ETV Bharat / state

ಕಾರಿಗೆ ಬೈಕ್ ಡಿಕ್ಕಿ: ಇಬ್ಬರ ಸ್ಥಿತಿ ಗಂಭೀರ.. ಓರ್ವ ಸಾವು - ಬಳ್ಳಾರಿಯಲ್ಲಿ ಕಾರಿಗೆ ಬೈಕ್ ಡಿಕ್ಕಿ ಇಬ್ಬರ ಸ್ಥಿತಿ ಗಂಭೀರ ಓರ್ವ ಸಾವು

ಕಂಪ್ಲಿ - ಕುರುಗೋಡು ರಸ್ತೆಯಲ್ಲಿರುವ ಎಪಿಎಂಸಿ ಬಳಿ ಇಂದು ಕಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್​ನಲ್ಲಿದ್ದ ಓರ್ವ ಸವಾರ ಸಾವನ್ನಪ್ಪಿದ್ದು, ಇಬ್ಬರು ಸವಾರರ ಸ್ಥಿತಿ ಚಿಂತಾಜನಕವಾಗಿದೆ.

ಕಾರಿಗೆ ಬೈಕ್ ಡಿಕ್ಕಿ
ಕಾರಿಗೆ ಬೈಕ್ ಡಿಕ್ಕಿ
author img

By

Published : Jul 31, 2021, 7:39 PM IST

ಬಳ್ಳಾರಿ: ಜಿಲ್ಲೆಯ ಕಂಪ್ಲಿ ಪಟ್ಟಣದ ಕಂಪ್ಲಿ- ಕುರುಗೋಡು ರಸ್ತೆಯಲ್ಲಿರುವ ಎಪಿಎಂಸಿ ಬಳಿ ಇಂದು ಮುಂಬದಿಯಾಗಿ ಚಲಿಸುತ್ತಿದ್ದ ಕಾರಿಗೆ ಬೈಕ್​​​ವೊಂದು ಡಿಕ್ಕಿ ಹೊಡೆದ ಪರಿಣಾಮ‌‌ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಓರ್ವ ಚಿಕಿತ್ಸೆ ಫಲಕಾರಿಯಾಗದೇ ವಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಈ ಅಪಘಾತದಲ್ಲಿ ನಗರದ ಶೈಲೇಶ, ಸುನಿಲ್, ಅಬ್ಬಾಸ್ ಗಾಯಗೊಂಡಿದ್ದು, ಕಂಪ್ಲಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಅಲ್ಲಿಂದ ಹೆಚ್ಚುವರಿ ಚಿಕಿತ್ಸೆಗೆಂದು ವಿಮ್ಸ್ ಆಸ್ಪತ್ರೆಗೆ ಈ ಮೂವರನ್ನ ದಾಖಲಿಸಲಾಯಿತು.

‌ಚಿಕಿತ್ಸೆ ಫಲಿಸದೇ ಅಬ್ಬಾಸ್ ಸಾವನ್ನಪ್ಪಿದ್ದು, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ಕಂಪ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Watch: ಚಲಿಸುತ್ತಿದ್ದ ರೈಲು ಏರುವಾಗ ಕೆಳಗೆ ಬಿದ್ದ ಮಹಿಳೆ..ಆಪತ್ಬಾಂಧವನಾಗಿ ಬಂದು ರಕ್ಷಿಸಿದ ಕಾನ್ಸ್​ಟೇಬಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.