ETV Bharat / state

ಆರ್​​​ಟಿಪಿಸಿಆರ್​​​​ ಟೆಸ್ಟ್​​​ನಿಂದ ಕೋವಿಡ್ ಸೋಂಕಿತರ ಸಂಖ್ಯೆ ಇಳಿಕೆ: ಡಿಸಿ ನಕುಲ್

author img

By

Published : Nov 6, 2020, 4:45 PM IST

ಬಳ್ಳಾರಿಯಲ್ಲಿ ಆರ್​​ಟಿಪಿಸಿಆರ್​​​​​ ಟೆಸ್ಟ್ ಮಾಡುತ್ತಿರುವುದರಿಂದ ಕೊರೊನಾ ಗಣನೀಯವಾಗಿ ತಗ್ಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

declining
ನಕುಲ್

ಬಳ್ಳಾರಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವುದಕ್ಕೆ ಆರ್​ಟಿಪಿಸಿಆರ್​​​​ ಟೆಸ್ಟ್​​ ಮುಖ್ಯ ಕಾರಣವೆಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

ನಗರದ ಡಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಆ್ಯಂಟಿಜೆನ್ ಕಿಟ್​ಗಳಿಂದ ಕೊರೊನಾ ಟೆಸ್ಟ್ ಮಾಡಲಾಗುತ್ತಿತ್ತು. ಆದರೆ ಈಗ ಆರ್​ಟಿಪಿಸಿಆರ್ ಟೆಸ್ಟ್ ಬೆಸ್ಟ್ ಅನ್ನಿಸುತ್ತಿದ್ದು, ಹೆಚ್ಚೆಚ್ಚು ಟೆಸ್ಟ್ ಮಾಡಲಾಗುತ್ತಿದೆ. ಇದರಿಂದ ಸೋಂಕಿತರನ್ನು ಬಹುಬೇಗನೆ ಪತ್ತೆ ಹಚ್ಚಬಹುದು. ಪ್ರತಿದಿನ ಅಂದಾಜು 2800ರಿಂದ 3000 ಮಂದಿಯನ್ನ ಈ ಕೋವಿಡ್ ಟೆಸ್ಟ್​ಗೆ ಒಳಪಡಿಸಲಾಗುತ್ತಿದೆ ಎಂದರು.

ಆರ್​​​ಟಿಪಿಸಿಆರ್​​​​ ಟೆಸ್ಟ್​​​ನಿಂದ ಕೋವಿಡ್ ಸೋಂಕಿತರ ಸಂಖ್ಯೆ ಇಳಿಮುಖ: ಡಿಸಿ ನಕುಲ್

ಸೋಂಕಿತರ ಪ್ರಮಾಣ ಕಡಿಮೆಯಾಗಿದೆ ಅಂದ ಮಾತ್ರಕ್ಕೆ ಕೋವಿಡ್ ನಿಯಂತ್ರಣಕ್ಕೆ ಬಂದಿದೆ ಅಂತಲ್ಲ. ಸೋಂಕು ಹರಡುವಿಕೆ ಪ್ರಮಾಣ ತಗ್ಗಿದೆಯಷ್ಟೇ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಜತೆಗೆ ಸ್ಯಾನಿಟೈಸರ್​​ ಬಳಸಬೇಕು ಎಂದು ಹೇಳಿದರು.

ಈಗಾಗಲೇ ಜಿಲ್ಲೆಯ ಆಯಾ ತಹಶೀಲ್ದಾರ್​ಗಳಿಗೆ ಸಭೆ, ಸಮಾರಂಭಗಳನ್ನು ಬಹಳ ಎಚ್ಚರಿಕೆಯಿಂದ ನಡೆಸುವಂತೆ ಸೂಚಿಸಲಾಗಿದೆ. ಅಲ್ಲಿ ಏನಾದರೂ ಅನಾಹುತಗಳು ಸಂಭವಿಸಿದರೆ ಆಯೋಜಕರೇ ಹೊಣೆಗಾರರಾಗಿರುತ್ತಾರೆ ಎಂದು ಎಚ್ಚರಿಕೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.