ಬಳ್ಳಾರಿ: ಜಿಲ್ಲೆಯಲ್ಲಿ 'ಸಂಕ್ರಾಂತಿ ವೈಭವ-2020'ರ ಕಲೆ ಮತ್ತು ಕಲಾವಿದರ ಸಮ್ಮಿಲನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದು, ಚಿತ್ರಕಲೆ, ನೃತ್ಯ ಕರಾಟೆ ಪ್ರದರ್ಶನ, ಟ್ರೆಡಿಷನಲ್ ಫ್ಯಾಷನ್ ಶೋ, ಗಾಯನ ಸ್ಪರ್ಧೆ ನಡೆಯಿತು.
ನಗರದ ಸೆಂಟಿನರಿ ಹಾಲ್‌ನಲ್ಲಿ ಶ್ರೀ ಮಹಾದೇವ ಎಜುಕೇಷನ್, ಆರ್ಟ್ ಆ್ಯಂಡ್ ಕಲ್ಚರಲ್ ಟ್ರಸ್ಟ್, ಶ್ರೀ ಮಾತೃ ಮಹಿಳಾ ಮಂಡಳಿಯ ನೇತೃತ್ವದಲ್ಲಿ ಎರಡು ದಿನಗಳ ( 4 ರಿಂದ 5 ) ವರೆಗೆ ಸಂಕ್ರಾಂತಿ ವೈಭವ ಕಾರ್ಯಕ್ರಮ ನಡೆಯುತ್ತಿದೆ.
ಈ ಕಾರ್ಯಕ್ರಮದಲ್ಲಿ ಯುವತಿಯರು, ಮಹಿಳೆಯರು ನೃತ್ಯ, ಹಾಡು, ಕಲೆಗಳಲ್ಲಿ ಭಾಗವಹಿಸಿದ್ದು ವಿಶೇಷವಾಗಿದೆ. ಕಾರ್ಯಕ್ರಮದಲ್ಲಿ ರಂಗೋಲಿ, ಮೆಹಂದಿ, ಫೇಸ್ ಪೇಂಟಿಂಗ್, ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಆಯೋಜಕರಾದ ಪುಷ್ಪಲತ ಬಿ. ಬಸವರಾಜ್ ತಿಳಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ನೃತ್ಯ, ಹಾಡು, ಚಿತ್ರಕಲೆ ಪ್ರದರ್ಶನ ನೀಡಿದ ಕಲಾವಿದರಿಗೆ ಪ್ರಶಸ್ತಿ ಪತ್ರ ಹಾಗೂ ಮೊಮೆಂಟೋ ನೀಡಿ ಗೌರವಿಸಲಾಯಿತು.