ETV Bharat / state

ಪಂಚರತ್ನ ರಥಯಾತ್ರೆ: ಪತಿಯ ಚಿಕಿತ್ಸೆಗೆ ಕಣ್ಣೀರಿಟ್ಟ ಮಹಿಳೆಗೆ ಹೆಚ್‌ಡಿಕೆ ನೆರವು; ರಸ್ತೆ ಬದಿ ಟೀ, ಮಂಡಕ್ಕಿ ಸೇವನೆ - ಕುಷ್ಟಗಿಯಲ್ಲಿ ಪಂಚರತ್ನ ರಥಯಾತ್ರೆ

ಹೆಚ್​.ಡಿ.ಕುಮಾರಸ್ವಾಮಿ ನೇತೃತ್ವದ ಪಂಚರತ್ನ ರಥಯಾತ್ರೆಯು ಬಳ್ಳಾರಿಯ ಕುಡಿತಿನಿ ಗ್ರಾಮಕ್ಕೆ ಆಗಮಿಸಿದೆ.

Pancharat Rath Yatra in Bellary
ಬಳ್ಳಾರಿಯಲ್ಲಿ ಪಂಚರತ್ನ ರಥಯಾತ್ರೆ
author img

By

Published : Jan 31, 2023, 10:26 AM IST

ಬಳ್ಳಾರಿಯಲ್ಲಿ ಪಂಚರತ್ನ ರಥಯಾತ್ರೆ

ಬಳ್ಳಾರಿ: "ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ರೈತರ ಹಿತ ಕಾಯುವ ಹಾಗೂ ರೈತಪರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕೆಲಸವಾಗಲಿದೆ" ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಹೇಳಿದರು. ಪಂಚರತ್ನ ರಥಯಾತ್ರೆಯ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಕುಡಿತಿನಿ ಗ್ರಾಮಕ್ಕೆ ಆಗಮಿಸಿದ ಅವರು, "ಗ್ರಾಮದಲ್ಲಿ ಧರಣಿನಿರತ ಭೂ ಸಂತ್ರಸ್ತ ರೈತರನ್ನು ಭೇಟಿ ಮಾಡಿ, ನಮ್ಮದು ರೈತಪರ ಸರ್ಕಾರ. ನಮಗೆ ರೈತಾಪಿ ಜನರ ಕಾಳಜಿಯಿದೆ. ಆದರೆ, ರಾಜ್ಯ ಸರ್ಕಾರ ರೈತ ವಿರೋಧಿಯಾಗಿ ವರ್ತಿಸುತ್ತಿದೆ" ಎಂದು ಟೀಕಿಸಿದರು.

"ಕೈಗಾರಿಕೋದ್ದೇಶಕ್ಕಾಗಿ ನಿಮ್ಮ ಭೂಮಿ ವಶಪಡಿಸಿಕೊಳ್ಳಲಾಗಿದೆ. ಆದರೆ ಕೈಗಾರಿಕೆ ಸ್ಥಾಪನೆ ಮಾಡಲಿಲ್ಲ, ಕುಟುಂಬಗಳಿಗೆ ಉದ್ಯೋಗ ನೀಡಲಿಲ್ಲ. ರೈತರಿಂದ ಕಡಿಮೆ ದರದಲ್ಲಿ ಭೂಮಿ ಖರೀದಿಸಿ ಹೆಚ್ಚಿನ ದರಕ್ಕೆ ಮಾರಿಕೊಳ್ಳುವ ಹುನ್ನಾರ ನಡೆದಿದೆ. ಕೆಲವು ಪಟ್ಟಭದ್ರರ ಕೈಗೆ ರೈತರ ಭೂಮಿ ಸೇರುವ ಸಾಧ್ಯತೆ ಇದೆ. ರೈತರನ್ನು ನಂಬಿಸಿ ಮೋಸ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ರೈತ ಪರವಾದ ಯಾವುದೇ ಕಾಳಜಿ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿಲ್ಲ" ಎಂದು ದೂರಿದರು.

"ಮುಂದಿನ ಚುನಾವಣೆಯಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಒಂದೇ ತಿಂಗಳಲ್ಲಿ ಭೂಸಂತ್ರಸ್ಥರ ಸಮಸ್ಯೆ ಬಗೆಹರಿಸುತ್ತೇನೆ. ಈಗ ನಡೆಯಲಿರುವ ವಿಧಾನಮಂಡಲದಲ್ಲಿ ರೈತರ ಪರವಾದ ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳುವುದಿಲ್ಲ. ಕೇವಲ ಲೇಖಾನುದಾನ, ಬಿಲ್ಲುಗಳನ್ನು ಪಾಸ್‌ ಮಾಡಿಕೊಳ್ಳಲು ಅಧಿವೇಶನ ಕರೆದಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಪತಿಯ ಕ್ಯಾನ್ಸರ್ ಕಾಯಿಲೆ ವಿಷಮಿಸಿದ್ದು, ಹೇಗಾದರೂ ಬದುಕಿಸಿ ಕೊಡಿ ಎಂದು ಕಾಲು ಹಿಡಿದು ಬೇಡಿಕೊಂಡ ಮಹಿಳೆಯನ್ನು ಕಂಡು ಬಹಳ ದುಃಖವಾಯಿತು. ಬೆಂಗಳೂರಿಗೆ ನಿಮ್ಮ ಪತಿಯನ್ನು ಕರೆದುಕೊಂಡು ಬನ್ನಿ, ಚಿಕಿತ್ಸೆ ಕೊಡಿಸುವೆ ಎಂದು ಭರವಸೆ ನೀಡಿದ್ದೇನೆ.2/3 pic.twitter.com/XuLVseB4b4

    — ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) January 30, 2023 " class="align-text-top noRightClick twitterSection" data=" ">

ಪತಿಗಾಗಿ ಮಹಿಳೆಯ ಕಣ್ಣೀರು: ಕಂಪ್ಲಿ ತಾಲೂಕಿನ ಹೊಸ ದರೋಜಿ ಗ್ರಾಮದ ಮಹಿಳೆ ಹನುಮಂತಮ್ಮ ಕುಮಾರಸ್ವಾಮಿ ಎದುರು ಕಣ್ಣೀರಿಟ್ಟರು. ಕ್ಯಾನ್ಸರ್‌ನಿಂದ ಬಳಲುತ್ತಿರುವ ತಮ್ಮ ಪತಿಯನ್ನು ಬದುಕಿಸಿ ಕೊಡುವಂತೆ ಅವರು ಮನವಿ ಮಾಡಿದರು. ಮಹಿಳೆಯ ಸಂಕಷ್ಟ ಕಂಡು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಬೆಂಗಳೂರಿಗೆ ಪತಿಯನ್ನು ಕರೆದುಕೊಂಡು ಬಂದರೆ ಚಿಕಿತ್ಸೆ ಕೊಡಿಸುವುದಾಗಿ ಭರವಸೆ ನೀಡಿದರು. ಇದೇ ವೇಳೆ, ಬೆಂಗಳೂರಿಗೆ ಬರಲು ಹಣಕಾಸು ನೆರವು ನೀಡಿದರು.

  • ಕುಷ್ಟಗಿಯಲ್ಲಿ ಪಂಚರತ್ನ ರಥಯಾತ್ರೆ ಮುಗಿಸಿ ಸಂಡೂರಿಗೆ ತೆರಳುವ ಮಾರ್ಗದ ನಡುವೆ ಕಂಪ್ಲಿ ತಾಲೂಕಿನ ದೇವಲಾಪುರದ ರಸ್ತೆಬದಿಯ ಪುಟ್ಟ ಹೋಟೆಲಿನಲ್ಲಿ ಮಂಡಕ್ಕಿ, ಚಹಾ ಸವಿದೆ. ಆ ಮಂಡಕ್ಕಿಯ ರುಚಿಯ ಜತೆಗೆ, ಆ ಜನರ ಪ್ರೀತಿ, ಅಕ್ಕರೆ ವಾತ್ಸಲ್ಯಕ್ಕೆ ಮಾರುಹೋದೆ.1/2#ಪಂಚರತ್ನ_ರಥಯಾತ್ರೆ #ದೇವಲಾಪುರ #ಕಂಪ್ಲಿ pic.twitter.com/mfZUdn6Arc

ಮಂಡಕ್ಕಿ, ಚಹಾ ಸೇವಿಸಿದ ಹೆಚ್‌ಡಿಕೆ: ನಂತರ ಕುಷ್ಟಗಿಯಲ್ಲಿ ಪಂಚರತ್ನ ರಥಯಾತ್ರೆ ಮುಗಿಸಿ ಸಂಡೂರಿಗೆ ತೆರಳುವ ಮಾರ್ಗ ಮಧ್ಯೆ ಕಂಪ್ಲಿ ತಾಲೂಕಿನ ದೇವಲಾಪುರ ಎಂಬ ಹಳ್ಳಿಯ ರಸ್ತೆ ಬದಿಯ ಸಣ್ಣ ಹೋಟೆಲ್‌ನಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮಂಡಕ್ಕಿ, ಚಹಾ ಸವಿದರು. ಹೋಟೆಲ್ ಮಾಲೀಕ ನಾಗಪ್ಪ ಅವರೊಂದಿಗೆ ಚಹಾ ಸೇವಿಸುತ್ತಾ ಕೆಲಹೊತ್ತು ಹರಟಿದರು. ಕುಟುಂಬದವರ ಕುಶಲೋಪರಿ ವಿಚಾರಿಸಿ ಯಾತ್ರೆ ಮುಂದುವರೆಸಿದರು.

ಇದನ್ನೂ ಓದಿ: ಜಾರಕಿಹೊಳಿ ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಿ: ಶಾಸಕ ಮಹೇಶ್ ಕುಮಟಳ್ಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.