ETV Bharat / state

ಹೊಸಪೇಟೆಯಲ್ಲಿ ಒಂದೇ ದಿನದ ಅಂತರದಲ್ಲಿ ಅಕ್ಕ-ತಮ್ಮ ಕೊರೊನಾಗೆ ಬಲಿ - sister and brother died of corona in Hosapete ,

ಕೊರೊನಾ ಮಹಾಮಾರಿಗೆ ಒಂದೇ ದಿನದ ಅಂತರದಲ್ಲೇ ಅಕ್ಕ-ತಮ್ಮ ಇಬ್ಬರೂ ಮೃತಪಟ್ಟಿರುವ ಮನಕಲಕುವ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.

Hospet
ಸಾವಿಯೋ ಸ್ಮಿತ್ ಹಾಗೂ ಕ್ಯಾರೋಲಿನ್ ಲೂಸಿಯಾ ಸ್ಮಿತ್
author img

By

Published : May 29, 2021, 1:34 PM IST

ಹೊಸಪೇಟೆ: ಕೊರೊನಾ ಮಹಾಮಾರಿಗೆ ಒಂದೇ ದಿನದ ಅಂತರದಲ್ಲೇ ಅಕ್ಕ, ತಮ್ಮ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ

ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಕ್ಯಾರೋಲಿನ್ ಲೂಸಿಯಾ ಸ್ಮಿತ್ (45) ಹಾಗೂ ಸಹೋದರ ಸಾವಿಯೋ ಸ್ಮಿತ್ (42) ಮೃತರು. ಸಾವಿಯೋ ಸ್ಮಿತ್ ಕಳೆದ 8 ದಿನಗಳಿಂದ ಬಳ್ಳಾರಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಶುಕ್ರವಾರ ಮೃತಪಟ್ಟಿದ್ದಾರೆ.

ಇನ್ನು ಕ್ಯಾರೋಲಿನ್ ಲೂಸಿಯಾ ಸ್ಮಿತ್ ಅವರಿಗೆ ಕೆಲ ದಿನಗಳ ಹಿಂದೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಬಳ್ಳಾರಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕ್ಯಾರೋಲಿನ್ ಲೂಸಿಯಾ ಸ್ಮಿತ್ ಹೊಸಪೇಟೆ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಕೋವಿಡ್ ಸಮೀಕ್ಷೆ ಕಾರ್ಯದಲ್ಲಿ ಸ್ವಯಂ ಸೇವಕಿಯಾಗಿದ್ದರು.

ಓದಿ: ಪತಂಜಲಿ ಔಷಧಿ ನೀಡಿದ ಆಸ್ಪತ್ರೆಗಳನ್ನ ತೋರಿಸಿ: ಬಾಬಾ ರಾಮ್​​ದೇವ್​ಗೆ ಐಎಂಎ ಸವಾಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.