ETV Bharat / state

ಮುಂದಿನ ದಿನಗಳಲ್ಲಿ ಅಸ್ಪೃಶ್ಯತೆ ಮತ್ತೆ ತನ್ನ ಗತವೈಭವ ಮೆರೆಯಲಿದೆ: ಸಾಹಿತ್ಯ ಅಕಾಡೆಮಿ ರಾಜ್ಯಾಧ್ಯಕ್ಷ - ಸಂವಿಧಾನದಿಂದ ಏಳ್ಗೆ

ಸಂವಿಧಾನದಿಂದ ಏಳ್ಗೆ ಕಂಡವರು ತುಟಿಪಿಟಿಕ್ ಎನ್ನದೇ ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಅಂಬೇಡ್ಕರ್ ಅಂದರೆ ಏನು ಎಂಬುದನ್ನ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಿದೆ. ವ್ಯವಸ್ಥೆಯಲ್ಲಿ ಸಂವಿಧಾನದ ದುರುಪಯೋಗ ತಡೆಯುವುದಕ್ಕೆ ಚಿಂತಿಸಬೇಕಿದೆ. ಇಲ್ಲದಿದ್ದರೇ ಮುಂದಿನ ದಿನಮಾನಗಳಲ್ಲಿ ಅಸ್ಪೃಶ್ಯತೆ ಮತ್ತೆ ತನ್ನ ಗತವೈಭವ ಮೆರೆಯಲಿದೆ ಎಂದು ದಲಿತ ಸಾಹಿತ್ಯ ಅಕಾಡೆಮಿ ರಾಜ್ಯಾಧ್ಯಕ್ಷ ಚೆಲುವರಾಜು ಅಭಿಪ್ರಾಯಿಸಿದರು.

ಮುಂದಿನ ದಿನಮಾನಗಳಲ್ಲಿ ಅಸ್ಪೃಶ್ಯತೆ ಮತ್ತೆ ತನ್ನ ಗತವೈಭವ ಮೆರೆಯಲಿದೆ
author img

By

Published : Sep 3, 2019, 1:29 AM IST

ಬಳ್ಳಾರಿ: ಇತ್ತಿಚಿನ ದಿನಗಳಲ್ಲಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತಿದೆ. ಇದರಿಂದ ಸಂವಿಧಾನದ ಆಶಯವೇ ಮಣ್ಣು ಪಾಲಾಗುತ್ತಿದೆ ಎಂದು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ರಾಜ್ಯಾಧ್ಯಕ್ಷ ಚೆಲುವರಾಜು ಬೇಸರ ವ್ಯಕ್ತ ಪಡಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದ ಒಳ ಸಭಾಂಗಣದಲ್ಲಿ ನಡೆದ ಸಂವಿಧಾನ ಮತ್ತು ಡಾ‌.ಬಿ.ಆರ್ ಅಂಬೇಡ್ಕರ್ ಅವರ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಸಹಯೋಗ ಮತ್ತು ಸಮಸಮಾಜ ನಿರ್ಮಾಣ ಸಂಸ್ಥೆ ನೇತೃತ್ವದಲ್ಲಿ ಸಮಗ್ರ ರಾಷ್ಟ್ರಾಭಿವೃದ್ಧಿ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು, ಸಂವಿಧಾನದಿಂದ ಏಳ್ಗೆ ಕಂಡವರು ತುಟಿಪಿಟಿಕ್ ಎನ್ನದೇ ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಅಂಬೇಡ್ಕರ್ ಅಂದರೆ ಏನು ಎಂಬುದನ್ನ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಿದೆ. ವ್ಯವಸ್ಥೆಯಲ್ಲಿ ಸಂವಿಧಾನದ ದುರುಪಯೋಗ ತಡೆಯುವುದಕ್ಕೆ ಚಿಂತಿಸಬೇಕಿದೆ. ಇಲ್ಲದಿದ್ದರೇ ಮುಂದಿನ ದಿನಮಾನಗಳಲ್ಲಿ ಅಸ್ಪೃಶ್ಯತೆ ಮತ್ತೆ ತನ್ನ ಗತವೈಭವ ಮೆರೆಯಲಿದೆ ಎಂದು ಅಭಿಪ್ರಾಯಿಸಿದರು.

ಸಂವಿಧಾನ ಮತ್ತು ರಾಷ್ಟ್ರಾಭಿವೃದ್ಧಿ ವಿಷಯದ ಬಗ್ಗೆ ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಡಾ.ಆರ್ ಮೋಹರ್ ರಾಜ್ ಮಾತನಾಡಿ, ಈ ದೇಶದಲ್ಲಿ ಅಲ್ಪಸಂಖ್ಯಾತ, ದಲಿತರು, ಹಿಂದುಳಿದ ವರ್ಗದವರು ಡಾ.ಬಿ.ಆರ್ ಅಂಬೇಡ್ಕರ್ ಅವರ ಮೀಸಲಾತಿ ಪಡೆದು ಅವರಿಗೆ ಮೋಸ ಮಾಡುತ್ತಿದ್ದಾರೆ ಎಂದು ಎಂದು ದೂರಿದರು.

Intro:ಇತ್ತಿಚಿನ ದಿನಗಳಲ್ಲಿ ವ್ಯವಸ್ಥೆಯಲ್ಲಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತಿದೆ. ಇದರಿಂದ ಸಂವಿಧಾನದ ಆಶಯವೇ ಮಣ್ಣು ಪಾಲಾಗುತ್ತಿದೆ ಎಂಬ ಮನೋಭಾವ ವ್ಯಕ್ತವಾಗುತ್ತಿದೆ ಎಂದು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ರಾಜ್ಯಾಧ್ಯಕ್ಷ ಚೆಲುವರಾಜು ಬೇಸರ ವ್ಯಕ್ತ ಪಡಿಸಿದರು.

ಬೈಟ್ :-

( ವಿಚಾರ ಸಂಕಿರಣ )

೧.)
ಡಾ.ಆರ್ ಮೋಹರ್ ರಾಜ್.
ದಲಿತ ಸಂಘಟನೆಗಳ ಒಕ್ಕೂಟದ
ರಾಜ್ಯ ಸಂಚಾಲಕ.

Body:
ನಗರದ ಜಿಲ್ಲಾ ಕ್ರೀಡಾಂಗಣದ ಒಳ ಸಭಾಂಗಣದಲ್ಲಿ ಇಂದು ನಡೆದ ಸಂವಿಧಾನ ಮತ್ತು ಡಾ‌.ಬಿ.ಆರ್ ಅಂಬೇಡ್ಕರ್ ಅವರ
ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಸಹಯೋಗ ಮತ್ತು ಸಮಸಮಾಜ ನಿರ್ಮಾಣ ಸಂಸ್ಥೆ ನೇತೃತ್ವದಲ್ಲಿ ಸಮಗ್ರ ರಾಷ್ಟ್ರಾಭಿವೃದ್ಧಿ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು
ಸಂವಿಧಾನದಿಂದ ಏಳ್ಗೆ ಕಂಡವರು ತುಟಿಪಿಟಿಕ್ ಎನ್ನದೇ ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಅಂಬೇಡ್ಕರ್ ಅಂದರೇ ಏನು ಎಂಬುದನ್ನ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಿದೆ. ವ್ಯವಸ್ಥೆಯಲ್ಲಿ ಸಂವಿಧಾನದ ದುರುಪಯೋಗ ತಡೆಯುವುದಕ್ಕೆ ಚಿಂತಿಸಬೇಕಿದೆ. ಇಲ್ಲದಿದ್ದರೇ ಮುಂದಿನ ದಿನಮಾನಗಳಲ್ಲಿ ಅಸ್ಪಶ್ಯತೆ ಮತ್ತೆ ತನ್ನ ಗತವೈಭವ ಮೆರೆಯಲಿದೆ ಎಂದರು.

ವಿಚಾರ ಸಂಕಿರಣ:-

ಸಂವಿಧಾನ ಮತ್ತು ರಾಷ್ಟ್ರಾಭಿವೃದ್ಧಿ ವಿಷಯದ ಬಗ್ಗೆ ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಡಾ.ಆರ್ ಮೋಹರ್ ರಾಜ್ ಮಾತನಾಡಿದ ಅವರು ಈ ದೇಶದಲ್ಲಿ ಅಲ್ಪಸಂಖ್ಯಾತ, ದಲಿತರು, ಹಿಂದುಳಿದ ವರ್ಗದವರು ಡಾ.ಬಿ.ಆರ್ ಅಂಬೇಡ್ಕರ್ ಅವರ ಮೀಸಲಾತಿ ಪಡೆದು ಅವರಿಗೆ ಮೋಸ ಮಾಡುವವನ್ನು ಮಾಡುತ್ತಿದ್ದಾರೆ ಎಂದು ದೂರಿದರು.

ಆರ್.ಎಸ್.ಎಸ್ ಅವರ ಕೈಗೆ ಸಿಕ್ಕರೇ ಯುವಕರು ಬದಲಾಗುವುದಿಲ್ಲ ಎಂದರು. ಶಿಕ್ಷಣ, ಮೀಸಲಾತಿ, ರಾಜಕೀಯ ಇನ್ನಿತರ ಅಂಶಗಳನ್ನು ಡಾ.ಬಿ.ಆರ್ ಅಂಬೇಡ್ಕರ್ ಅವರು ಈ ಸೌಲಭ್ಯ ಕ್ಕಾಗಿ ಹೋರಾಟ ಮಾಡಿದ್ದಾರೆ ಎಂದು ತಿಳಿಸಿದರು.
ಬ್ರಾಹ್ಮಣರೆಲ್ಲಾ ಬ್ರಾಹ್ಮಣವಾದಿಗಲ್ಲ, ದಲಿತರೆಲ್ಲಾ ದಲಿತವಾದಿಗಲ್ಲಾ ಎಂದು ತಿಳಿಸಿದರು.

ಇಂದಿನ ದಿನಗಳಲ್ಲಿ ಚಳುವಳಿಗಳಲ್ಲಿ ಗುಲಾಮಗಿರಿ ನಡೆಯುತ್ತಾ ಇದೆ ಎಂದು ತಿಳಿಸಿದರು. ಸಂವಿಧಾನವನ್ನು ನ್ಯಾಯಾಧೀಶರು, ನ್ಯಾಯವಾದಿಗಲೇ ಓದಿಲ್ಲ ಎಂದು ಡಾ.ಆರ್ ಮೋಹರ್ ರಾಜ್ ಆರೋಪಿಸಿದರು.

Conclusion:
ಈ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪಜಾ ಮತ್ತು ಪಪಂ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ.ಶಿವಶಂಕರ್, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಕರ್ನಾಟಕ ರಾಜ್ಯ ಘಟಕದ ರಾಜ್ಯ ಉಪಾಧ್ಯಕ್ಷೆ ಎನ್.ಡಿ ವೆಂಕಮ್ಮ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ, ಎಸ್.ಚಿದಾನಂದ, ನಾಡೋಜ ಸುಭದ್ರಮ್ಮ ಮನ್ಸೂರ್, ಜಿ.ಶಿವಕುಮಾರ್, ಉಲ್ಲಾಸ್ ಮತ್ತು ನೂರಾರು ವಿದ್ಯಾರ್ಥಿಗಳು ಹಾಜರಿದ್ದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.