ವಿಜಯನಗರ: ಬೆಳೆ ಹಾನಿ, ಬೆಲೆ ಕುಸಿತ ಮೊದಲಾದ ಕಾರಣಗಳಿಂದ ಸಂಕಷ್ಟದಲ್ಲಿರುವ ವಿಜಯನಗರ ಜಿಲ್ಲೆಯ ರೈತರು ಇದೀಗ ಮತ್ತೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಜಿಲ್ಲೆಯ ಹೊಸಪೇಟೆ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ತಾಲೂಕಿನ 400 ಕ್ಕೂ ಹೆಚ್ಚು ರೈತರಿಗೆ ಸಾಲ ಮರು ಪಾವತಿಸುವಂತೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪದೆ ಪೆದೇ ನೋಟಿಸ್ ನೀಡುತ್ತಿದೆಯಂತೆ. ಕೊನೆಯ ಹಂತದ ಎಚ್ಚರಿಕೆಯ ಭಾಗವಾಗಿ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ನೋಟಿಸ್ ಕಳುಹಿಸಿರುವುದು ರೈತಾಪಿ ವಲಯದ ಆತಂಕಕ್ಕೆ ಕಾರಣವಾಗಿದೆ.
ಕಳೆದ ವರ್ಷವೂ ಅಕಾಲಿಕ ಮಳೆಗೆ ಬೆಳೆ ಸಂಪೂರ್ಣ ನಾಶವಾಗಿತ್ತು. ಹೀಗಾಗಿ ಅಸಲು, ಬಡ್ಡಿ ಮರುಪಾವತಿ ಸಾಧ್ಯ ಆಗ್ತಿಲ್ಲ. ಇದೀಗ ಚಕ್ರಬಡ್ಡಿ ರೂಪದಲ್ಲಿ ಸಾಲ ದುಪ್ಪಟ್ಟಾಗಿದೆ. ಕಷ್ಟದ ಪರಿಸ್ಥಿತಿಯಲ್ಲೂ ಸಾಲ ಮರುಪಾವತಿ ಮಾಡ್ತೇವೆ. ಆದ್ರೆ, ಬಡ್ಡಿಗೆ ವಿನಾಯಿತಿ ನೀಡಿ ಎಂದರೆ ಬ್ಯಾಂಕ್ ನವರು ಕೇಳುತ್ತಿಲ್ಲ ಎಂದು ಆರೋಪಿಸಿದರು.
ಇದರಿಂದ ಕಂಗೆಟ್ಟಿರುವ ರೈತರು ಹೊಸಪೇಟೆಯಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಬ್ಯಾಂಕ್ನವರ ಈ ನಿಯಮಕ್ಕೆ ತಡೆಯೊಡ್ಡಬೇಕು ಎಂದು ಮನವಿ ಮಾಡಿದ್ದಾರೆ. ಬ್ಯಾಂಕ್ನಿಂದ ರೈತರಿಗೆ ನೋಟಿಸ್ ಕೊಟ್ಟಿರುವ ವಿಚಾರ ಗಮನಕ್ಕೆ ಬಂದಿದ್ದು, ಈ ಕುರಿತಂತೆ ಜಿಲ್ಲಾ ಲೀಡ್‌ಬ್ಯಾಂಕ್ ನ ಅಧಿಕಾರಿಗಳ ಜೊತೆ ಚರ್ಚೆಸಿ ರೈತರ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತದಿಂದ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು ವಿಮಾನ ದುರಂತಕ್ಕೆ 12 ವರ್ಷ : ಜಿಲ್ಲಾಡಳಿತದಿಂದ ಶ್ರದ್ಧಾಂಜಲಿ ಅರ್ಪಣೆ