ಬಳ್ಳಾರಿ: ಕೊರೊನಾ ವಾರಿಯರ್ಸ್ ಸೇವೆಗೆ ಗಣಿನಾಡು ಬಳ್ಳಾರಿ ಜಿಲ್ಲೆಯ ಗ್ರಾಮ ಲೆಕ್ಕಿಗರೊಬ್ಬರು ಕಳೆದೊಂದು ತಿಂಗಳಿಂದ ನಿಯೋಜನೆಯಾಗಿದ್ದಾರೆ. ಅದರೆ ಅತ್ತ ಏಳು ವರ್ಷದ ಮುಗ್ಧ ಕಂದಮ್ಮ ತನ್ನ ತಂದೆಯ ಬರುವಿಕೆಗಾಗಿ ಕಾಯುತ್ತಾ ಕುಳಿತಿದ್ದಾಳೆ.
ಹೌದು, ಗಣಿನಾಡು ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ಅಂಬಳಿ ಗ್ರಾಮ ಇಂಥದೊಂದು ಮನಕಲಕುವ ದೃಶ್ಯಕ್ಕೆ ಸಾಕ್ಷಿಯಾಗಿದೆ. ಜಿಲ್ಲೆಯ ಕುರುಗೋಡು ಕುಡಿತಿನಿಯಲ್ಲಿ ಹೋಮ್ ಕ್ವಾರಂಟೈನ್ನಲ್ಲಿರುವವರ ರಕ್ಷಣೆಗೆ ಗ್ರಾಮ ಲೆಕ್ಕಿಗ ದೊಡ್ಡಬಸಪ್ಪ ರೆಡ್ಡಿಯವರು ಲಾಕ್ಡೌನ್ ಆದಾಗಿಂದಲೂ ಕೊರೊನಾ ವಾರಿಯರ್ಸ್ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಬಳ್ಳಾರಿ ನಗರಲ್ಲೇ ತಂಗಿದ್ದ ದೊಡ್ಡಬಸಪ್ಪ ರೆಡ್ಡಿಯವರ ಕುಟುಂಬ ಜಿಲ್ಲೆಯ ಕೊಟ್ಟೂರು ತಾಲೂಕಿನ ಅಂಬಳಿ ಗ್ರಾಮಕ್ಕೆ ಬಂದಿದೆ. ಅಂಬಳಿ ಗ್ರಾಮಕ್ಕೆ ಕೇವಲ ಒಂದೇ ಒಂದು ಬಾರಿ ಗ್ರಾಮ ಲೆಕ್ಕಿಗ ದೊಡ್ಡಬಸಪ್ಪ ರೆಡ್ಡಿ ಬಂದಿದ್ದರು.
ಅಲ್ಲಿಂದ ಇಲ್ಲಿಯವರೆಗೂ ಮನೆಗೆ ಬಾರದ ತನ್ನ ಅಪ್ಪನ ಬರುವಿಕೆಗಾಗಿ ಕಾಯುತ್ತಾ ಕುಳಿತಿದ್ದ ಮುಗ್ಧ ಕಂದಮ್ಮ ರೋಜಾ (7), ಆಗೊಂದು ಬಾರಿ ಮನೆಗೆ ಬಂದಿದ್ದ ತನ್ನ ಅಪ್ಪನನ್ನ ತಬ್ಬಿಕೊಂಡು ಅಳುತ್ತಾ ಕುಳಿತಿದ್ದಳು. ಆಗ ಸಮಾಧಾನಪಡಿಸಿ ಕೊರೊನಾ ವಾರಿಯರ್ಸ್ ಸೇವೆಗೆ ಮುಂದಾಗಿದ್ದರು. ಆ ಬಳಿಕ ವಿಡಿಯೋ ಕಾಲಿಂಗ್ ಮಾಡಿ ಪಪ್ಪಾ ಬಳ್ಳಾರಿಯಲ್ಲಿ ಒಂದು ಕೊರೊನಾ ಬಂದೈತಿ. ಅದ್ಕ ಹುಷಾರಾಗಿರು ಅಂತ ಅಳುತ್ತಾ ಕುಳಿತಿದ್ದಳು. ವಿಡಿಯೋ ಕಾಲಿಂಗ್ನಲ್ಲೇ ಮಗಳು ಅಳೋದನ್ನ ಕಂಡ ದೊಡ್ಡಬಸಪ್ಪ ರೆಡ್ಡಿ, ಕೊರೊನಾ ವಾರಿಯರ್ಸ್ ಸೇವೆಯ ಮಹತ್ವ ಕುರಿತು ಸಾರಿದ್ದರು.
ಈ ದಿನ ಅಂಬಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಈಟಿವಿ ಭಾರತದೊಂದಿಗೆ ಏಳು ವರ್ಷದ ಮುಗ್ಧ ಕಂದಮ್ಮ ರೋಜಾ ಮಾತನಾಡಿ, ನಾನು ನನ್ನ ಪಪ್ಪಾನಾ ನೋಡಬೇಕು. ಪಪ್ಪಾ ಬೇಗನೇ ಬಾ ಅಂತ ಮನವಿ ಮಾಡಿಕೊಂಡಿದ್ದಾಳೆ. ಪಪ್ಪಾ ಆವತ್ತೊಂದಿನ ಬಂದಿದ್ದರು. ಬೆಳಿಗ್ಗೆ ನಾವ್ ಹಾಸಿಗೆ ಮೇಲೆ ಎದ್ದೇಳಲಿಕ್ಕೂ ಮುಂಚಿತವಾಗಿ ನಮ್ಮನ್ನ ಬಿಟ್ಟು ಹೊರಟು ಹೋಗಿದ್ದರು. ನನಗೀಗ ಪಪ್ಪನ ನೆನಪಾಗುತ್ತೆ ಎಂದು ತನ್ನ ಮನದಾಳದ ನೋವನ್ನ ತೋಡಿಕೊಂಡಿದ್ದಾಳೆ ರೋಜಾ.