ಬಳ್ಳಾರಿ : ಬಳ್ಳಾರಿ ಐಜಿ ನಂಜುಂಡಸ್ವಾಮಿ ಡಿಎಆರ್ ಪೊಲೀಸ್ ವಸತಿ ಗೃಹಗಳ ಭೇಟಿಗಾಗಿ ಬರುವ ಕಾರಣ ಕಳೆದ ಮೂರು ದಿನಗಳಿಂದ ಪೊಲೀಸ್ ವಸತಿ ಗೃಹದ ಆವರಣದಲ್ಲಿನ ತ್ಯಾಜ್ಯವನ್ನು ಹೋಮ್ ಗಾರ್ಡ್ಗಳಿಂದ ಸ್ವಚ್ಛ ಮಾಡಿಸಲಾಗಿದೆ.
ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿನ ಪೊಲೀಸ್ ಪೇದೆ ಮತ್ತು ಅಧಿಕಾರಿಗಳು ವಸತಿ ಗೃಹಗಳ ಸುತ್ತಲೂ ಇರುವ ಕಸ, ಚರಂಡಿ ಮತ್ತು ತ್ಯಾಜ್ಯವನ್ನು 53 ಹೋಮ್ ಗಾರ್ಡ್ಗಳಿಂದ ಸ್ವಚ್ಛ ಮಾಡಿಸಿದ್ದಾರೆ. ಆದ್ರೆ ಪಾಲಿಕೆಯಿಂದ ಮಾಡಿಸಬೇಕಾದ ಕೆಲಸವನ್ನು ಹೋಮ್ ಗಾರ್ಡ್ಗಳಿಂದ ಮಾಡಿಸುತ್ತಿದ್ದಾರೆಂದು ತಿಳಿದ ಅಧಿಕಾರಿಗಳು ಈ ರೀತಿಯ ಕೆಲಸ ಹೇಗೆ ಮಾಡಿಸಿದ್ರಿ? ಎಂದು ಪ್ರಶ್ನಿಸಿದ್ದಾರೆ.
ಈ ವಿಚಾರವನ್ನ ಹೋಮ್ ಗಾರ್ಡ್ ಕಮಾಂಡೆಂಟ್ ಶಕೀಬ್ ಅವರು ಡಿ.ಎ.ಆರ್ - ಡಿವೈಎಸ್ಪಿ ಸಿದ್ದನಗೌಡ ಪಾಟೀಲ್ ಅವರಿಗೆ ಫೋನ್ ಕರೆ ಮೂಲಕ ಮಾತನಾಡಿ, ಪೊಲೀಸ್ ಇಲಾಖೆ ವಸತಿ ಗೃಹದ ಆವರಣದಲ್ಲಿನ ಚರಂಡಿ, ತ್ಯಾಜ್ಯಗಳನ್ನು ಎತ್ತಿಸುವ ಕೆಲಸ ಹೋಮ್ ಗಾರ್ಡ್ ಅವರೊಂದಿಗೆ ಮಾಡಿಸಿದ ವಿಡಿಯೊ, ಫೋಟೋ ನೋಡಿದ್ದೇನೆ. ಹಾಗೆ ಮಾಡಿಸುವಾಗಿಲ್ಲವೆಂದು ಎಚ್ಚರಿಕೆ ನೀಡಿದರು.
ಈಟಿವಿ ಭಾರತದೊಂದಿಗೆ ಮಾತನಾಡಿದ ಹೋಮ್ ಗಾರ್ಡ್ ಕಮಾಂಡೆಂಟ್ ಶಕೀಬ್, 2013ರಲ್ಲಿ 162 ಹೋಮ್ ಗಾರ್ಡ್ಗಳನ್ನು ಸಿವಿಲ್ ಪೊಲೀಸ್ ಇಲಾಖೆ ಸೆಂಟ್ರಿ, ಎಸ್ಕಾಟ್, ರೆಟಿನ್ ಇನ್ನಿತರ ಕೆಲಸಗಳಿಂದ ಪೊಲೀಸ್ ಇಲಾಖೆಯಲ್ಲಿ ಕೆಲಸ ನೀಡಿದ್ದೇವೆ. ಆದರಂತೆ 2019 ನವೆಂಬರ್ 8 ರಿಂದ 53 ಹೋಮ್ ಗಾರ್ಡ್ಗಳನ್ನು ಡಿ.ಎ.ಆರ್ಗೆ ನೀಡಲಾಗಿದೆ. ಇನ್ನೂ ಈ ರೀತಿಯ ಕೆಲಸಗಳು ಮುಂದಿನ ದಿನಗಳಲ್ಲಿ ಆಗದಂತೆ ನೋಡಿಕೊಳ್ಳುತ್ತೆವೆಂದು ತಿಳಿಸಿದರು.
ಈ ರೀತಿಯ ಕೆಲಸ ಮಾಡಿಸಿ ಸಿಬ್ಬಂದಿಗೆ ಅನಾರೋಗ್ಯಪೀಡಿತರಾದ್ರೆ ನಮ್ಮನ್ನು ನೋಡಿಕೊಳ್ಳುವವರಾರೆಂದು ಪ್ರಶ್ನೆ ಮಾಡಿದ ಗೃಹರಕ್ಷಕ ದಳದ ಸಿಬ್ಬಂದಿಗಳು ತಮ್ಮ ನೋವನ್ನು ದೂರವಾಣಿ ಮೂಲಕ ಈಟಿವಿ ಭಾರತದೊಂದಿಗೆ ಹೇಳಿಕೊಂಡಿದ್ದಾರೆ.