ಬಳ್ಳಾರಿ : ಕೇವಲ ಮತ ಬ್ಯಾಂಕ್ಗೋಸ್ಕರ ಸಿದ್ದರಾಮಯ್ಯ ಭಯೋತ್ಪಾದಕರ ಕಾಲು ನೆಕ್ಕುತ್ತಿದ್ದಾರೆ. ಸಿದ್ದರಾಮಯ್ಯರ ಚಿಂತನೆ ರಾವಣದು, ಮುಖ ಮಾತ್ರ ಸಿದ್ದರಾಮಯ್ಯನದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ. ಬಳ್ಳಾರಿಯ ತೋರಣಗಲ್ನಲ್ಲಿ ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಕಾರ್ಯಕಾರಿಣಿಯಲ್ಲಿ ಭಾಗವಹಿಸಿ ಮಾತನಾಡಿದ ಕಟೀಲ್, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಭಿಕ್ಷಾಟನೆ ಮಾಡುವ ಸ್ಥಿತಿಗೆ ಹೋಗಿದ್ದಾರೆ. ಈ ಬಾರಿ ಜನ ಸಿದ್ದರಾಮಣ್ಣನ್ನ ಓಡಿಸಬೇಕು ಎಂದು ನಿಶ್ಚಯ ಮಾಡಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಸಿದ್ದರಾಮಣ್ಣಾ ನಿಮ್ಮ ರಾಷ್ಟ್ರೀಯ ಅಧ್ಯಕ್ಷ ಯಾವ ಕಾರಣಕ್ಕೆ ಬೇಲ್ ಮೇಲೆ ಇದ್ದಾರೆ. ರಾಹುಲ್ ಗಾಂಧಿ ಬಾವ ರಾಬರ್ಟ್ ವಾದ್ರಾ ಬೇಲ್ ಮೇಲೆ ಇದ್ದಾರೆ. ನಿಮ್ಮ ರಾಜ್ಯದ ಅಧ್ಯಕ್ಷರು ಬೇಲ್ನಲ್ಲಿದ್ದಾರೆ. ಈಗ ಚಾರ್ಜ್‌ಶೀಟ್ ಬೀಳ್ತಿದೆ. ಇವರೆಲ್ಲಾ ಏನು ಸ್ವಾತಂತ್ರ್ಯ ಹೋರಾಟ ಮಾಡಿದ್ರಾ? ಎಂದು ಲೇವಡಿ ಮಾಡಿದರು.
ಇವತ್ತು ಕಾಂಗ್ರೆಸ್ ಸೇರಬೇಕು ಅಂದ್ರೆ ಅವನ ಮೇಲೆ ಕನಿಷ್ಠ 50 ಕ್ರಿಮಿನಲ್ ಕೇಸ್ ಇರಬೇಕು. ಭ್ರಷ್ಟರ ಪಾರ್ಟಿ ಕಾಂಗ್ರೆಸ್, ಕ್ರಿಮಿನಲ್ಗಳ ಪಾರ್ಟಿ ಕಾಂಗ್ರೆಸ್, ಉಗ್ರವಾದಿಗಳ ಪಾರ್ಟಿ ಕಾಂಗ್ರೆಸ್ ಆಗಿದೆ. ಅಲ್ಪಸಂಖ್ಯಾತರಿಗೆ ಶಾದಿ ಭಾಗ್ಯ ಕೊಟ್ರಿ, ಅಲ್ಪ ಸಂಖ್ಯಾತ ಪತ್ರಕರ್ತರಿಗೆ ಲ್ಯಾಪ್‌ಟಾಪ್, ಅಲ್ಪ ಸಂಖ್ಯಾತರ ಶಾಲಾ ಮಕ್ಕಳಿಗೆ ಮಾತ್ರ ಪ್ರವಾಸ ಕೊಟ್ಟವರು ಸಿದ್ದರಾಮಣ್ಣ.
ಶಾಲೆಯಲ್ಲಿ ಮಕ್ಕಳನ್ನ, ಪತ್ರಕರ್ತರನ್ನ, ಸಮಾಜದಲ್ಲಿ ಸಮುದಾಯವನ್ನ, ಕೊನೆಗೆ ವೀರಶೈವ-ಲಿಂಗಾಯತ ಸಮಾಜ ಒಡೆಯೋ ಪ್ರಯತ್ನ ಮಾಡಿದ್ದು ಸಿದ್ದರಾಮಯ್ಯ ಎಂದು ಕಟೀಲ್ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದರು.
ಇದನ್ನೂ ಓದಿ: ಅಮಿತ್ ಶಾಗಿಂತಲೂ, ರಾಜನಾಥ್ ಸಿಂಗ್ ಮೋದಿ ಸಂಪುಟದ ಜನಪ್ರಿಯ ಸಚಿವ.. ಹೀಗಂತಿದೆ ಸಮೀಕ್ಷೆ..