ETV Bharat / state

ವಿಶೇಷ ಚೇತನರ ಮತದಾನಕ್ಕೆ ವಿಶೇಷ ವಾಹನಗಳ ವ್ಯವಸ್ಥೆ: ಡಿಸಿ - ಬಳ್ಳಾರಿ

ವಿಶೇಷ ಚೇತನರನ್ನು ಮತಗಟ್ಟೆಗೆ ಕರೆದುಕೊಂಡು ಬರಲು ವಿಶೇಷ ವಾಹನಗಳ ಸೌಲಭ್ಯ, ಚುನಾವಣಾ ಸಂಬಂಧಿ ದೂರು ನೀಡಲು ಆಪ್​ಗಳನ್ನು ಬಿಡುಗಡೆ ಮಾಡಿದ್ದು, ಅದರ ಉಪಯೋಗ ಪಡೆದುಕೊಳ್ಳಲು ಬಳ್ಳಾರಿ ಜಿಲ್ಲಾಧಿಕಾರಿ ಡಾ. ವಿ. ರಾಮಪ್ರಸಾತ್ ಮನೋಹರ ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲಾಧಿಕಾರಿ ಡಾ.ವಿ. ರಾಮಪ್ರಸಾತ್ ಮನೋಹರ
author img

By

Published : Mar 13, 2019, 8:20 PM IST

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲಾದ್ಯಂತ ಅಂದಾಜು 18242 ವಿಶೇಷ ಚೇತನರಿದ್ದಾರೆ. ಆ ಪೈಕಿ 17641 ವಿಶೇಷ ಚೇತನರನ್ನು ಮತದಾರರ ಪಟ್ಟಿಯಲ್ಲಿ ಮಾರ್ಕ್ ಮಾಡಲಾಗಿದ್ದು, ಅವರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿ. ರಾಮಪ್ರಸಾತ್ ಮನೋಹರ ತಿಳಿಸಿದ್ದಾರೆ.

ಬಳ್ಳಾರಿಯ ಡಿಸಿ ಕಚೇರಿಯಲ್ಲಿಂದು ಈಟಿವಿ ಭಾರತದೊಂದಿಗೆ ಅವರು ಮಾತನಾಡಿ, ಏಪ್ರಿಲ್ 23ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಆ ದಿನದಂದು ವಿಶೇಷ ಚೇತನರನ್ನು ಮತಗಟ್ಟೆಗೆ ಕರೆದುಕೊಂಡು ಬರಲು 322 ವಿಶೇಷ ವಾಹನಗಳ ಸೌಲಭ್ಯ ಕಲ್ಪಿಸಲಾಗಿದೆ ಎಂದು ಮನೋಹರ ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲಾಧಿಕಾರಿ ಡಾ.ವಿ. ರಾಮಪ್ರಸಾತ್ ಮನೋಹರ

ವಿಶೇಷ ಚೇತನರಿಗೆ ಅನುಕೂಲವಾಗಲು ತ್ರಿಸೈಕಲ್ ವ್ಯವಸ್ಥೆ, ಬೂತಗನ್ನಡಿ, ರ್ಯಾಂಪ್ ಹಾಗೂ ಪ್ರತಿ ಮತಗಟ್ಟೆಗೆ ಒಬ್ಬರು ಸಹಾಯಕರಂತೆ 2151 ಜನ ಸಹಾಯಕರನ್ನು ನೇಮಿಸಲು ಕ್ರಮ ವಹಿಸಲಾಗಿದೆ ಎಂದು ವಿವರಿಸಿದ್ದಾರೆ.

ಅಲ್ಲದೇ, ಸಿ ವಿಜಲ್ ಆ್ಯಪ್ ಮೂಲಕ ಹಣ ಹಂಚಿಕೆ ಸೇರಿದಂತೆ ಚುನಾವಣಾ ಅಕ್ರಮದ ಕುರಿತು ಸಾರ್ವಜನಿಕರು ದೂರು ನೀಡಬಹುದು. ಈಗಾಗಲೇ ಆ ಆ್ಯಪ್‌ಅನ್ನು ಮೊದಲಿಗೆ‌ ತಮ್ಮ ಅಧಿಕಾರಿ ವರ್ಗದ ಸರಿಸುಮಾರು 300 ಮಂದಿಯ ಮೊಬೈಲ್​ನಲ್ಲಿ ಪ್ರಾಯೋಗಿಕವಾಗಿ ಡೌನ್​ಲೋಡ್​ ಮಾಡಿ, ಅದರ ಸಾಧಕ-ಬಾಧಕಗಳನ್ನು ಪರಿಶೀಲಿಸಲಾಗಿದೆ. ಈ ಹಿಂದಿನ‌ ಚುನಾವಣೆಯಲ್ಲಿ ಬೆಂಗಳೂರಿಗರಿಗೆ ಮಾತ್ರ ಈ ಆ್ಯಪ್ ಸೀಮಿತ ಆಗಿತ್ತು.‌‌‌ ಆದರೀಗ ರಾಜ್ಯವ್ಯಾಪಿ ವಿಸ್ತರಿಸಲಾಗಿದೆ. ಆಯಾ ಜಿಲ್ಲೆಗಳ ದೂರುಗಳನ್ನೂ ಕೂಡ ನೋಡಬಹುದಾಗಿದೆ. ಯಾವುದಾದರೂ ಘಟನೆಯ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡುವುದಾದರೆ ಇರುವ ಸ್ಥಳದಿಂದಲೇ ವಿಡಿಯೋ ಅಥವಾ ಫೋಟೋವನ್ನ ಅಪ್​​ಲೋಡ್ ಮಾಡಬಹುದು. ಆದರೆ, ದೂರಿನ ಕುರಿತಾದ ಯಾವುದೇ ಮಾಹಿತಿಯು ಆ ಸಿ ವಿಜಲ್ ಆ್ಯಪ್​​ನಲ್ಲಿ ದೊರಕುವುದಿಲ್ಲ. ಅದೇನಿದ್ದರೂ ಆಯೋಗಕ್ಕೆ ಮಾತ್ರ ದೊರಕಲಿದೆ. ಅಲ್ಲದೇ, ದೂರು‌ ನೀಡಿದಾಕ್ಷಣ ಸತ್ಯವೆಂದಲ್ಲ. ಅದನ್ನ ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಬಹುದಷ್ಟೇ ಎಂದರು.

ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಹಾಗೂ ಕಡಿಮೆ ಮತದಾನ ಕೇಂದ್ರಗಳಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸುವ ದೃಷ್ಟಿಯಿಂದ ಒಟ್ಟು 17 ಪಿಂಕ್/ಸಖಿ ಮತಗಟ್ಟೆಗಳನ್ನು ಸ್ಥಾಪಿಸಲು ಮತಗಟ್ಟೆಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಬಗ್ಗೆ ಜಾಗೃತಿ ಮೂಡಿಸಲು 223 ತಂಡಗಳನ್ನು ರಚನೆ ಮಾಡಲಾಗಿದೆ. ಪ್ರತಿ ದಿನ 91 ಇವಿಎಂ ಮತ್ತು ವಿವಿಪ್ಯಾಟ್‍ಗಳ ಮೂಲಕ ಜಿಲ್ಲಾ, ತಾಲೂಕು ಹಾಗೂ ಮತಗಟ್ಟೆ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮಾ. 15 ರೊಳಗೆ ಎಲ್ಲ ಮತಗಟ್ಟೆ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.

Intro:ಗಣಿನಾಡಿನಲ್ಲಿ‌ 18242 ವಿಶೇಷ ಚೇತನರು
ವಿಶೇಷ ಚೇತನರ ಮತದಾನಕ್ಕೆ ವಿಶೇಷ ವಾಹನಗಳ ವ್ಯವಸ್ಥೆ…!
ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲಾದ್ಯಂತ ಅಂದಾಜು 18242 ವಿಶೇಷ ಚೇತನರಿದ್ದಾರೆ. ಆ ಪೈಕಿ 17641 ವಿಶೇಷ ಚೇತನರನ್ನು ಮತದಾರರ ಪಟ್ಟಿಯಲ್ಲಿ ಮಾರ್ಕ್ ಮಾಡಲಾಗಿದೆಂದು ಜಿಲ್ಲಾಧಿ ಕಾರಿ ಡಾ.ವಿ.ರಾಮಪ್ರಸಾತ್ ಮನೋಹರ ತಿಳಿಸಿದ್ದಾರೆ.
ಬಳ್ಳಾರಿಯ ಡಿಸಿ ಕಚೇರಿಯಲ್ಲಿಂದು ಈ ಟಿವಿ ಭಾರತದೊಂದಿಗೆ ಅವರು ಮಾತನಾಡಿ, ಏಪ್ರಿಲ್ 23ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು, ಆ ದಿನದಂದು ಮತಗಟ್ಟೆಗೆ ಕರೆದುಕೊಂಡು ಬರಲು 322 ವಿಶೇಷ ವಾಹನದ ಸೌಲಭ್ಯ ಕಲ್ಪಿಸಲಾಗಿದೆ ಎಂದು ಮನೋಹರ ತಿಳಿಸಿದ್ದಾರೆ.
ವಿಶೇಷ ಚೇತನರಿಗೆ ಅನುಕೂಲವಾಗಲು ತ್ರಿಸೈಕಲ್ ವ್ಯವಸ್ಥೆ, ಬೂತಗನ್ನಡಿ, ರ್ಯಾಂಪ್ ಹಾಗೂ ಪ್ರತಿ ಮತಗಟ್ಟೆಗೆ ಒಬ್ಬರು ಸಹಾಯಕರಂತೆ 2151 ಜನ ಸಹಾಯಕರನ್ನು ನೇಮಿಸಲು ಕ್ರಮವಹಿಸಲಾಗಿದೆ ಎಂದು ವಿವರಿಸಿದ್ದಾರೆ.

Body:ಅಲ್ಲದೇ, ಸಿವಿಜಲ್ ಆ್ಯಪ್ ಮೂಲಕ ಹಣ ಹಂಚಿಕೆ ಸೇರಿದಂತೆ ಚುನಾವಣಾ ಅಕ್ರಮದ ಮೂಲಕ‌ ಸಾರ್ವಜನಿಕರು ದೂರು ನೀಡಬಹುದು. ಈಗಾಗಲೇ ಆ ಆ್ಯಪ್‌ ಅನ್ನು ಮೊದಲಿಗೆ‌ ನಮ್ಮ ಅಧಿಕಾರವರ್ಗದ ಸರಿಸುಮಾರು 300 ಮಂದಿಯ ಮೊಬೈಲ್ ನಲ್ಲಿ ಪ್ರಾಯೋಗಿಕವಾಗಿ ಡೌನ್ ಲೋಡ್ ಮಾಡಿ, ಅದರ ಸಾಧಕ- ಬಾಧಕಗಳನ್ನು ಪರಿಶೀಲಿಸಲಾಗಿದೆ. ಈ ಹಿಂದಿನ‌ ಚುನಾವಣೆಯಲ್ಲಿ ಬೆಂಗಳೂರಿಗರಿಗೆ ಮಾತ್ರ ಈ ಆ್ಯಪ್ ಸೀಮಿತ ಆಗಿತ್ತು.‌‌‌ ಆದರೀಗ ರಾಜ್ಯವ್ಯಾಪಿ ವಿಸ್ತರಿಸಲಾಗಿದೆ. ಆಯಾ ಜಿಲ್ಲೆಗಳ ದೂರುಗಳನ್ನೇ ನೋಡಬಹುದಾಗಿದೆ. ಯಾವುದಾದ ರೂ ಘಟನೆಯ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡುವುದಾದ್ರೇ ನೀವು ಇರುವ ಸ್ಥಳದಿಂದಲೇ ವಿಡಿಯೊ‌‌ ಅಥವಾ ಪೋಟೋವನ್ನ ಅಪ್ ಲೋಡ್ ಮಾಡಬಹುದು. ಆದರೆ, ದೂರಿನ ಕುರಿತಾದ ಯಾವುದೇ ಮಾಹಿತಿಯು ಆ ಸಿವಿಜಲ್ ಆ್ಯಪ್ ನಲ್ಲಿ ದೊರಕುವುದಿಲ್ಲ. ಅದೇನಿದ್ದರೂ ಆಯೋಗಕ್ಕೆ ಮಾತ್ರ ದೊರಕಲಿದೆ. ಅಲ್ಲದೇ, ದೂರು‌ ನೀಡಿದಾಕ್ಷಣ ಸತ್ಯವಂತಲ್ಲ. ಅದನ್ನ ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಬಹುದಷ್ಟೇ ಎಂದರು.
ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಹಾಗೂ ಕಡಿಮೆ ಮತದಾನ ಕೇಂದ್ರಗಳಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಗೆ ಮಾಡುವ ದೃಷ್ಟಿಯಿಂದ ಒಟ್ಟಾರೆ 17 ಪಿಂಕ್/ಸಖಿ ಮತಗಟ್ಟೆಗಳನ್ನು ಸ್ಥಾಪಿಸಲು ಮತಗಟ್ಟೆಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಬಗ್ಗೆ ಜಾಗೃತಿ ಮೂಡಿಸಲು 223 ತಂಡಗಳನ್ನು ರಚನೆ ಮಾಡಲಾಗಿದೆ.
ಪ್ರತಿ ದಿನ 91 ಇವಿಎಂ ಮತ್ತು ವಿವಿಪ್ಯಾಟ್‍ಗಳ ಮೂಲಕ ಜಿಲ್ಲಾ,ತಾಲೂಕು ಹಾಗೂ ಮತಗಟ್ಟೆ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮಾ.15 ರೊಳಗೆ ಎಲ್ಲ ಮತಗಟ್ಟೆ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

ವರದಿ: ವೀರೇಶ ಕಟ್ಟೆಮ್ಯಾಗಳ

Conclusion:R_KN_BEL_06_130319_DC_MANOHAR_BYTE_VEERESH GK

R_KN_BEL_07_130319_DC_MANOHAR_BYTE_VEERESH GK
ETV Bharat Logo

Copyright © 2025 Ushodaya Enterprises Pvt. Ltd., All Rights Reserved.