ವಿಜಯನಗರ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವರಲಹಳ್ಳಿಯ ಕೋವಿಡ್ ಕೇರ್ ಸೆಂಟರ್ನಲ್ಲಿ ನಿನ್ನೆ ರಾತ್ರಿ ಅಧಿಕಾರಿಗಳು ಹಾಡಿಗೆ ಹೆಜ್ಜೆ ಹಾಕಿ, ರೋಗಿಗಳಲ್ಲಿ ಮನೋಸ್ಥೈರ್ಯ ಹೆಚ್ಚಿಸುವ ಕಾರ್ಯ ಮಾಡಿದ್ದಾರೆ.
ಕೋವಿಡ್ ಕೇರ್ ಸೆಂಟರ್ನಲ್ಲಿ ‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ..’ ಹಾಡಿಗೆ ಅಧಿಕಾರಿಗಳು ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಕೋವಿಡ್ ಕೇರ್ ಸೆಂಟರ್ನಲ್ಲಿ ರೋಗಿಗಳು ಭಯಭೀತರಾಗಿರುತ್ತಾರೆ. ಇದನ್ನು ಹೋಗಲಾಡಿಸಲು ಅಧಿಕಾರಿಗಳು ನೃತ್ಯ ಮಾಡಿ ರಂಜಿಸಿದ್ದಾರೆ.
ತಹಶೀಲ್ದಾರ್ ಶರಣಮ್ಮ, ತಾ.ಪಂ. ಇಒ ಹಾಲಸಿದ್ದಪ್ಪ, ಬಿಇಒ, ಕೃಷಿ ಅಧಿಕಾರಿ, ಟಿಎಚ್ಒ ಡಾ. ಶಿವರಾಜ್ ಕೊರೊನಾ ಸೋಂಕಿತರಿಗೆ ಮನೋಸ್ಥೈರ್ಯ ತುಂಬಲು ಕುಣಿದು ಕುಪ್ಪಳಿಸಿದರು.