ಬಳ್ಳಾರಿ : ಇಂದು ನಗರದ ಬಿಡಿಎಎ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪಡಿತರ ವಿತರಕರ ಸಂಘ ಬೆಂಗಳೂರು ಮತ್ತು ಬಳ್ಳಾರಿ ಜಿಲ್ಲೆಯ ನೇತೃತ್ವದಲ್ಲಿ ರಾಜ್ಯಮಟ್ಟದ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ರಾಜ್ಯ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ, ಹಣ ಬಿಡುಗಡೆ ಮಾಡುವಂತೆ ಕುಮಾರಸ್ವಾಮಿಯವ್ರನ್ನ ಕೇಳಿದ್ದಾಗ ರೈತರ ಸಾಲ ಮನ್ನಾ ವಿಷಯ ಹೇಳಿ ಇದನ್ನು 9 ತಿಂಗಳು ಮುಂದಕ್ಕೆ ಹಾಕಿದ್ರು ನಂತರ ಡಿಸೆಂಬರ್ 5 ರಂದು ಕ್ಯಾಬಿನೆಟ್ನಲ್ಲಿ 13 ರೂಪಾಯಿ ನೀಡುತ್ತೇವೆ ಎಂದು ಹಣ ಬಿಡುಗಡೆ ಮಾಡಿದ್ದರು ಎಂದು ತಿಳಿಸಿದ್ದಾರೆ.
ಇದೇ ವೇಳೆ ಈಟಿವಿ ಭಾರತ್ನೊಂದಿಗೆ ಮಾತನಾಡಿದ ಜಿಲ್ಲಾ ಕಾರ್ಯಾಧ್ಯಕ್ಷ ವೆಂಕಟೇಶ ಹೆಗಡೆ, ಸರ್ಕಾರಿ ನ್ಯಾಯ ಬೆಲೆ ಅಂಗಡಿ ಮಾಲೀಕರಿಗೆ ಬರಬೇಕಾದ ಹಣವನ್ನು 3 ತಿಂಗಳಿನಿಂದ ಸರ್ಕಾರ ಬಿಡುಗಡೆ ಮಾಡಿಲ್ಲ ಕೂಡಲೇ ಸರ್ಕಾರ ಈ ಹಣವನ್ನು ಬಿಡುಗಡೆಗೊಳಿಸಬೇಕೆಂದು ಮನವಿ ಮಾಡಿಕೊಂಡರು.
ವಿತಕರ ರಾಘವೇಂದ್ರ ಮಾತನಾಡಿ, ಜನವರಿಯಿಂದ ಜುಲೈ ವರೆಗೆ ಏಳು ತಿಂಗಳಲ್ಲಿ ಮೂರು-ನಾಲ್ಕು ಬಾರಿ ಮಾತ್ರ ಬೇಳೆ ವಿತರಕರಿಗೆ ದೊರೆತಿದೆ. ಇನ್ನು ಉಳಿದ ತಿಂಗಳು ಬೇಳೆನೂ ಬಂದಿಲ್ಲ, ಹಣನೂ ಬಂದಿಲ್ಲ ಇದ್ರಿಂದ ಜೀವನ ನಿರ್ವಹಣೆಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪಡಿತರ ವಿತರಕರ ಸಂಘ ಬೆಂಗಳೂರಿನ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ, ಕಾರ್ಯದರ್ಶಿ ಮೀನಳ್ಳಿ ತಾಯಣ್ಣ , ಜಿಲ್ಲಾ ಕಾರ್ಯಾಧ್ಯಕ್ಷ ವೆಂಕಟೇಶ ಹೆಗಡೆ, ರಾಘವೇಂದ್ರ , ಎಂ. ಸದಾಶಿವ, ಉಂಡೆಕರ್ ಪ್ರಕಾಶ್, ಖಜಾಂಚಿ ನಟರಾಜ್ ಮತ್ತು ರಾಜ್ಯ ಮತ್ತು ಜಿಲ್ಲೆಯ ವಿತರಕರು ಹಾಜರಿದ್ದರು.