ETV Bharat / state

ಆರ್​​ಟಿಐ ಕಾರ್ಯಕರ್ತ ಟಿ.ಶ್ರೀಧರ ಕೊಲೆ ಪ್ರಕರಣ: ಮತ್ತೆ ಮೂವರ ಬಂಧನ - Hosapete

ಆರ್​​ಟಿಐ ಕಾರ್ಯಕರ್ತ ಟಿ.ಶ್ರೀಧರ ಕೊಲೆ ಪ್ರಕರಣ ಸಂಬಂಧ ಒಟ್ಟು 9 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ತಿಳಿಸಿದರು.

RTI activist T. Sreedhar
ಆರ್​​ಟಿಐ ಕಾರ್ಯಕರ್ತ ಟಿ.ಶ್ರೀಧರ
author img

By

Published : Jul 25, 2021, 2:49 PM IST

ಹೊಸಪೇಟೆ (ವಿಜಯನಗರ): ಆರ್​​ಟಿಐ ಕಾರ್ಯಕರ್ತ ಟಿ.ಶ್ರೀಧರ ಕೊಲೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ವಿಜಯ ನಗರ ಜಿಲ್ಲೆಯ ಹರಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಮಂಜುನಾಥ (32), ರಾಯದುರ್ಗ ಹಾಲೇಶ(28) ಹಾಗು ರಾಯದುರ್ಗದ ಬಸವರಾಜ್ (30) ಬಂಧಿತರು. ಜುಲೈ15 ರಂದು ಸಂಜೆ ಹರಪನಹಳ್ಳಿ ಪಟ್ಟಣದ ಎಡಿಬಿ ಕಾಲೆಜು ಮೈದಾನದಲ್ಲಿ ಟಿ.ಶ್ರೀಧರ ಹತ್ಯೆಯಾಗಿತ್ತು. ಈ ಬಗ್ಗೆ ಪತ್ನಿ ಶಿಲ್ಪಾ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದರು.

ಇದನ್ನೂ ಓದಿ: ಹೊಸಪೇಟೆ: ಆರ್​ಟಿಐ ಕಾರ್ಯಕರ್ತನ ಬರ್ಬರ ಕೊಲೆ

ಜು.19 ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಾಮದುರ್ಗದ ವಾಗೀಶ್, ರಾಮದುರ್ಗದ ಯಲ್ಲಪ್ಪ, ಹಳೇ ಬೇಡರ ಹನುಮಂತಪ್ಪ, ಮ್ಯಾಕಿ ಹನುಮಂತ, ರಾಮದುರ್ಗದ ಹನುಮಂತ, ಹೆಚ್.ಕೆ.ಹಾಲೇಶ್‌ನನ್ನು ಬಂಧಿಸಲಾಗಿತ್ತು.

ಇಂದು ಮತ್ತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 9 ಜನ ಆರೋಪಿತರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ತಿಳಿಸಿದರು.

ಇದನ್ನೂ ಓದಿ: ಹೊಸಪೇಟೆ RTI ಕಾರ್ಯಕರ್ತನ ಕೊಲೆ ಪ್ರಕರಣದ ಜಾಡು ಹಿಡಿಯಲು 3 ತಂಡ ರಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.