ETV Bharat / state

ಮಾಜಿ ಸಚಿವರ ಮಗನ ವಿವಾಹದಲ್ಲಿ ಸಾಮಾಜಿಕ ಅಂತರವೇ ಮಂಗಮಾಯ

author img

By

Published : Jun 15, 2020, 11:37 PM IST

ರಾಜ್ಯದಲ್ಲಿನ್ನೂ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೇ. ಈ ನಡುವೆ ಜನಪ್ರತಿನಿಧಿ ಎನಿಸಿಕೊಂಡವರೇ ಕೊರೊನಾ ನಿಯಮವನ್ನು ಗಾಳಿಗೆ ತೂರಿರುವ ಘಟನೆ ನಡೆದಿದೆ. ಮಾಜಿ ಸಚಿವ ಪಿ.ಟಿ ಪರಮೇಶ್ವರ್ ನಾಯ್ಕ್ ಮಗನ ವಿವಾಹ ಸಮಾರಂಭದಲ್ಲಿ ಸಾಮಾಜಿಕ ಅಂತರವೇ ಇಲ್ಲದೆ ಜನಸಂದಣಿ ಏರ್ಪಟ್ಟಿರುವುದು ವರದಿಯಾಗಿದೆ.

people forget social distance norms in  former minister son marriage
ಮಾಜಿ ಸಚಿವರ ಮಗನ ವಿವಾಹದಲ್ಲಿ ಸಾಮಾಜಿಕ ಅಂತರವೇ ಮಂಗಮಾಯ

ಬಳ್ಳಾರಿ: ಜಿಲ್ಲೆಯ ಹೂವಿನ ಹಡಗಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರೂ, ಮಾಜಿ ಸಚಿವರಾದ ಪಿ.ಟಿ ಪರಮೇಶ್ವರ ನಾಯ್ಕ ಅವರ ಮಗನ ಮದುವೆ ಸಮಾರಂಭದಲ್ಲಿ ಸಾಮಾಜಿಕ ಅಂತರವೇ ಮಂಗಮಾಯವಾಗಿರುವ ವಿಷಯ ಬೆಳಕಿಗೆ ಬಂದಿದೆ.

ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿಂದು ಮಾಜಿ ಸಚಿವ ಪಿ.ಟಿ ಪರಮೇಶ್ವರ ನಾಯ್ಕ ಅವರ ಪುತ್ರ ಅವಿನಾಶ ವಿವಾಹ ಸಮಾರಂಭ ಆಯೋಜಿಸಲಾಗಿತ್ತು. ಹೆಲಿಕಾಪ್ಟರ್​ನಲ್ಲಿ ಮಾಜಿ ಸಚಿವ ಪಿಟಿಪಿ‌ ಹಾಗೂ ಅವರ ಪುತ್ರ ಅವಿನಾಶ ಸೇರಿ‌ ಇನ್ನಿತರೆ ಕುಟುಂಬ ಸದಸ್ಯರು‌ ಲಕ್ಷ್ಮೀಪುರ ಗ್ರಾಮಕ್ಕಾಗಮಿಸಿದಾಗ, ಹೆಲಿಕಾಪ್ಟರ್ ನೋಡಲು ಗ್ರಾಮಸ್ಥರು ಮುಗಿಬಿದ್ದ ಪ್ರಸಂಗವೂ ನಡೆಯಿತು.

ಬಳಿಕ, ಅವಿನಾಶ ಅವರ ಅರತಕ್ಷತೆ ಕಾರ್ಯಕ್ರಮದಲ್ಲೂ ಕೂಡ ಭಾರೀ ಪ್ರಮಾಣದ ಜನ ಮುಗಿಬಿದ್ದಿದರಿಂದ ವಧು- ವರರ ವೇದಿಕೆ ಜಾತ್ರೆಯಂತಾಗಿತ್ತು.

ಸಾಮಾಜಿಕ ಅಂತರವೇ ಕಾಯ್ದುಕೊಳ್ಳದೇ ಈ ಮದುವೆ ಸಮಾರಂಭದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಅಪಾರ ಪ್ರಮಾಣದ ಕಾರ್ಯಕರ್ತರು ಭಾಗಿಯಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.