ETV Bharat / state

ಬಳ್ಳಾರಿಯಲ್ಲಿ ತಲೆ ಎತ್ತಿದ ಹೊನ್ನೂರಸ್ವಾಮಿ ದೇಗುಲ: ಇದು ಸರ್ವಧರ್ಮೀಯರ ದೇಣಿಗೆಯ ಫಲ - New masjid inauguration in jaalihalu village

ಮೊಹರಂ ಹಬ್ಬ ಮುಸ್ಲಿಂ ಧರ್ಮೀಯರ ಹಬ್ಬವಾದರೂ, ಹಿಂದೂಗಳೇ ಹೆಚ್ಚಾಗಿ ಆಚರಿಸುತ್ತಾರೆ. ಇದರಿಂದ ಈ ನಾಡಿನಲ್ಲಿ ಹಿಂದೂ - ಮುಸ್ಲಿಂ ಧರ್ಮೀಯರ ಭಾವೈಕ್ಯತೆ ಹೆಚ್ಚುತ್ತಿದೆ ಎಂದು ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

Honnuraswamy Dargah
ಹೊನ್ನೂರಸ್ವಾಮಿ ದರ್ಗಾ
author img

By

Published : Aug 9, 2021, 9:06 PM IST

Updated : Aug 11, 2021, 9:32 AM IST

ಬಳ್ಳಾರಿ: ಮೊಹರಂ ಹಬ್ಬದ ಪ್ರಯುಕ್ತ ತಾಲೂಕಿನ ಗಡಿಭಾಗಕ್ಕೆ ಹೊಂದಿಕೊಂಡಿರುವ ಮೋಕಾ ಹೋಬಳಿ ವ್ಯಾಪ್ತಿಯ ಜಾಲಿಹಾಳು ಗ್ರಾಮದಲ್ಲಿಂದು ನೂತನ ಹೊನ್ನೂರ ಸ್ವಾಮಿ ದೇಗುಲ ತಲೆಎತ್ತಿದೆ‌.

ತಾಲೂಕಿನ ಜಾಲಿಹಾಳು ಗ್ರಾಮದ ಲಿಂಗಾಯತ ಸಮುದಾಯದ ಹತ್ತಾರು ಮಂದಿ ಭಕ್ತರು ನೀಡಿದ ಅಂದಾಜು 30 ಲಕ್ಷ ರೂ.ಗಳ ದೇಣಿಗೆ ಸಹಯೋಗದಲ್ಲಿ ಈ‌ ದೇಗುಲ ನಿರ್ಮಾಣ ಮಾಡಲಾಗಿದೆ. ಈ ದಿನದಂದು ತಾಲೂಕಿನ ಹೆಬ್ಬಾಳು ಬೃಹನ್ಮಠದ ಷ.ಬ್ರ. ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಈ ನೂತನ ದೇಗುಲಕ್ಕೆ ಚಾಲನೆ ನೀಡಿದರು.

Nagabhushana Shivacharya Swamiji
ನೂತನ ದೇಗುಲಕ್ಕೆ ಚಾಲನೆ ನೀಡಿದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ

ಜಾಲಿಹಾಳು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಹೊನ್ನೂರಸ್ವಾಮಿ ದೇಗುಲಕ್ಕೆ ಚಾಲನೆ‌ ನೀಡೋ ಮುಖೇನ ಈ ಬಾರಿ ಮೊಹರಂ ಸಂಭ್ರಮಕ್ಕೆ ಬಹಳ‌‌ ಅರ್ಥಪೂರ್ಣವಾಗಿ ಮುನ್ನುಡಿ ಬರೆದಿದ್ದಾರೆ.

Nagabhushana Shivacharya Swamiji
ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ

ನೂತನ ಹೊನ್ನೂರಸ್ವಾಮಿ ದೇಗುಲಕ್ಕೆ ಚಾಲನೆ ನೀಡಿದ ನಂತರ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಮೊಹರಂ ಹಬ್ಬ ಮುಸ್ಲಿಂ ಧರ್ಮೀಯರ ಹಬ್ಬವಾದರೂ, ಹಿಂದೂಗಳೇ ಹೆಚ್ಚಾಗಿ ಆಚರಿಸುತ್ತಾರೆ. ಇದರಿಂದ ಈ ನಾಡಿನಲ್ಲಿ ಹಿಂದೂ-ಮುಸ್ಲಿಂ ಧರ್ಮೀಯರ ಭಾವೈಕ್ಯತೆ ಇನ್ನೂ ಹೆಚ್ಚುತ್ತಿದೆ ಎಂದರು.

ಓದಿ: ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ: ಹುಬ್ಬಳ್ಳಿ ಹುಡುಗನ ಅತ್ಯುತ್ತಮ ಸಾಧನೆ

Last Updated : Aug 11, 2021, 9:32 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.