ETV Bharat / state

ಕುರಿ ಹಿಂಡಿನಂತೆ ಪ್ರಯಾಣಿಕರನ್ನು ತುಂಬುವ ಸಾರಿಗೆ ಸಂಸ್ಥೆ ಬಸ್​ಗಳು

ಬಸ್​ಗಳಲ್ಲಿ ಕೊರೊನಾ ನಿಯಮ ಗಾಳಿಗೆ ತೂರಲಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ..

GOVERNMENT BUS
ಸರ್ಕಾರಿ ಬಸ್
author img

By

Published : Sep 15, 2020, 10:03 PM IST

ಹೊಸಪೇಟೆ: ನಗರದಲ್ಲಿ ಸಂಚರಿಸುವ ಸಾರಿಗೆ ಸಂಸ್ಥೆಯ ಬಸ್​ಗಳಲ್ಲಿ ಕುರಿ ಹಿಂಡಿನಂತೆ ಪ್ರಯಾಣಿಕರನ್ನು ತುಂಬಿ ಸಾಮಾಜಿಕ ಅಂತರ ನಿಯಮ ಗಾಳಿಗೆ ತೂರಲಾಗಿದೆ ಎಂದು ಇಲ್ಲಿನ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬಸ್​ಗಳಲ್ಲಿ ಸೀಟ್​ಗಳು ಖಾಲಿ ಇಲ್ಲದಿದ್ದರೂ ಪ್ರಯಾಣಿಕರನ್ನು ತುಂಬಲಾಗುತ್ತಿದೆ. ಸಾಮಾಜಿಕ ಅಂತರ ಎಂಬುದು ಮರೆಯಾಗಿದೆ. ಪ್ರಯಾಣಿಕರು ಒಬ್ಬರಿಗೊಬ್ಬರು ಹತ್ತಿರ ನಿಲ್ಲುತ್ತಿದ್ದಾರೆ.‌ ಇದು ಕೊರೊನಾ ಮತ್ತಷ್ಟು ವ್ಯಾಪಿಸಲು ಸಹಕಾರಿಯಾಗಲಿದೆ.

ಬಸ್​ಗಳಲ್ಲಿ ಕೊರೊನಾ ನಿಯಮ ಗಾಳಿಗೆ ತೂರಲಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಸಂಬಂಧ ಹೊಸಪೇಟೆ ಎನ್ಇಕೆಎಸ್​ಆರ್​ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ಮಾತನಾಡಿ, ಬಸ್​ನಲ್ಲಿ ಪ್ರಯಾಣಿಕರು ನಿಲ್ಲುವಂತಿಲ್ಲ.‌‌ ಕುಳಿತುಕೊಂಡು ಪ್ರಯಾಣಿಸಬೇಕು. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.