ಬಳ್ಳಾರಿ: ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ದಿನದ ನಿಮಿತ್ತ ಬಳ್ಳಾರಿ ಚಾರಿಟಬಲ್ ಟ್ರಸ್ಟ್ನಿಂದ ನಗರದಲ್ಲಿ ಹೆಲ್ಮೆಟ್ ಜಾಗೃತಿ ಜಾಥಾ ನಡೆಸಲಾಯಿತು.
ನಗರದ ಕನಕದುರ್ಗಮ್ಮ ದೇಗುಲದ ಆವರಣದಲ್ಲಿಂದು ನಡೆಸಿದ ಈ ಹೆಲ್ಮೆಟ್ ಜಾಗೃತಿ ಅಭಿಯಾನಕ್ಕೆ ಎಸ್ಪಿ ಸೈದುಲು ಅಡಾವತ್, ಎಎಸ್ಪಿ ಡಿ.ಲಾವಣ್ಯ, ಸಂಚಾರಿ ಠಾಣೆಯ ಸಿಪಿಐ ನಾಗರಾಜ ಮಡವಳ್ಳಿ ಅವರು ಹಸಿರು ನಿಶಾನೆ ತೋರುವ ಮುಖೇನ ಚಾಲನೆ ನೀಡಿದರು.
ಡಿವೈಎಸ್ಪಿ ರಮೇಶ ಕುಮಾರ, ಡಿಆರ್ಎ ಡಿವೈಎಸ್ಪಿ ಸರ್ದಾರ್, ಸಿಪಿಐಗಳಾದ ನಾಗರಾಜ, ವಾಸು ಕುಮಾರ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು. ಸಂಜೀವಿನಿ ಬಳ್ಳಾರಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ಎಂ.ಪ್ರಭಂಜನ ಕುಮಾರ್ ಅವರಿಂದ ಅಂದಾಜು ಸಾವಿರಕ್ಕೂ ಅಧಿಕ ಹೆಲ್ಮೆಟ್ ವಿತರಣೆ ಮಾಡಲಾಯಿತು.
ಇನ್ನು ಎಎಸ್ಪಿ ಲಾವಣ್ಯ, ಸಂಚಾರಿ ಠಾಣೆಯ ಸಿಪಿಐ ನಾಗರಾಜ ಮಡವಳ್ಳಿ ಹೆಲ್ಮೆಟ್ ಧರಿಸಿ ಬೈಕ್ ರೈಡಿಂಗ್ ಮಾಡುವ ಮುಖೇನ ವಿಶೇಷ ಗಮನ ಸೆಳೆದರು.