ಬಳ್ಳಾರಿ: ಕೊರೊನಾ ವೈರಸ್ ಎಫೆಕ್ಟ್ ನಿಂದ ಲಾಕ್ ಡೌನ್ ಹಿನ್ನೆಲೆ ಜಿಲ್ಲೆಯ ಕುರುಗೋಡು ತಾಲೂಕಿನ ಯರ್ರಂಗಳಿ ಗ್ರಾಮ ಹೊರವಲಯದಲ್ಲಿ ಒಂದೂವರೆ ಎಕರೆಯಲ್ಲಿ ಬೆಳೆದ ಈರುಳ್ಳಿಯನ್ನ ರಾತ್ರೋರಾತ್ರಿ ಕಟಾವು ಮಾಡಿಕೊಂಡು ಕದ್ದೊಯ್ದಿದ್ದಾರೆ.
ಯರ್ರಂಗಳಿ ಗ್ರಾಮದ ರೈತ ಸುನೀಲಕುಮಾರ ಎಂಬವರಿಗೆ ಈ ಹೊಲ ಸೇರಿದ್ದು, ಶನಿವಾರ ಹೊಲಕ್ಕೆ ಹೋಗಿ ಈರುಳ್ಳಿ ಬೆಳೆಯನ್ನ ನೋಡಿ ಬಂದಿದ್ದಾರೆ. ಭಾನುವಾರ ರಾತ್ರಿಯೊಳಗೆ ಈ ಬೆಳೆಯನ್ನ ಕಟಾವು ಮಾಡಿಕೊಂಡು ಪರಾರಿಯಾಗಿದ್ದಾರೆ.
![Onion theft in Bellary](https://etvbharatimages.akamaized.net/etvbharat/prod-images/6718780_177_6718780_1586400858780.png)
ಈ ಮೊದಲು ಹೊಲದಲ್ಲಿ ಮೆಣಸಿನಕಾಯಿ ಬೆಳೆಯಲಾಗಿತ್ತು. ಆದರೆ, ವಿಪರೀತ ಮಳೆ ಸುರಿದ ಕಾರಣ ಮೆಣಸಿನಕಾಯಿ ಸಂಪೂರ್ಣ ಹಾಳಾಗಿ ಹೋಗಿತ್ತು. ಹೀಗಾಗಿ, ಅದನ್ನ ನಾಶಪಡಿಸಿ ಈರುಳ್ಳಿ ಬೆಳೆದಿದ್ದೆ. ಆದರೆ, ಕಟಾವು ಹಂತಕ್ಕೆ ಬಂದಿದ್ದ ಈರುಳ್ಳಿಯನ್ನ ಕೂಲಿಕಾರ್ಮಿಕರು ದೊರಕದ ಕಾರಣ ಕಟಾವಿಗೆ ವಿಳಂಬವಾಗಿತ್ತು. ರಾತ್ರೋ ರಾತ್ರಿ ಈರುಳ್ಳಿ ಕದ್ದಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಸಾಲ ಮಾಡಿ ಬೆಳೆದಿದ್ದೆ. ಉತ್ತಮ ಇಳುವರಿಯೇನೂ ಬಂದಿತ್ತಾದ್ರೂ ಈ ಬೆಳೆ ನಮ್ಮ ಕೈಗೆಟುಕದೇ ಕಳ್ಳರ ಪಾಲಾಗಿದೆ. ಅತ್ತ ಸಾಲ ಮಾಡಿದ ಹಣ ತೀರಿಸದೇ ಇತ್ತ ಬೆಳೆನೂ ಕೈಗೆ ಸಿಗದೆ ಕಂಗಾಲಾಗಿರೋದಾಗಿ ಆ ರೈತ ಸುನೀಲ ಅಳಲನ್ನು ತೋಡಿಕೊಂಡಿದ್ದಾರೆ.