ಬಳ್ಳಾರಿ: ಜಿಲ್ಲೆಯ ಕೋಟಾಲಪಲ್ಲಿಯ ಕೊಳಚೆ ಪ್ರದೇಶದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ವತಿಯಿಂದ ಬಡವರ ಮನೆಬಾಗಿಲಿಗೆ ತೆರಳಿ ಪಡಿತರ ಚೀಟಿಯನ್ನು ವಿತರಿಸಲಾಯಿತು.
ಮೂರು ವರ್ಷಗಳಿಂದ ಪಡಿತರ ಚೀಟಿಗಾಗಿ ಪರಿತಪಿಸುತ್ತಿದ್ದ ಮತ್ತು ಕಚೇರಿಗೆ ಅಲೆದು ಸುಸ್ತಾಗಿದ್ದ ಕೋಟಾಲಪಲ್ಲಿಯ 81 ವರ್ಷದ ಮುತ್ಯಾಲಮ್ಮನ ಅವರಿಗೆ ಮನೆ ಬಾಗಿಲಿನಲ್ಲೇ ಪಡಿತರ ಚೀಟಿ ದೊರಕಿದೆ. ಇದೇ ರೀತಿ ಅನೇಕ ಜನರಿಗೆ ಮನೆ ಬಾಗಿಲಿಗೆ ತೆರಳಿ ಪಡಿತರ ಚೀಟಿಯನ್ನು ನೀಡಲಾಯಿತು.
ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲಾಗದವರಿಂದ ಸ್ಥಳದಲ್ಲಿಯೇ ಆನ್‍ಲೈನ್ ಅರ್ಜಿಗಳನ್ನು ಸ್ವೀಕರಿಸಿ, ಹೊಸ ಪಡಿತರ ಚೀಟಿಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು. ಈಗಾಗಲೇ ಅರ್ಜಿ ಸಲ್ಲಿಸಿದ್ದವರ ಅರ್ಜಿಗಳನ್ನು ಇದೇ ಸಂದರ್ಭದಲ್ಲಿ ವಿಲೇವಾರಿ ಮಾಡಿ, ಪಡಿತರ ಚೀಟಿಗಳಲ್ಲಿ ತಿದ್ದುಪಡಿಗಳನ್ನು ಅಧಿಕಾರಿಗಳು ಮಾಡಿದ್ರು.