ETV Bharat / state

ರಾಜಕೀಯ ರಂಗಪ್ರವೇಶ ಪಡೆದ ಕಾಲುವೆ ದುರಸ್ತಿ ಕಾಮಗಾರಿ: ಸ್ಥಳದಲ್ಲೇ ಮೊಕ್ಕಾಂ ಹೂಡಿದ ಜನಪ್ರತಿನಿಧಿಗಳು - Bellary Canal Repair Work Issue

ಬಳ್ಳಾರಿ ತಾಲೂಕಿನ ಕಾಲುವೆ ದುರಸ್ತಿ ಕಾಮಗಾರಿ ಈಗ ರಾಜಕೀಯ ರಂಗ ಪ್ರವೇಶ ಪಡೆದಿದೆ. ಹಾಗಾಗಿ ಸಚಿವ ರಾಮುಲು, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ ನಾಗೇಂದ್ರ, ಆಂಧ್ರ ಸಚಿವ ಗುಮ್ಮನೂರು ಜಯರಾಂ ಸೇರಿದಂತೆ ಹಲವರು ದುರಸ್ತಿ ಕಾಮಗಾರಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಕಾಮಗಾರಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ ಜನಪ್ರತಿನಿಧಿಗಳು
Representatives visits canal repair work site
author img

By

Published : Nov 2, 2022, 4:57 PM IST

Updated : Nov 2, 2022, 7:54 PM IST

ಬಳ್ಳಾರಿ: ಆಂಧ್ರ ಮತ್ತು ಕರ್ನಾಟಕದ ಲಕ್ಷಾಂತರ ಎಕರೆ ಪ್ರದೇಶಕ್ಕೆ ನೀರುಣಿಸುತ್ತಿರುವ ಕಾಲುವೆಯ ಪಿಲ್ಲರ್​​ವೊಂದು ಕೊಚ್ಚಿಕೊಂಡು ಹೋಗಿರುವುದು ಎರಡು ರಾಜ್ಯಗಳ ರೈತರಿಗೆ ಸಂಕಷ್ಟಕ್ಕೆ ತಂದಿದೆ. ಹೀಗಾಗಿ ಸಮಾರೋಪಾದಿಯಲ್ಲಿ ನಡೆಯುತ್ತಿರುವ ಪಿಲ್ಲರ್ ದುರಸ್ತಿ ಕಾಮಗಾರಿಗೆ ಜನಪ್ರತಿನಿಧಿಗಳು ಕೂಡ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

Representatives visits canal repair work site
ಕಾಮಗಾರಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ ಜನಪ್ರತಿನಿಧಿಗಳು

ಬಳ್ಳಾರಿ ತಾಲೂಕಿನ ಬಿಡಿ ಹಳ್ಳಿ ಬಳಿಯ ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಎಲ್​​ಎಲ್​​ಸಿ ಸೇತುವೆಯ ಪಿಲ್ಲರ್​ವೊಂದು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ. ಪರಿಣಾಮ ಕಾಲುವೆಗೆ ನೀರು ಬಂದ್ ಮಾಡಲಾಗಿದೆ. ನೀರು ಬಂದ್ ಮಾಡಿ 25 ದಿನ ಕಳೆಯುತ್ತಾ ಬರುತ್ತಿದೆ. ಇದೇ ನೀರನ್ನು ನಂಬಿ ಕುಳಿತಿರುವ ಬಳ್ಳಾರಿ ತಾಲೂಕಿನ 20 ಗ್ರಾಮಗಳು ಹಾಗೂ ಆಂಧ್ರದ ಹತ್ತಾರು ಗ್ರಾಮಗಳು ಸೇರಿದಂತೆ ಸುಮಾರು 3 ಲಕ್ಷ ಎಕರೆ ಬೆಳೆ ಹಾನಿಯಾಗುವ ಸಾಧ್ಯತೆ ಇದೆ. ಈ ವಿಳಂಬಕ್ಕೆ ಬೇಸತ್ತು ನೂರಾರು ರೈತರ ಪ್ರತಿಭಟನೆ ನಡೆಸುತ್ತಿದ್ದಾರೆ.

ನೀರು ಬಿಟ್ಟು ಬೆಳೆ ಉಳಿಸಿಕೊಡುವಂತೆ ರೈತರು ನಡೆಸುತ್ತಿರುವ ಪ್ರತಿಭಟನೆಯಿಂದ ಪಿಲ್ಲರ್ ದುರಸ್ತಿ ಕಾಮಗಾರಿ ಕೂಡ ಸಮಾರೋಪಾದಿಯಲ್ಲಿ ನಡೆಯುತ್ತಿದೆ.

ರೈತರ ಒತ್ತಾಯಕ್ಕೆ ಮಣಿದು ಖುದ್ದು ಜಿಲ್ಲಾ ಉಸ್ತುವಾರಿ ಸಚಿವ ಬಿ ಶ್ರೀರಾಮುಲು ಅವರೇ ನಿನ್ನೆಯಿಂದ ಕಾಮಗಾರಿ ಸ್ಥಳದಲ್ಲೇ ವಾಸ್ತವ್ಯ ಹೂಡಿದ್ದಾರೆ. ಇವತ್ತು ಪಿಲ್ಲರ್ ದುರಸ್ತಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಬಳಿಕ ಕಾಲುವೆಗೆ ನೀರು ಬಿಡಲಾಗುವುದು ಎಂದು ಪ್ರತಿಭಟನಾ ನಿರತ ರೈತರಿಗೆ ಭರವಸೆ ನೀಡಿದ್ದಾರೆ. ಸೇತುವೆ ಮೇಲೆ ಹೊಸದಾಗಿ ಸೇತುವೆ ನಿರ್ಮಾಣ ಮಾಡಲು ಕರ್ಣಾಟಕ ಸರ್ಕಾರದಿಂದ ಪ್ರಸ್ತಾವನೆ ಮಾಡಲಾಗುತ್ತದೆ. ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿದ್ದು, ಆಂಧ್ರ ಸರ್ಕಾರದ ಜೊತೆ ಕೂಡ ಚರ್ಚೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

ಸಚಿವ ರಾಮುಲು ಜೊತೆಗೆ ಶಾಸಕ ಬಿ ನಾಗೇಂದ್ರ, ಆಂಧ್ರ ಸಚಿವ ಗುಮ್ಮನೂರು ಜಯರಾಂ ಸೇರಿದಂತೆ ಹಲವು ನಾಯಕರು ದುರಸ್ತಿ ಕಾಮಗಾರಿಯ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ನಾಗೇಂದ್ರ, ರಾಜಕೀಯಕ್ಕಾಗಿ ಸ್ಥಳದಲ್ಲಿ ಮೊಕ್ಕಂ ಹೂಡಿಲ್ಲ. ಈ ಕ್ಷೇತ್ರದ ಶಾಸಕನಾಗಿ ನನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ಅತಿ ಹೆಚ್ಚು ನೀರು ಹರಿದು ಬಂದಿದ್ದರಿಂದ ಈ ಅವಘಡ ಸಂಭವಿಸಿದೆ: ಶ್ರೀರಾಮುಲು

Last Updated : Nov 2, 2022, 7:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.