ETV Bharat / state

ಶಾಸಕ ಸೋಮಶೇಖರ ರೆಡ್ಡಿ ಪ್ರಚೋದನಕಾರಿ ಭಾಷಣ ಹಿನ್ನೆಲೆ: ಕಾಂಗ್ರೆಸ್ ದೂರು

ಸಿಎಎ, ಎನ್​ಆರ್​ಸಿ ಕಾಯ್ದೆ ಬೆಂಬಲಿಸಿ ನಾಗರಿಕರ ವೇದಿಕೆಯಿಂದ ನಗರದ ಗಡಿಗಿ ಚನ್ನಪ್ಪ ವೃತ್ತದಲ್ಲಿ ಬಹಿರಂಗ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಶಾಸಕ ಜಿ.ಸೋಮಶೇಖರ ರೆಡ್ಡಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾಂಗ್ರೆಸ್ ಜಿಲ್ಲಾ ಘಟಕ, ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಡಿವೈಎಸ್​ಪಿ ರಾಮರಾವ್ ಅವರಿಗೆ ದೂರು ನೀಡಿದ್ದಾರೆ.

ಕಾಂಗ್ರೆಸ್ ದೂರು ದಾಖಲು!
Congress lodges complaint!
author img

By

Published : Jan 4, 2020, 7:14 AM IST

ಬಳ್ಳಾರಿ : ಎನ್​ಆರ್​ಸಿ, ಸಿಎಎ ಕಾಯ್ದೆ ಬೆಂಬಲಿಸಿ ನಡೆದ ಬಹಿರಂಗ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಶಾಸಕ ಜಿ.ಸೋಮಶೇಖರ ರೆಡ್ಡಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾಂಗ್ರೆಸ್ ಜಿಲ್ಲಾ ಘಟಕ, ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಡಿವೈಎಸ್​ಪಿ ರಾಮರಾವ್ ಅವರಿಗೆ ದೂರು ನೀಡಿದ್ದಾರೆ.

complaint copy
ದೂರಿನ ಪ್ರತಿ

ಸಿಎಎ, ಎನ್​ಆರ್​ಸಿ ಕಾಯ್ದೆಯನ್ನು ಬೆಂಬಲಿಸಿ ನಾಗರಿಕರ ವೇದಿಕೆಯಿಂದ ನಗರದ ಗಡಿಗಿ ಚನ್ನಪ್ಪ ವೃತ್ತದಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ಧ ಕೀಳು ಮಟ್ಟದ ಶಬ್ದಗಳನ್ನು ಬಳಸಿದ್ದಾರೆ. ಪೌರತ್ವ (ತಿದ್ದುಪಡಿ) ಕಾಯ್ದೆ ಒಪ್ಪದವರು, ವಿರೋಧಿಸುವವರು ದೇಶವನ್ನು ಬಿಟ್ಟು ಹೋಗಿ ಎಂಬಂತಹ ಪ್ರಚೋದನಕಾರಿ ಮಾತುಗಳನ್ನಾಡಿದ್ದಾರೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜೆ.ಎಸ್.ಆಂಜನೇಯಲು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಬಳಿಕ ಮಾತನಾಡಿದ ಪ್ರಚಾರ ಸಮಿತಿ ಅಧ್ಯಕ್ಷ ಜೆ.ಎಸ್. ಆಂಜನೇಯಲು, ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಅಧಿಕಾರ ಸರ್ಕಾರಕ್ಕೂ ಇದೆ. ಅದನ್ನು ವಿರೋಧಿಸುವ ಅಧಿಕಾರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೂ ಇದೆ. ಆದರೆ ಕಾಯ್ದೆಯನ್ನು ವಿರೋಧಿಸುವವರು ದೇಶ ಬಿಟ್ಟು ಹೋಗಿ ಎನ್ನುವುದಕ್ಕೆ ಇವರು ಯಾರು? ಎಂದು ವಾಗ್ದಾಳಿ ನಡೆಸಿದರು.

Intro:ಶಾಸಕ ಸೋಮಶೇಖರರೆಡ್ಡಿ ಪ್ರಚೋದನಕಾರಿ ಭಾಷಣದ
ವಿರುದ್ದ ಕಾಂಗ್ರೆಸ್ ದೂರು ದಾಖಲು!
ಬಳ್ಳಾರಿ: ಎನ್ ಆರ್ ಸಿ, ಸಿಎಎ ಕಾಯಿದೆ ಬೆಂಬಲಿಸಿ ನಗರದಲ್ಲಿಂದು ನಡೆದ ಬಹಿರಂಗ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ವಿರುದ್ಧ ಸೂಕ್ತಕ್ರಮ ಕೈಗೊಳ್ಳು
ವಂತೆ ಆಗ್ರಹಿಸಿ ಕಾಂಗ್ರೆಸ್ ಜಿಲ್ಲಾ ಘಟಕ, ಅಲ್ಪಸಂಖ್ಯಾತ ಸಮುದಾಯದ ಮುಖಂಡರು ನಗರ ಡಿವೈಎಸ್ ಪಿ ರಾಮ
ರಾವ್ ಅವರಿಗೆ ದೂರು ನೀಡಿದರು.
ಸಿಎಎ, ಎನ್ ಆರ್ ಸಿ ಕಾಯಿದೆಯನ್ನು ಬೆಂಬಲಿಸಿ ದೇಶಭಕ್ತ ನಾಗರಿಕರ ವೇದಿಕೆಯಿಂದ ನಗರದ ಗಡಿಗಿ ಚನ್ನಪ್ಪ ವೃತ್ತದಲ್ಲಿ ಬಹಿರಂಗ ಸಭೆಯನ್ನು ಆಯೋಜಿಸಲಾಗಿತ್ತು.ಈ ಸಭೆಯಲ್ಲಿ ಭಾಷಣ ಮಾಡಿದ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ಧ ಕೀಳು ಶಬ್ದಗಳನ್ನು ಬಳಸಿದ್ದಾರೆ. ಬೇವಕೂಫ್ ಎಂದು ನಿಂದಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಒಪ್ಪದವರು, ವಿರೋಧಿಸುವವರು ದೇಶವನ್ನು ಬಿಟ್ಟು ಹೋಗಿ ಎಂದು ಪ್ರಚೋದನಕಾರಿ ಮಾತು ಗಳನ್ನಾಡಿದ್ದಾರೆ ಎಂದು ಕಾಂಗ್ರೆಸ್ ನ ಪ್ರಚಾರ ಸಮಿತಿ
ಅಧ್ಯಕ್ಷ ಜೆ.ಎಸ್.ಆಂಜನೇಯಲು ದೂರಿನಲ್ಲಿ ತಿಳಿಸಿದ್ದಾರೆ.
ಬಳಿಕ ಮಾತನಾಡಿದ ಪ್ರಚಾರ ಸಮಿತಿ ಅಧ್ಯಕ್ಷ ಜೆ.ಎಸ್. ಆಂಜನೇಯಲು, ಕಾಯಿದೆಗಳನ್ನು ತಿದ್ದುಪಡಿ ಮಾಡುವ
ಅಧಿಕಾರ ಸರ್ಕಾರಕ್ಕೂ ಇದೆ. ಅದನ್ನು ವಿರೋಧಿಸುವ ಅಧಿ
ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೂ ಇದೆ. ಆದರೆ, ಕಾಯ್ದೆಯನ್ನು ವಿರೋಧಿಸುವವರು ದೇಶ ಬಿಟ್ಟು ಹೋಗಿ ಎಂದರೆ ಈ ದೇಶ ಅವರಪ್ಪನ ಆಸ್ತಿನಾ ಎಂದು ವಾಗ್ದಾಳಿ ನಡೆಸಿದ ಆಂಜನೇಯಲು, ಇದು 2008 ಅಲ್ಲ. 2020.
ನಿಮ್ಮ ಬೆದರಿಕೆಗೆ ಕಾಂಗ್ರೆಸ್ ಕೈ ಕಟ್ಟಿ ಕುಳಿತಿಲ್ಲ. ನೀವು ಸಹ ಮೈ ಎಚ್ಚರಿಕೆಯಿಂದ ಮಾತನಾಡ ಬೇಕು. ಹೆಚ್ಚು ಕಮ್ಮಿಯಾದರೆ, ನಿಮ್ಮ ಮನೆ ತೂರಿ ಪ್ರತಿಭಟನೆ ಮಾಡುತ್ತೇವೆ ಎಂದು ಶಾಸಕ ಸೋಮಶೇಖರ ರೆಡ್ಡಿಗೆ ತಿರುಗೇಟು ನೀಡಿದರು.
Body:ಶಾಸಕ ಸೋಮಶೇಖರ ರೆಡ್ಡಿಯವರು ಕಾಂಗ್ರೆಸ್ ಕಾರ್ಯಕರ್ತರಿಗೆ ದೂರವಾಣಿ ಕರೆ ಮಾಡಿ ಬಿಜೆಪಿಗೆ ಬರುವಂತೆ ಬೆದರಿಕೆಯೊಡ್ಡುತ್ತಿದ್ದಾರೆ. ನಿಮ್ಮ ಬೆದರಿಕೆಗಳಿಗೆ ನಾವು ಬಗ್ಗಲ್ಲ. ಮುಂದಿನ ದಿನಗಳಲ್ಲಿ ನಾವು ಸಹ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ನಿಮ್ಮಂತಹ ಕೆಟ್ಟ ಮಾತುಗಳನ್ನು ನಾವು ಬಳಸಲ್ಲ. ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ಜಿಲ್ಲೆ ಶಾಂತವಾಗಿತ್ತು. ಇವರ ಭಾಷಣ ಪ್ರಚೋದನಕಾರಿಯಾಗಿದೆ. ಇದರಿಂದ ಶಾಂತಿ ಭಂಗ ವಾಗುವ ಸಾಧ್ಯತೆಯಿದೆ. ಕಾನೂನನ್ನು ಖರೀದಿಸಲು ಹೋಗಿದ್ದ ಇವರಿಂದ ಸಂವಿಧಾನಕ್ಕೆ ಗೌರವ ನಿರೀಕ್ಷಿಸಲಾಗದು. ಹಾಗಾಗಿ ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಯಾಗದಂತೆ ಸೋಮಶೇಖರ ರೆಡ್ಡಿ ವಿರುದ್ಧ ದೇಶದ್ರೋಹಿ ಪ್ರಕರಣ ದಾಖಲಾಗಬೇಕು. ಅಲ್ಲದೇ ಶೀಘ್ರದಲ್ಲೇ ಶಾಸಕ ಸೋಮಶೇಖರರೆಡ್ಡಿ ವಿರುದ್ಧ ಅದೇ ಗಡಿಗಿ ಚನ್ನಪ್ಪ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಪಕ್ಷದ ಮುಖಂಡರಾದ ಹುಮಾಯೂನ್ ಖಾನ್, ಹನುಮ ಕಿಶೋರ ವೆಂಕಟೇಶ್ ಹೆಗಡೆ, ಅಂಜಿನಿ, ವಿಷ್ಣುವರ್ದನ್, ವಿಕ್ರಮ, ಅಯಾಜ್ ಇದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_6_MLA_SOMASHEKARREDY_AGAINST_CNG_COMPLENT_7203310

KN_BLY_6a_MLA_SOMASHEKARREDY_AGAINST_CNG_COMPLENT_7203310

KN_BLY_6b_MLA_SOMASHEKARREDY_AGAINST_CNG_COMPLENT_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.