ಬಳ್ಳಾರಿ : ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ ಗ್ರಾಮದ ಶ್ರೀ ಮೈಲಾರ ಲಿಂಗೇಶ್ವರನ ಕಾರ್ಣಿಕೋತ್ಸವ ಇಂದು ಸಂಜೆ ನಡೆಯಬೇಕಿತ್ತು. ಆದರೆ, ಕಾರ್ಣಿಕ ಮುನ್ನವೇ ಶಿಬಾರದ ತ್ರಿಶೂಲ ಕಳಚಿ ಬಿದ್ದಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹೂವಿನ ಹಡಗಲಿ ತಾಲೂಕಿನ ಶ್ರೀಮೈಲಾರ ಲಿಂಗೇಶ್ವರ ದೇಗುಲದ ಮಹಾದ್ವಾರ ಮಂಭಾಗದ ಶಿಬಾರ ತ್ರಿಶೂಲ ಕಳಚಿ ನೆಲಕ್ಕೆ ಬಿದ್ದಿದೆ. ಮೈಲಾರ ಲಿಂಗೇಶ್ವರನ ಜಾತ್ರೆಗೆ ಮುನ್ನವೇ ನಡೆದ ಅ ಘಟನೆ ಸಾವಿರಾರು ಭಕ್ತರ ಮನದಲ್ಲಿ ತಲ್ಲಣ ಉಂಟು ಮಾಡಿದೆ.
ಶಿಬಾರದ ಕಳಸ ಭಗ್ನವಾಗುತ್ತಿದ್ದಂತೆ ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಎಸಿ ಪ್ರಕಾಶ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳೀಯರು ಮತ್ತು ಭಕ್ತರು ಇದು ಅಪಶಕುನ. ನೀವು ಐತಿಹಾಸಿಕ ಪದ್ಧತಿಯಂತೆ ಜಾತ್ರೆ ಮಾಡಲು ಅವಕಾಶ ನೀಡಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು, ಭಗ್ನಗೊಂಡಿರುವ ಶಿಬಾರದ ಕಳಸವನ್ನು ಸಂಪ್ರದಾಯದ ಪ್ರಕಾರ ಪ್ರತಿಷ್ಠಾಪನೆ ಮಾಡಿ ಎಂದು ಸಹಾಯಕ ಆಯುಕ್ತರಿಗೆ (ಎಸಿ) ಭಕ್ತರು ಮನವಿ ಮಾಡಿದ್ದಾರೆ.