ETV Bharat / state

ಈಗ ನಿರಾಳ: ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ ಸಂಡೂರಿನ ಮಹಿಳೆ - ಆಕೆಯ ಗಂಡನ ರಕ್ಷಣೆ - ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ ಬಳ್ಳಾರಿ ದಂಪತಿ

ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ ಬಳ್ಳಾರಿ ಜಿಲ್ಲೆಯ ಸಂಡೂರಿನ ಮಹಿಳೆ ಹಾಗೂ ಅವರ ಗಂಡ ಸುರಕ್ಷಿತವಾಗಿದ್ದು, ದೆಹಲಿಗೆ ಆಗಮಿಸುತ್ತಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

sandur woman who was in afghanistan rescued
ತನ್ವೀನ್ ದಂಪತಿ ರಕ್ಷಣೆ
author img

By

Published : Aug 21, 2021, 7:38 PM IST

ಬಳ್ಳಾರಿ: ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದಕೊಂಡಿದ್ದ ಜಿಲ್ಲೆಯ ಸಂಡೂರಿನ ಮಹಿಳೆ ಹಾಗೂ ಆತನ ಗಂಡನನ್ನು ಸಂರಕ್ಷಿಸಲಾಗಿದೆ. ಸಂಡೂರಿನ ನಿವಾಸಿಯಾದ ತನ್ವೀನ್ ತನ್ನ ಪತಿ ಸಯ್ಯದ್ ಜಲಾಲ್ ಜೊತೆ ಸುರಕ್ಷಿತವಾಗಿ ತಾಯ್ನಾಡಿಗೆ ಹಿಂತಿರುಗುತ್ತಿದ್ದಾರೆ.

ಅಬ್ದುಲ್ ಸತ್ತರ್

ಸಯ್ಯದ್ ಜಲಾಲ್ ಅವರು ಮೂಲತಃ ಅಫ್ಘಾನಿಸ್ತಾನ ದೇಶದವರು. ಕಳೆದ ಮೂರು ವರ್ಷದ ಹಿಂದೆ ತನ್ವೀನ್ ಅವರಯ ಸಯ್ಯದ್ ಜಲಾಲ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ತನ್ವೀನ್ ಅವರು ಬೆಂಗಳೂರಿನಲ್ಲಿ ಇಂಜಿನಿಯರ್ ವೃತ್ತಿ ಮಾಡುವಾಗ ಸಯ್ಯದ್ ಜಲಾಲ್ ಪರಿಚಯವಾಗಿತ್ತು. ಬಳಿಕ 2018ರಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದರು.

ಸಂಡೂರಿನ ಅಬ್ದುಲ್ ಸತ್ತರ್ ಅವರ ಮಗಳು ತನ್ವೀನ್:

ಇಮಾಮರು ಇಬ್ಬರ ಒಪ್ಪಿಗೆ ಪಡೆದು ಮದುವೆ ಮಾಡಿದ್ದರು. ಮದುವೆಗೆ ಸಯ್ಯದ್ ಜಲಾಲ್​ನ ತಾಯಿ ಹಾಗೂ ಸಹೋದರಿ ಬಂದಿದ್ದರು. ಹುಡುಗಿ ತಂದೆ ದಾವಣಗೆರೆ ಮೂಲದವರು. ತಾಯಿ ತವರೂರು ಸಂಡೂರು, ಕುಟುಂಬ ಸಮೇತ ಸಂಡೂರಿನಲ್ಲಿಯೇ ವಾಸವಾಗಿದ್ದಾರೆ. ಸತ್ತರ್ ಸಾಬ್ ಅವರಿಗೆ ಇಬ್ಬರು ಮಕ್ಕಳು. ತನ್ವೀನ್ ದೊಡ್ಡ ಮಗಳು , ಮಗ ಮನಾನ್ ಕುಟುಂಬದ ಹೇಳಿಕೆ ಪ್ರಕಾರ ತನ್ವೀನ್ ಹಾಗೂ ಪತಿ ಇಬ್ಬರು ಸುರಕ್ಷಿತವಾಗಿದ್ದಾರೆ.

ಇಬ್ಬರನ್ನೂ ರಕ್ಷಣೆ ಮಾಡಿರುವುದಾಗಿ ಭಾರತೀಯ ರಾಯಭಾರಿ ಕಚೇರಿಯಿಂದ ಕುಟುಂಬಸ್ಥರಿಗೆ ಮಾಹಿತಿ ದೊರತಿದೆ. ಕಳೆದ ಒಂದು ವಾರದಿಂದ ಆತಂಕದಲ್ಲಿದ್ದ ಕುಟುಂಬ ಇದೀಗ ನಿರಾಳವಾಗಿದೆ. ಇಂದು ಸಂಜೆ ಸಂಜೆ ಅಥವಾ ನಾಳೆ ದೆಹಲಿಗೆ ಬರಲಿದ್ದಾರೆ ಎಂದು ಭಾರತೀಯ ರಾಯಭಾರಿ ಕಚೇರಿಯಿಂದ ಮಾಹಿತಿ ಬಂದಿದೆ ಎಂದು ತನ್ವೀನ್ ಕುಟುಂಬಸ್ಥರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.