ಹೊಸಪೇಟೆ(ವಿಜಯನಗರ): ಹಳ್ಳದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ್ದ ಕೃಷಿ ಹೊಂಡ ತೆರವು ಕಾರ್ಯ ಹಗರಿಬೊಮ್ಮನಹಳ್ಳಿಯ ವಟ್ಟಮ್ಮನ ಹಳ್ಳಿಯಲ್ಲಿ ನಿನ್ನೆ ಸಂಜೆ ನಡೆಯಿತು. ತಹಶೀಲ್ದಾರ್ ಅವರು ಸ್ಥಳಕ್ಕೆ ಭೇಟಿ ನೀಡಿ, ಅವೈಜ್ಞಾನಿಕ ಹೊಂಡವನ್ನು ತೆರವುಗೊಳಿಸಿದರು. ಇದೇ ಸಂದರ್ಭದಲ್ಲಿ ಕಾನೂನನ್ನು ಯಾರೂ ಉಲ್ಲಂಘನೆ ಮಾಡುವಂತಿಲ್ಲ ಎಂದು ರೈತರಿಗೆ ಸೂಚನೆ ನೀಡಿದರು.
ಘಟನೆ ಹಿನ್ನೆಲೆ : ಅವೈಜ್ಞಾನಿಕ ಕೃಷಿ ಹೊಂಡದಿಂದ ಮೂರು ಎಕರೆ ಪಪ್ಪಾಯಿ ಬೆಳೆ ನೀರಿನಲ್ಲಿ ಕೊಚ್ಚಕೊಂಡು ಹೋದ ಘಟನೆ ವಟ್ಟಮ್ಮನ ಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿತ್ತು. ರೈತ ವೀರೇಶ್ ಅವರು ನಷ್ಟ ಅನುಭವಿಸಿ ಕಣ್ಣೀರು ಹಾಕಿದ್ದರು. ಹಳ್ಳದಲ್ಲಿ ಅವೈಜ್ಞಾನಿಕ ಕೃಷಿ ಹೊಂಡವನ್ನು ನಿರ್ಮಾಣ ಮಾಡಲಾಗಿದೆ. ಹಾಗಾಗಿ, ಹೊಲಕ್ಕೆ ನೀರು ನುಗ್ಗಿದೆ. ಇದರಿಂದ ಬೆಳೆದು ನಿಂತಿದ್ದ ಪಪ್ಪಾಯಿ ಬೆಳೆ ನೀರಿನಿಂದ ಕೊಚ್ಚಿಕೊಂಡು ಹೋಗಿತ್ತು.
ಇದನ್ನೂ ಓದಿ: ಸರ್ಕಾರಿ ಹಳ್ಳದಲ್ಲಿ ಅವೈಜ್ಞಾನಿಕವಾಗಿ ಕೃಷಿ ಹೊಂಡ ನಿರ್ಮಾಣ; 3 ಎಕರೆ ಪಪ್ಪಾಯಿ ಗಿಡ ನೆಲಸಮ
ಈ ಕುರಿತು ಜುಲೈ 7ರಂದು ಈಟಿವಿ ಭಾರತದಲ್ಲಿ ''ಸರ್ಕಾರಿ ಹಳ್ಳದಲ್ಲಿ ಕೃಷಿ ಹೊಂಡ ನಿರ್ಮಾಣ; ಮೂರು ಎಕರೆ ಪಪ್ಪಾಯಿ ಗಿಡ ನೆಲಸಮ'' ಎಂಬ ತಲೆ ಬರಹದಡಿಯಲ್ಲಿ ಸುದ್ದಿ ಪ್ರಕಟಿಸಲಾಗಿತ್ತು.