ETV Bharat / state

ಚುನಾವಣಾ ಕರ್ತವ್ಯ ಮಾಡಲು ತೊಂದರೆ: ಮಹಿಳಾ ನೌಕರರಿಗೆ ಡಿಸಿ ಕ್ಲಾಸ್​​​​ - etv bharath

ಚುನಾವಣಾ ಕರ್ತವ್ಯಕ್ಕೆ ಹಾಜರಾಗಲು ಮಹಿಳಾ ನೌಕರರ ನಿರಾಸಕ್ತಿಗೆ ಬಳ್ಳಾರಿಯ ಜಿಲ್ಲಾಧಿಕಾರಿ ಸರಿಯಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಜಿಲ್ಲಾಧಿಕಾರಿಗೆ ಮನವಿ
author img

By

Published : Apr 9, 2019, 8:54 PM IST

ಬಳ್ಳಾರಿ: ಚಿಕ್ಕ ಮಕ್ಕಳು ಇರುವ ಕಾರಣ ಆರೋಗ್ಯ ಸರಿಯಿಲ್ಲ, ಕೈ ಮುರಿದಿದೆ, ತಮ್ಮನ ಮದುವೆ ಇದೆ ಎನ್ನುವ ಹತ್ತಾರು ಕಾರಣಗಳನ್ನು ಹೊತ್ತು ಜಿಲ್ಲಾಧಿಕಾರಿಗಳನ್ನು ಕಾಣಲು ಬಂದ ಸರ್ಕಾರಿ ಮಹಿಳಾ ನೌಕರರಿಗೆ ಚುನಾವಣೆ ದಿನ ಕರ್ತವ್ಯ ಮಾಡಲೇಬೇಕು ಎಂದು ಡಿಸಿ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಜಿಲ್ಲಾಧಿಕಾರಿ ಮೊರೆ ಹೋದ ಮಹಿಳೆಯರು
ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕಿಯರು, ಉಪನ್ಯಾಸಕಿಯರು ಮತ್ತು ಇನ್ನಿತರ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರು 2019ನೇ ಸಾಲಿನ ಲೋಕಸಭಾ ಚುನಾವಣಾ ಕರ್ತವ್ಯ ಮಾಡಲು ಚಿಕ್ಕ ಮಕ್ಕಳು ಇದ್ದಾರೆ, ಆರೋಗ್ಯ ಸರಿಯಿಲ್ಲ, ಕೈ ಮುರಿದಿದೆ, ವಯಸ್ಸಾಗಿದೆ ಎನ್ನುವ ಹತ್ತಾರು ಕಾರಣಗಳನ್ನು ಹೊತ್ತು ಬಂದಿದ್ದರು. ಬಂದ ಮಹಿಳೆಯರ ಅರ್ಜಿ ಪಡೆದ ಜಿಲ್ಲಾಧಿಕಾರಿ ಡಾ. ರಾಮ ಪ್ರಸಾದ್ ಮನೋಹರ್ ಅವರು ಚುನಾವಣಾ ದಿನದಂದು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಲೇಬೇಕು. ಬೇರೆ ದಿನ ಬೇಕಾದರೇ ರಜೆ ಪಡೆದುಕೊಳ್ಳಿ ಎಂದು ಹೇಳಿದ್ದಾರೆ. ಆದರೆ ನಿಂತಲ್ಲೇ ಜಿಲ್ಲಾಧಿಕಾರಿಯವರ ಆಜ್ಞೆ ಪರಿಹಾರ ಕೇಳಲು ಬಂದ ಮಹಿಳೆಯರ ಆಸೆಗೆ ತಣ್ಣೀರು ಎರಚಿದಂತಾಗಿದೆ. ಈ ಕುರಿತು ಬೇಸರ ವ್ಯಕ್ತಪಡಿಸಿ ಮನೆಗಳಿಗೆ ತೆರಳಿದ್ದಾರೆ.

Intro:ಚುನಾವಣಾ ಕರ್ತವ್ಯ ಮಾಡಲು ತೊಂದರೆ : ಜಿಲ್ಲಾಧಿಕಾರಿ ಮೊರೆ ಹೋದ ಮಹಿಳೆಯರು.

ಚಿಕ್ಕ ಮಕ್ಕಳು ಇರುವ ಕಾರಣ, ಆರೋಗ್ಯ ಸರಿಯಿಲ್ಲ, ಕೈಮುರಿದಿದೆ, ತಮ್ಮನ ಮದುವೆ ಇದೆ ಎನ್ನುವ ಹತ್ತಾರು ಕಾರಣಗಳನ್ನು ಹೋತ್ತು ಜಿಲ್ಲಾಧಿಕಾರಿಗಳನ್ನು ಕಾಣಲು ಬಂದ ಮಹಿಳೆಯರಿಗೆ ಜಿಲ್ಲಾಧಿಕಾರಿ ಚುನಾವಣೆ ದಿನ ಕರ್ತವ್ಯ ಮಾಡಲೇ ಬೇಕು ಎಂದು ಸಲಹೆ ನೀಡಿ ಕಳಿಸಿದರು.

Body:ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕಿಯರು, ಉಪನ್ಯಾಸಕಿಯರು ಮತ್ತು ಇನ್ನಿತರ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರು 2019 ನೇ ಸಾಲಿನ ಲೋಕಸಭಾ ಚುನಾವಣಾ ಮಾಡಲು ಚಿಕ್ಕ ಮಕ್ಕಳು ಇದ್ದಾರೆ, ಆರೋಗ್ಯ ಸರಿಯಿಲ್ಲ, ತಮ್ಮನ ಮದುವೆ ಇದೆ, ಕೈಮುರಿದಿದೆ, ವಯಸ್ಸಾಗಿದೆ ಎನ್ನುವ ಹತ್ತಾರು ಕಾರಣಗಳನ್ನು ಹೋತ್ತು ಬಂದಿದ್ದರು.

ಬಂದ ಮಹಿಳೆಯರು ಅರ್ಜಿ ಪಡೆದ ಜಿಲ್ಲಾಧಿಕಾರಿ ಡಾ.ರಾಮ ಪ್ರಸಾದ್ ಮನೋಹರ್ ಅವರು ಚುನಾವಣಾ ದಿನದೊಂದು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕೆಂದು ಹೇಳಿದರು. ಬೇರೆ ದಿನ ಬೇಕಾದರೇ ರಜೆ ಪಡೆದುಕೊಳ್ಳಿ ಎಂದು ಹೇಳಿದರು. ಆದ್ರೇ ಬಂದ ಮಹಿಳೆಯರು ಬೇಸರ ವ್ಯಕ್ತ ಪಡಿಸಿ ಮನೆಗಳಿಗೆ ತೆರಳಿದರು.

ಜಿಲ್ಲಾಧಿಕಾರಿ ನಿಂತ ಸ್ಥಳದಲ್ಲಿಯೇ ಪರಿಹಾರವನ್ನು ನೀಡಿ ಕಳಿಸಿದರು.

Conclusion:ಒಟ್ಟಾರೆಯಾಗಿ ಈ ಲೋಕಸಭಾ ಚುನಾವಣಾ ಮತ್ತು ಇನ್ನಿತರ ಚುನಾವಣಾ ಸಮಯದಲ್ಲಿ ಸರ್ಕಾರಿಯ ನೌಕರರು ಕೆಲಸ ಮಾಡದೇ ಇರುತ್ತಾರೆ. ಒಂದುಕಡೆ ನಿಜಾವಾದ ಕಾರಣ ಇದ್ದರು ರಜೆ ನೀಡಲ್ಲ ಎನ್ನುವ ಅಂಶ, ಇನ್ನು ಕೆಲವರು ಸುಳ್ಳು ಹೇಳಿ, ಡಾಕ್ಟರ್ ಪತ್ರಗಳನ್ನು ದಾಖಲೆಗಳನ್ನು ನೀಡಿ, ರಾಜಕೀಯ ವ್ಯಕ್ತಿಗಳು ಪ್ರಭಾವ ದಿಂದ ಚುನಾವಣಾ ಸಮಯದಲ್ಲಿ ಕರ್ತವ್ಯ ಕ್ಕೆ ಹಾಜರಾದರೇ ಕಾಲಕಳೆಯುವವರು ಇದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.