ಬಳ್ಳಾರಿ: ಗಣಿನಾಡು ಬಳ್ಳಾರಿ ನಗರದ ಕೊರೊನಾ ವಾರಿಯರ್ಸ್ ಗಳಾದ ವಿವಿಧ ಪೊಲೀಸ್ ಠಾಣೆ, ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಸನ್ಮಾರ್ಗ ಗೆಳೆಯರ ಬಳಗ ಮೇಳ, ವಾದ್ಯಗಳೊಂದಿಗೆ ಅಭಿನಂದನೆ ಸಲ್ಲಿಸಿದೆ.
ಕಳೆದ 45 ದಿನಗಳಿಂದ ನಗರದಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡಿದ ನಗರದ ಗಾಂಧಿ ನಗರ ಪೊಲೀಸ್ ಠಾಣೆ, ಗ್ರಾಮಾಂತರ ಪೊಲೀಸ್ ಠಾಣೆ, ಬ್ರೂಸ್ ಪೇಟೆ ಪೊಲೀಸ್ ಠಾಣೆ, ಕೌಲ ಬಜಾರ್ ಪೊಲೀಸ್ ಠಾಣೆ, ಸಂಚಾರ ಪೊಲೀಸ್ ಠಾಣೆ ಪೊಲೀಸ್ ಸಿಬ್ಬಂದಿ ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ, ಜಿಲ್ಲಾ ವೈದ್ಯಕೀಯ ವಿಭಾಗ, ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ, 108 ತುರ್ತು ಆರೋಗ್ಯ ವಾಹನ ಸಿಬ್ಬಂದಿ, ಟೀಮ್ ದುರ್ಗ ಪಡೆ ಸೇರಿ 500 ಕ್ಕಿಂತ ಹೆಚ್ಚಿನ ಸಿಬ್ಬಂದಿಗೆ ಶಾಲು ಹೊದಿಸಿ ಹೂಮಳೆಗರಿದು ಅಭಿನಂದನೆ ಸಲ್ಲಿಸಿದರು.