ಬಳ್ಳಾರಿ: ಕರ್ನಾಟಕ - ಆಂಧ್ರಪ್ರದೇಶ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಬಳ್ಳಾರಿ ತಾಲೂಕಿನ ಚೆಳ್ಳಗುರ್ಕಿ ಗ್ರಾಮದ ಬಯಲು ಭೂಮಿಯಲ್ಲಿ ಪ್ಯಾರಾ ಮಿಲಿಟರಿ ಫೋರ್ಸ್ ತರಬೇತಿ ಕಾರ್ಯಾಗಾರ ನಡೆಯಿತು.
ಬೆಂಗಳೂರಿನ ಯಲಹಂಕ ಏರ್ಪೋರ್ಟ್ ನಿಂದ ನಿನ್ನೆಯ ದಿನ ಎರಡು ವಿಶೇಷ ವಿಮಾನದ ಮೂಲಕ ಆಗಮಿಸಿದ 3000 ಜನ ಇರುವ ಪ್ಯಾರಾ ಮಿಲಿಟರಿ ಪಡೆಯು ಮೇಲಿಂದ ಪ್ಯಾರಾ ಚೂಟ್ ಮೂಲಕ ಹಾರುವ ಮುಖೇನ ಚೆಳ್ಳಗುರ್ಕಿ ಬಯಲು ಭೂಮಿಯಲ್ಲಿ ಇಳಿದು ನಾನಾ ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಈ ದಿನ ಬೆಂಗಳೂರಿನತ್ತ ಪಯಣ ಬೆಳೆಸಿದರು. ಅಂದಾಜು 3000ಕ್ಕೂ ಅಧಿಕ ಪ್ಯಾರಾ ಮಿಲಿಟರಿ ಪಡೆಯು ಪಾಲ್ಗೊಂಡಿದ್ದರು. ಸುಮಾರು 1200 - 1400 ಅಡಿ ಎತ್ತರದಿಂದ ನೆಲಕ್ಕೆ ಹಾರುವ ದುಸ್ಸಾಹಸಕ್ಕೂ ಈ ಮಿಲಿಟರಿ ಪಡೆ ಕೈಹಾಕಿರೋದು ಕೂಡ ನೋಡುಗರ ವಿಶೇಷ ಗಮನ ಸೆಳೆಯಿತು.
ಭದ್ರತೆ: ಬಳ್ಳಾರಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪ್ಯಾರಾ ಮಿಲಿಟರಿ ಪಡೆ ತರಬೇತಿ ಕಾರ್ಯಾಗಾರಕ್ಕೆ ಸೂಕ್ತ ಭದ್ರತೆಯನ್ನ ಒದಗಿಸಲಾಗಿತ್ತು. ಬಳ್ಳಾರಿ ಗ್ರಾಮಾಂತರ ಡಿವೈಎಸ್ಪಿ ಸತ್ಯನಾರಾಯಣ ರಾವ್, ಮೋಕಾ ಪಿಎಸ್ ಐ ರಘು, ಪಿಡಿಹಳ್ಳಿ ಪಿಎಸ್ ಐ ಶ್ರೀಶೈಲ ತಿಮ್ಮಪ್ಪ ನೇತೃತ್ವದಲ್ಲಿ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಒದಗಿಸಲಾಯಿತು.
ಓದಿ : ನಿಯಮ ಮೀರಿ ತರಗತಿ ಆರಂಭಿಸಿದ ಶ್ರೀರಂಗಪಟ್ಟಣದ ಕೇಂಬ್ರಿಡ್ಜ್ ಶಾಲೆ!