ಬಳ್ಳಾರಿ: ಗಣಿನಾಡಿನಲ್ಲಿ ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಇದೀಗ ಮಳೆಯಾಗುತ್ತಿದೆ.
ಬೆಳಗ್ಗೆ 11 ಗಂಟೆಯ ಹೊತ್ತಿಗೆ ತುಂತುರು ಮಳೆ ಸುರಿಯಲಾರಂಭಿಸಿದ್ದು, ಕೆಲ ಹೊತ್ತು ನಿಂತಿತ್ತು. ಇದೀಗ ಧಾರಾಕಾರ ಮಳೆಯಾಗುತ್ತಿದ್ದು, ಕೆಲಕಾಲ ಜನಜೀವನ ದುಸ್ತರಗೊಂಡಿದೆ.
ಈ ಸುದ್ದಿಯನ್ನೂ ಓದಿ: ಮಲೆನಾಡಲ್ಲಿ ಮಳೆ ಕಾಟ; ಒಣ ಹಾಕಿದ ಕಾಫಿ ನೀರು ಪಾಲು
ಸರ್ಕಾರಿ ಕಚೇರಿಗಳ ಮುಂದೆ ನಾನಾ ಅರ್ಜಿಗಳನ್ನು ಕೈಯಲ್ಲಿ ಹಿಡಿದುಕೊಂಡು ನಿಂತವರು ಸೇರಿದಂತೆ ಹಲವರು ಸಮಸ್ಯೆ ಅನುಭವಿಸಿದ ದೃಶ್ಯಗಳು ಕಂಡುಬಂದಿವೆ.