ಬಳ್ಳಾರಿ : ಇಂದಿನಿಂದ 1900 ಬೂತ್ಗಳಲ್ಲಿ 3.2 ಲಕ್ಷ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗುತ್ತಿದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಾಪಾಟಿ ತಿಳಿಸಿದರು.
ಓದಿ: ರಾಜ್ಯದಲ್ಲಿಂದು 522 ಮಂದಿಗೆ ಕೊರೊನಾ ದೃಢ: 4 ಮಂದಿ ಬಲಿ
ನಗರದ ರಾಮಯ್ಯ ಕಾಲೋನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆಯ ನೇತೃತ್ವದಲ್ಲಿ ಬಳ್ಳಾರಿಯಲ್ಲಿ 6 ಲಕ್ಷ ಮನೆಗಳು ಇವೆ. ಅದರಲ್ಲಿ 3.2 ಲಕ್ಷದ ಮಕ್ಕಳಿಗೆ ಪೋಲಿಯೋ ಲಸಿಕೆ ಅಭಿಯಾನಕ್ಕೆ ಚಾಲನೆಯನ್ನು ನೀಡಲಾಗಿದೆ.
ಜಿಲ್ಲೆಯಲ್ಲಿ ಇಂದು 1900 ಲಸಿಕೆ ಹಾಕುವ ಬೂತ್‌ಗಳನ್ನು ಮಾಡಲಾಗಿದೆ. ಹಾಗೇ ನಾಳೆಯಿಂದ ಮೂರು ದಿನಗಳ ಕಾಲ ಮನೆಗಳಿಗೆ ಹೋಗಿ ಲಸಿಕೆಯನ್ನು 0 ಯಿಂದ 5 ವರ್ಷದ ಮಕ್ಕಳಿಗೆ ಹಾಕಲಾಗುತ್ತದೆ ಎಂದು ತಿಳಿಸಿದರು.
ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಮಾತನಾಡಿ, ನಗರದಲ್ಲಿ 0 ಮತ್ತು 5 ವರ್ಷದ ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ಹಾಕಿಸಬೇಕು ಎಂದರು. ಭಾರತದಲ್ಲಿ 2010ರಲ್ಲಿ ಪೋಲಿಯೋ ಕೇಸ್ ಕೊನೆಯಾಗಿದೆ ಎಂದು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ ಎಂದರು.
ನಂತರ ಈಟಿವಿ ಭಾರತದೊಂದಿಗೆ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಹೆಚ್.ಎಲ್ ಜರ್ನಾಧನ್, ಬಳ್ಳಾರಿ ಜಿಲ್ಲೆಯಲ್ಲಿರುವ 5 ವರ್ಷದೊಳಗಿನ 3,24,818 ಮಕ್ಕಳಿಗೆ ಇಂದಿನಿಂದ ಲಸಿಕೆ ಹಾಕಲಾಗುತ್ತದೆ. 6 ಲಕ್ಷ 37 ಸಾವಿರದ ಮನೆಗಳಿಗೆ ಹೋಗಿ ಭೇಟಿ ನೀಡಿ ಸಮೀಕ್ಷೆ ಮಾಡಿದ್ದೇವೆ ಎಂದು ತಿಳಿಸಿದರು.