ಬಳ್ಳಾರಿ: ಹಡಗಲಿ ಶಾಸಕ ಪಿ. ಟಿ. ಪರಮೇಶ್ವರ ನಾಯ್ಕ ತಮ್ಮ ಪುತ್ರ ಅವಿನಾಶಗೆ ನೆರೆಯ ಆಂಧ್ರ ಪ್ರದೇಶ ಯುವತಿ ಜೊತೆ ವಿವಾಹ ಮಾಡುವ ಮೂಲಕ ಕೋವಿಡ್- 19 ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಡಾ. ಕೆ. ಚರಣಿ ಮತ್ತು ಪಿ. ಅವಿನಾಶ ಅವರ ವಿವಾಹ ಸೋಮವಾರ ಹರಪನಹಳ್ಳಿ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಸಂಬಂಧಿಕರ ಸಮ್ಮುಖದಲ್ಲಿ ನೆರವೇರಿತು.
ವಿವಾಹ ಸಮಾರಂಭದಲ್ಲಿ ವಧು ಸೇರಿದಂತೆ, ವಧುವಿನ ಸಂಬಂಧಿಕರು ಸುಮಾರು 300 ಜನ ಆಂಧ್ರಪ್ರದೇಶದಿಂದ ಆಗಮಿಸಿದ್ದರು. ಆಂಧ್ರಪ್ರದೇಶದಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿದ್ದು, ವಿವಾಹಕ್ಕೆ ಆಗಮಿಸಿದ ತಮ್ಮ ಸಂಬಂಧಿಕರನ್ನು ಶಾಸಕರು ಕ್ವಾರಂಟೈನ್ನಲ್ಲಿಟ್ಟಿದ್ದರಾ? ಎನ್ನುವ ಪ್ರಶ್ನೆ ಜನ ಸಾಮಾನ್ಯರಲ್ಲಿ ವ್ಯಕ್ತವಾಗಿದೆ. ಜನ ಸಾಮಾನ್ಯರಿಗೆ ಒಂದು ನ್ಯಾಯ ಶಾಸಕರಿಗೆ ಒಂದು ನ್ಯಾಯ ಎಂದು ಶಾಸಕರ ವಿರುದ್ಧ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.