ETV Bharat / state

ಗಂಧದ ಗುಡಿ ರಿಲೀಸ್: ನಟರಾಜ ಥಿಯೇಟರ್ ಮುಂದೆ ಜಮಾಯಿಸಿದ ಅಭಿಮಾನಿಗಳು - ಬಳ್ಳಾರಿಯ ನಟರಾಜ ಥಿಯೇಟರ್

ಅಪ್ಪು ನಟಿಸಿದ ಕೊನೆಯ ಚಿತ್ರ ಗಂಧದ ಗುಡಿ ಫಸ್ಟ್ ಡೇ ಫಸ್ಟ್ ಶೋ ನೋಡ್ಬೇಕು ಎಂಬ ಧಾವಂತದಲ್ಲಿ ಅಭಿಮಾನಿಗಳು ಬಳ್ಳಾರಿಯ ನಟರಾಜ ಥಿಯೇಟರ್ ಮುಂದೆ ಆಗಮಿಸುತ್ತಿದ್ದಾರೆ.

gandhada gudi
ನಟರಾಜ ಥಿಯೇಟರ್ ಮುಂದೆ ಜಮಾಯಿಸಿದ ಅಭಿಮಾನಿಗಳು
author img

By

Published : Oct 28, 2022, 9:24 AM IST

ಬಳ್ಳಾರಿ: ಪುನೀತ್ ರಾಜ್​ಕುಮಾರ್ ನಮ್ಮನ್ನಗಲಿ ಇಂದಿಗೆ ಒಂದು ವರ್ಷ. ಅಪ್ಪು ಕನಸಿನ ಗಂಧದ ಗುಡಿ ಸಿನಿಮಾ ರಿಲೀಸ್ ಆಗಿದ್ದು, ಬಳ್ಳಾರಿಯ ನಟರಾಜ ಥಿಯೇಟರ್​ನಲ್ಲಿ ಬೆಳಗ್ಗೆ 7 ಗಂಟೆಗೆ ಮೊದಲ‌ ಶೋ ಪ್ರಾರಂಭವಾಗಿದೆ. ಸಿನಿಮಾ ವೀಕ್ಷಿಸಲು ಜನರು ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದು, ಮೊದಲ ಪ್ರದರ್ಶನ ಹೌಸ್​ಫುಲ್ ಆಗಿದೆ.

ಅಪ್ಪು ನಟಿಸಿದ ಕೊನೆಯ ಚಿತ್ರ ಗಂಧದ ಗುಡಿ ಫಸ್ಟ್ ಡೇ ಫಸ್ಟ್ ಶೋ ನೋಡ್ಬೇಕು ಎಂಬ ಧಾವಂತದಲ್ಲಿ ಅಭಿಮಾನಿಗಳು ಥಿಯೇಟರ್ ಮುಂದೆ ಆಗಮಿಸುತ್ತಿದ್ದಾರೆ. 750 ಆಸನ ಸಾಮರ್ಥ್ಯ ಇರುವ ನಟರಾಜ ಥಿಯೇಟರ್ ಫುಲ್​ ಆಗಿದೆ. ಬೆಳಗ್ಗೆ 7ಕ್ಕೆ ಮೊದಲ ಶೋ ಪ್ರಾರಂಭವಾಗಿದ್ದು, ಬಳಿಕ 11 ಗಂಟೆಗೆ, ಮಧ್ಯಾಹ್ನ 2ಕ್ಕೆ , ಸಂಜೆ 5ಕ್ಕೆ ಮತ್ತು ರಾತ್ರಿ 8 ಗಂಟೆಗೆ ಇನ್ನುಳಿದ ಶೋ ಪ್ರಾರಂಭವಾಗಿಲಿದೆ. ತೆರೆ ಮೇಲೆ ಅಪ್ಪು ನೋಡಿದ ಅಭಿಮಾನಿಗಳು, ಶಿಳ್ಳೆ ಚಪ್ಪಾಳೆ ಮೂಲಕ ಗಂಧದ ಗುಡಿ ಚಿತ್ರ ಬರಮಾಡಿಕೊಂಡರು.

ನಟರಾಜ ಥಿಯೇಟರ್ ಮುಂದೆ ಜಮಾಯಿಸಿದ ಅಭಿಮಾನಿಗಳು

ಇದನ್ನೂ ಓದಿ: ಅಪ್ಪು ಗಂಧದಗುಡಿ ಪ್ರಿಮಿಯರ್ ಶೋ ನೋಡಿ‌ ಭಾವುಕರಾದ ಅಭಿಮಾನಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.