ETV Bharat / state

ತುಂಗಭದ್ರಾ ಜಲಾಶಯದಿಂದ ಎಲ್ ಎಲ್ ಸಿ ಕಾಲುವೆಗೆ 100 ಕ್ಯೂಸೆಕ್ ನೀರು - Bellary 100 cusec of water from LLC Canal News

ಮೊದಲ ಹಂತದಲ್ಲಿ 100 ಕ್ಯೂಸೆಕ್ ನೀರನ್ನ ಹರಿಬಿಡಲಾಗಿದೆ. ಎರಡನೇಯ ಹಂತದಲ್ಲಿ ಅಂದಾಜು 600 ಕ್ಯೂಸೆಕ್ ನೀರನ್ನ ಹರಿಬಿಡಲು ನಿರ್ಧರಿಸಲಾಗಿದೆ. ಹೀಗೆ ಹಂತಹಂತವಾಗಿ ಉಪ ಕಾಲುವೆಗೆ ನೀರು ಹರಿಸಲಾಗುವುದು.

ತುಂಗಭದ್ರಾ ಜಲಾಶಯ
ತುಂಗಭದ್ರಾ ಜಲಾಶಯ
author img

By

Published : Jul 26, 2020, 11:31 AM IST

ಬಳ್ಳಾರಿ: ಗಣಿ ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಎಲ್ ಎಲ್ ಸಿ ಉಪಕಾಲುವೆಗೆ ಶನಿವಾರ ಸಂಜೆ ನೂರು ಕ್ಯೂಸೆಕ್ ನೀರನ್ನ ಹರಿಬಿಡಲಾಯಿತು.

ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಜಿ.ನಾಗಮೋಹನ ಅವರು ಜಲಾಶಯದ ಹೊರ ಹರಿವಿಗೆ ಚಾಲನೆ ನೀಡಿದರು. ಮೊದಲ ಹಂತದಲ್ಲಿ 100 ಕ್ಯೂಸೆಕ್ ನೀರನ್ನ ಹರಿಬಿಡಲಾಗಿದೆ. ಎರಡನೇಯ ಹಂತದಲ್ಲಿ ಅಂದಾಜು 600 ಕ್ಯೂಸೆಕ್ ನೀರನ್ನ ಹರಿಬಿಡಲು ನಿರ್ಧರಿಸಲಾಗಿದೆ. ಹೀಗೆ ಹಂತಹಂತವಾಗಿ ಉಪ ಕಾಲುವೆಗೆ ನೀರು ಹರಿಸಲಾಗುವುದು. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು ನಾಗಮೋಹನ್ ತಿಳಿಸಿದರು​. ತುಂಗಭದ್ರಾ ಮಂಡಳಿಯ ಸೂಪರಿಂಡೆಂಟ್ ಇಂಜಿನಿಯರ್ ಕೆ.ವಿ. ರಮಣ ಇದ್ದರು.

ಶನಿವಾರ ತುಂಗಭದ್ರಾ ಜಲಾಶಯಕ್ಕೆ ಅಂದಾಜು 15,512 ಕ್ಯೂಸೆಕ್ ನಷ್ಟು ನೀರು ಒಳಹರಿವು ಹರಿದುಬಂದಿದೆ. ಸುಮಾರು 37.978 ಟಿಎಂಸಿಯಷ್ಟು ಸಾಮರ್ಥ್ಯದ ನೀರು ಈವರೆಗೆ ಸಂಗ್ರಹವಾಗಿದೆ. 1,611.39 ಗರಿಷ್ಠ ಮಟ್ಟದ ನೀರು ಜಲಾಶಯದಲ್ಲಿದೆ.

ಇಂದು ತುಂಗಭದ್ರಾ ಜಲಾಶಯಕ್ಕೆ 8868 ಕ್ಯೂಸೆಕ್ ನಷ್ಟು ನೀರು ಒಳಹರಿವು ಹರಿದುಬಂದಿದೆ. ಸುಮಾರು 38.706 ಟಿಎಂಸಿಯಷ್ಟು ಸಾಮರ್ಥ್ಯದ ನೀರು ಈವರೆಗೂ ಸಂಗ್ರಹವಾಗಿದೆ. ಸದ್ಯ 1611.75 ಗರಿಷ್ಠ ಮಟ್ಟದ ನೀರು ಜಲಾಶಯದಲ್ಲಿದೆ. ಅಂದಾಜು 289 ಕ್ಯೂಸೆಕ್ ಹೊರ ಹರಿವಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.