ಬಳ್ಳಾರಿ/ ಹೊಸಪೇಟೆ: ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಒಟ್ಟು 6 ಮಂದಿಯಲ್ಲಿ ಬ್ಲ್ಯಾಕ್ ಫಂಗಸ್ ಖಾಯಿಲೆ ಪತ್ತೆಯಾಗಿದೆ.
ಬಳ್ಳಾರಿ ಜಿಲ್ಲೆಯ ಐವರು ಮತ್ತು ವಿಜಯನಗರ ಜಿಲ್ಲೆ ಹರಪ್ಪನಹಳ್ಳಿ ತಾಲೂಕಿನ ನಿಲಗುಂದದ ವ್ಯಕ್ತಿಯಲ್ಲಿ ಹೊಸ ರೋಗ ಕಂಡು ಬಂದಿದೆ. ಬಳ್ಳಾರಿಯ ಐದು ಮಂದಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವಿಜಯನಗರದ ವ್ಯಕ್ತಿಯನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ಕಳುಹಿಸಲಾಗಿದೆ.
ಇದನ್ನೂ ಓದಿ : ದಾವಣಗೆರೆಯಲ್ಲಿ 6 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆ
ಹೊಸ ರೋಗಕ್ಕೆ ತುತ್ತಾಗಿರುವ ಹರಪ್ಪನಹಳ್ಳಿಯ ವ್ಯಕ್ತಿ ಕೋವಿಡ್ ಸೋಂಕಿಗೆ ಒಳಗಾಗಿ 12 ದಿನಗಳ ಕಾಲ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಇನ್ನೇನು ಗುಣಮುಖನಾಗಿ ಡಿಸ್ಚಾರ್ಜ್ ಆಗ ಬೇಕೆನ್ನುವಷ್ಟರಲ್ಲಿ, ಕಣ್ಣು ಉಬ್ಬು, ತಲೆನೋವು ಕಂಡು ಬಂದಿದೆ. ಪರೀಕ್ಷಿಸಿದಾಗ ಕರಿ ಫಂಗಸ್ ಅಂಟಿಕೊಂಡಿರುವುದು ಗೊತ್ತಾಗಿದೆ.