ಕುರಿತು ಆರೋಪಿಸಿ ವಿಶ್ವವಿದ್ಯಾಲಯಕ್ಕೆ ಲಿಖಿತ ದೂರನ್ನು ಸಲ್ಲಿಸಿದ್ದರು.
ಇದನ್ನೂ ಓದಿ: 'ಶಾಲೆಗೆ ಬಂಕ್ ಹಾಕಿ ಡಾಬಾದಲ್ಲಿ ಶಿಕ್ಷಕರ ಗುಂಡು ಪಾರ್ಟಿ': ಪೋಷಕರ ದೂರು