ಬಳ್ಳಾರಿ: 14 ದಿನಗಳಕಾಲ ಕ್ವಾರಂಟೈನ್ ನಲ್ಲಿದ್ದ 46 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಬಳ್ಳಾರಿ ತಾಲೂಕಿನ ಯರಗುಡಿ ಗ್ರಾಮ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಈ ವ್ಯಕ್ತಿಯನ್ನ ಕ್ವಾರಂಟೈನ್ನಲ್ಲಿ ಇಡಲಾಗಿತ್ತು.
ಬಳ್ಳಾರಿಯ ಮಿಲ್ಲರ್ ಪೇಟೆ ನಿವಾಸಿಯಾಗಿರುವ ಅವರು, ಉತ್ತರ ಪ್ರದೇಶ ರಾಜ್ಯದ ಮಥುರಾ ನಗರಕ್ಕೆ ಪ್ರಯಾಣ ಬೆಳೆಸಿ ಬಳ್ಳಾರಿಗೆ ವಾಪಸ್ ಆಗಿದ್ದರು. ಆತನೊಂದಿಗೆ ಹೋಗಿದ್ದ ಸ್ನೇಹಿತನಿಗೂ ಕೂಡ ಸೋಂಕು ದೃಢಪಟ್ಟಿದೆ.
ಹೀಗಾಗಿ, ಗಣಿ ಜಿಲ್ಲೆಯಲ್ಲಿ ಪಾಸಿಟಿವ್ ಕೇಸ್ ಗಳ ಸಂಖ್ಯೆ 38 ಕ್ಕೇರಿದೆ. ಈವರೆಗೂ 16 ಮಂದಿ ಗುಣಮುಖರಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ.
ಉತ್ತರ ಪ್ರದೇಶ ರಾಜ್ಯದ ಮಥುರಾ ನಗರದಿಂದ ಬಳ್ಳಾರಿಗೆ ವಾಪಸ್ ಆದಾಗ ಈ ವ್ಯಕ್ತಿಯ ಗಂಟಲು ದ್ರವ ಹಾಗೂ ರಕ್ತದ ಮಾದರಿ ಮಾದರಿ ತೆಗೆದುಕೊಂಡು ಪರೀಕ್ಷೆಗಾಗಿ ಲ್ಯಾಬ್ ಗೆ ಕಳುಹಿಸಿಕೊಡಲಾಗಿತ್ತು. ನಿನ್ನೆಯ ಸಂಜೆ ಪಾಸಿಟಿವ್ ವರದಿ ಬಂದಿದ್ದರಿಂದ ಸೋಂಕಿತನನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್. ಜನಾರ್ದನ ತಿಳಿಸಿದ್ದಾರೆ.